Lok Sabha Election Result 2024: ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಪ್ರಧಾನಿ ಮೋದಿ, ಎಲ್ಲರ ಚಿತ್ತ ವಾರಣಾಸಿಯತ್ತ!
Lok Sabha Election Result 2024: ವಾರಣಾಸಿಯು ಭಾರತದ 543 ಸ್ಥಾನಗಳ ಪೈಕಿ ಅತ್ಯಂತ ಉನ್ನತ ಕ್ಷೇತ್ರಗಳಲ್ಲಿ ಒಂದಾಗಿದೆ. ಏಕೆಂದರೆ ಈ ಕ್ಷೇತ್ರವನ್ನು ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುತ್ತಾರೆ. ಕ್ಷೇತ್ರವು 1991 ರಿಂದ ಬಿಜೆಪಿಯ ಭದ್ರಕೋಟೆಯಾಗಿದೆ ಮತ್ತು 2014 ರಿಂದ ಪಿಎಂ ಮೋದಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಮೋದಿ ಅವರು ಕಾಂಗ್ರೆಸ್ನ ಉತ್ತರ ಅಧ್ಯಕ್ಷ ಅಜಯ್ ರಾಯ್ ಮತ್ತು ಬಹುಜನ ಸಮಾಜ ಪಕ್ಷದಿಂದ (ಬಿಎಸ್ಪಿ) ಅಥರ್ ಜಮಾಲ್ ಲಾರಿ ವಿರುದ್ಧ ಸ್ಪರ್ಧಿಸಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಪಿಎಂ ಮೋದಿ ಅವರು 4,79,505 ಮತಗಳ ಅಂತರದಿಂದ ಈ ಸ್ಥಾನವನ್ನು ಗೆದ್ದರು. ಸಮಾಜವಾದಿ ಪಕ್ಷದ (ಎಸ್ಪಿ) ಶಾಲಿನಿ ಯಾದವ್ ಮತ್ತು ಮೂರನೇ ಸ್ಥಾನ ಪಡೆದ ಅಜಯ್ ರೈ ಅವರನ್ನು ಸೋಲಿಸಿದರು.
2014ರಲ್ಲಿ, ಪ್ರಧಾನಿ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು 3,71,784 ಮತಗಳಿಂದ ಸೋಲಿಸಿದರು. ಉತ್ತರ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ 80 ಕ್ಷೇತ್ರಗಳಲ್ಲಿ 64 ರಿಂದ 68 ಸ್ಥಾನಗಳನ್ನು ಗಳಿಸುತ್ತೆ ಎಂದು ಎಕ್ಸಿಟ್ ಪೋಲ್ಗಳು ಭವಿಷ್ಯ ನುಡಿದಿರುವುದರಿಂದ, ಪ್ರಧಾನಿ ಮೋದಿ ವಾರಣಾಸಿಯಲ್ಲಿ ಮತ್ತೊಂದು ಗೆಲುವಿನೊಂದಿಗೆ ತಮ್ಮ ಹಿಡಿತವನ್ನು ವಿಸ್ತರಿಸುವ ನಿರೀಕ್ಷೆಯಿದೆ.
ವಾರಣಾಸಿಯ ಒಂದು ಸಭಾಂಗಣದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದೆ. ಒಂದು ಸ್ಥಾನಕ್ಕೆ ಇವಿಎಂ ಮತ ಎಣಿಕೆಗೆ 14 ಟೇಬಲ್ಗಳನ್ನು ಹಾಕಲಾಗಿದೆ. ವಾರಣಾಸಿಯ ಏಳು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಒಟ್ಟು 120 ಟೇಬಲ್ಗಳನ್ನು ಹಾಕಲಾಗಿದೆ.
ಪಿಎಂ ಮೋದಿಯವರ ಸತತ ಮೂರನೇ ಗೆಲುವಿನ ಮೇಲೆ ಕಣ್ಣಿಟ್ಟಿರುವ ವಾರಣಾಸಿ ಆಡಳಿತವು ಹಾಟ್ ಸೀಟ್ನ ಎಣಿಕೆಗೆ ಸಜ್ಜಾಗಿದೆ. ಪಹಾಡಿಯಾದ ಲಾಲ್ ಬಹದ್ದೂರ್ ಶಾಸ್ತ್ರಿ ಮಂಡಿಯಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಇಡೀ ಪ್ರಕ್ರಿಯೆಗಾಗಿ ಒಂದೇ ಟೇಬಲ್ ಮೇಲೆ ಮೂವರು ವರ್ಕರ್ಸ್ ಸೇರಿದಂತೆ, ಸುಮಾರು 700 ನೌಕರರನ್ನು ನಿಯೋಜಿಸಲಾಗಿದೆ.
ಆರಂಭಿಕ ಮುನ್ನಡೆ ಸಾಧಿಸಿದ ಪ್ರಧಾನಿ ಮೋದಿ
ವಾರಾಣಸಿಯಲ್ಲಿ ಅಂಚೆ ಮತಗಳ ಎಣಿಕೆ ಮುಗಿದ ಬಳಿಕ, ಕಾಂಗ್ರೆಸ್ನ ಅಜಯ್ ರೈಗಿಂತ ಪ್ರಧಾನಿ ನರೇಂದ್ರ ಮೋದಿ ಮುಂದಿದ್ದಾರೆ.