ದ್ವಿತೀಯ ಪಿಯುಸಿ ಪಾಸಾದವರಿಗೆ ರೈಲ್ವೆಯಲ್ಲಿ ಯಾವೆಲ್ಲ ಹುದ್ದೆಗಳಿವೆ? ವೇತನ ಎಷ್ಟು ಸಿಗಲಿದೆ? ವಿವರ ಇಲ್ಲಿದೆ ನೋಡಿ..
ಹೈಲೈಟ್ಸ್:
- ಪಿಯುಸಿ ಪಾಸಾದವರಿಗೆ ರೈಲ್ವೆ ಜಾಬ್ಗಳಾವುವು?
- ರೈಲ್ವೆಯಲ್ಲಿ ಪಿಯುಸಿ ಅರ್ಹತೆಯವರಿಗೆ ವೇತನ ಎಷ್ಟು?
- ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಭಾರತೀಯ ರೈಲ್ವೆ ಇಲಾಖೆಯು ಮುಂದಿನ ಜುಲೈ ಹಾಗೂ ಸೆಪ್ಟೆಂಬರ್ ತಿಂಗಳ ನಡುವೆ ಹಲವು ನೇಮಕ ಅಧಿಸೂಚನೆಗಳನ್ನು ಬಿಡುಗಡೆ ಮಾಡಲಿದೆ. ಅವುಗಳ ಪೈಕಿ ದ್ವಿತೀಯ ಪಿಯುಸಿ ಪಾಸಾದವರಿಗೆ ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ – ಪದವಿಗಿಂತ ಕೆಳಹಂತದ ಅರ್ಹತೆಯ ಹುದ್ದೆಗಳಿಗೆ ಸಹ ನೇಮಕ ನೋಟಿಫಿಕೇಶನ್ ಬಿಡುಗಡೆ ಮಾಡುವ ಕುರಿತು ತನ್ನ ನೇಮಕಾತಿ ಕ್ಯಾಲೆಂಡರ್ನಲ್ಲಿ ಮಾಹಿತಿ ನೀಡಿದೆ.
ಈ ಹಿನ್ನೆಲೆಯಲ್ಲಿ ಈ ವರ್ಷ ದ್ವಿತೀಯ ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಬಹುದಾದ ಹಾಗೂ ಈಗಾಗಲೇ ಈ ಅರ್ಹತೆ ಪಡೆದಿದ್ದು, ನಿರುದ್ಯೋಗಿಗಳಾಗಿರುವ, ಕೇಂದ್ರ ಸರ್ಕಾರಿ / ರೈಲ್ವೆ ಇಲಾಖೆಯ ಉದ್ಯೋಗ ಆಕಾಂಕ್ಷಿಗಳ ಮಾಹಿತಿಗಾಗಿ, 12th ಪಾಸಾದವರಿಗೆ ಯಾವೆಲ್ಲ ಹುದ್ದೆಗಳು ರೈಲ್ವೆ ಇಲಾಖೆಯಲ್ಲಿವೆ ? ಅವರಿಗೆ ವೇತನ ಎಷ್ಟು ಸಿಗಲಿದೆ ಎಂದು ಈ ಕೆಳಗಿನಂತೆ ತಿಳಿಸಲಾಗಿದೆ.
12th ಪಾಸಾದವರಿಗೆ ರೈಲ್ವೆಯಲ್ಲಿ ಯಾವೆಲ್ಲ ಹುದ್ದೆಗಳಿವೆ?
ರೈಲ್ವೆಯಲ್ಲಿ ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿಯಲ್ಲಿ ಲೆವೆಲ್ 2 ಹಾಗೂ ಲೆವೆಲ್ 3 ಹುದ್ದೆಗಳಾದ – ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್, ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್, ಜೂನಿಯರ್ ಟೈಮ್ ಕೀಪರ್, ಟ್ರೈನ್ಸ್ ಕ್ಲರ್ಕ್, ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್, ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್, ಗೂಡ್ಸ್ ಗಾರ್ಡ್, ಸೀನಿಯರ್ ಟೈಮ್ ಕೀಪರ್ ಹುದ್ದೆಗಳಿವೆ.
12th ಪಾಸಾದವರಿಗೆ ಇರುವ ರೈಲ್ವೆ ಹುದ್ದೆಗಳಿಗೆ ವೇತನ ಎಷ್ಟು ?
ಈ ಹುದ್ದೆಗಳಿಗೆ 7ನೇ ವೇತನ ಆಯೋಗದ ಲೆವೆಲ್ 2, 3 ಸಂಭಾವನೆ ಇರುತ್ತದೆ. ಮೇಲೆ ತಿಳಿಸಿದಂತಹ ಹುದ್ದೆಗಳಿಗೆ ಬೇಸಿಕ್ ಪೇ ಈ ಕೆಳಗಿನಂತೆ ಇರಲಿದೆ.
ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ (ಲೆವೆಲ್ 2) : Rs.19,900.
ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್ (ಲೆವೆಲ್ 2) : Rs.19,900.
ಜೂನಿಯರ್ ಟೈಮ್ ಕೀಪರ್ (ಲೆವೆಲ್ 2) : Rs.19,900.
ಟ್ರೈನ್ಸ್ ಕ್ಲರ್ಕ್ (ಲೆವೆಲ್ 2) : Rs.19,900.
ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್ (ಲೆವೆಲ್ 3) : Rs.21,700.
ಇದು ಕೇವಲ ಬೇಸಿಕ್ ಪೇ ಅಷ್ಟೆ. ಆದರೆ ಈ ವೇತನದ ಜತೆಗೆ ಗ್ರೇಡ್ ಪೇ, ತುಟ್ಟಿ ಭತ್ಯೆ, ಪ್ರಯಾಣ ಭತ್ಯೆ, ಮನೆ ಬಾಡಿಗೆ ಭತ್ಯೆಗಳು ಸಹ ಸಿಗಲಿವೆ. ಅವುಗಳನ್ನು 7ನೇ ವೇತನ ಆಯೋಗದ ನಂತರ ಈ ಕೆಳಗಿನಂತೆ ನಿರೀಕ್ಷಿಸಬಹುದು.
ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗೆ ಸ್ಯಾಲರಿ ಸ್ಲಿಪ್ನಲ್ಲಿ ವೇತನವನ್ನು ಈ ಕೆಳಗಿನಂತೆ ನಿರೀಕ್ಷಿಸಬಹುದು
ಬೇಸಿಕ್ ಪೇ : Rs.19,900.
ಗ್ರೇಡ್ ಪೇ : Rs.2800.
ತುಟ್ಟಿ ಭತ್ಯೆ (DA-ಬೇಸಿಕ್ ಪೇ ಗೆ ಶೇಕಡ.12) : Rs.2388.
ಪ್ರಯಾಣ ಭತ್ಯೆ : Rs.2016
ಮನೆ ಬಾಡಿಗೆ ಭತ್ಯೆ (ಬೇಸಿಕ್ ಪೇ’ಗೆ ಶೇಕಡ.8 ರಷ್ಟು) : Rs.1592.
ಒಟ್ಟು ವೇತನ : Rs.28,696
ಹೀಗೆ ಎಲ್ಲಾ ಹುದ್ದೆಗಳಿಗೂ ಸಹ ಸ್ಯಾಲರಿ ಸ್ಲಿಪ್ ಸಿಗಲಿದೆ. ಈ ವೇತನದ ಜತೆಗೆ ಪಿಂಚಣಿ, ಮೆಡಿಕಲ್ ಸೇವೆಗಳು, ಇನ್ಸುರೆನ್ಸ್ ಸೇವೆಗಳು, ವಿಶೇಷ ಪ್ರಯಾಣ ಸೇವೆಗಳು ಸಿಗಲಿವೆ.
ರೈಲ್ವೆ ಎನ್ಟಿಪಿಸಿ ಹುದ್ದೆಗಳಿಗೆ ಅರ್ಜಿ ಹಾಕುವವರಿಗೆ ಆಯ್ಕೆ ಪ್ರಕ್ರಿಯೆಯ ವಿಧಾನಗಳು ಯಾವುವು?
ಕಂಪ್ಯೂಟರ್ ಆಧಾರಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ಮೂಲದಾಖಲೆಗಳ ಪರಿಶೀಲನೆ, ವೈದ್ಯಕೀಯ ಪರೀಕ್ಷೆಗಳನ್ನು ಹಂತ ಹಂತವಾಗಿ ನಡೆಸಲಾಗುತ್ತದೆ.