Lok Sabha Election 2024 : ರಾಯ್‌ಬರೇಲಿ, ವಯನಾಡ್ ನಲ್ಲಿ ರಾಹುಲ್ ಗಾಂಧಿ ಭಾರೀ ಮುನ್ನಡೆ
ಹೈಲೈಟ್ಸ್:
- ರಾಯ್‌ಬರೇಲಿ, ವಯನಾಡ್ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ರಾಹುಲ್ ಮುನ್ನಡೆ
- ಕೊನೆಯ ಕ್ಷಣದಲ್ಲಿ ರಾಯ್‌ಬರೇಲಿಯಲ್ಲಿ ನಾಮಪತ್ರ ಸಲ್ಲಿಸಿದ್ದ ರಾಹುಲ್
- ಗಾಂಧಿ, ನೆಹರೂ ಕುಟುಂಬದ ಭದ್ರಕೋಟೆ ಉಳಿಸಿಕೊಳ್ಳುವತ್ತ ಕಾಂಗ್ರೆಸ್
ಹೊಸದಿಲ್ಲಿ: ದೇಶಾದ್ಯಂತ ಕುತೂಹಲ ಹುಟ್ಟಿಸಿದ್ದ ಕ್ಷೇತ್ರಗಳಲ್ಲಿ ಉತ್ತರ ಪ್ರದೇಶದ ರಾಯ್‌ಬರೇಲಿ ಮತ್ತು ಕೇರಳದ ವಯನಾಡ್. ಕಾರಣ, ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಇಲ್ಲಿಂದ ಸ್ಪರ್ಧಿಸಿದ್ದರು. ಕಳೆದ ಚುನಾವಣೆಯಲ್ಲಿ ಅಮೇಠಿ ಕ್ಷೇತ್ರ ರಾಹುಲ್ ಗಾಂಧಿಯವರ ಕೈಹಿಡಿದಿರಲಿಲ್ಲ.
ಸದ್ಯ ಈ ಎರಡೂ ಕ್ಷೇತ್ರದ ಮತಎಣಿಕೆ ಚಾಲ್ತಿಯಲ್ಲಿದ್ದು ರಾಹುಲ್ ಗಾಂಧಿ ಎರಡೂ ಕ್ಷೇತ್ರಗಳಲ್ಲಿ ತಮ್ಮ ಪ್ರತಿಸ್ಪರ್ಧಿ ವಿರುದ್ದ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ವಯನಾಡ್ ನಲ್ಲಿ ರಾಷ್ಟ್ರ ಮಟ್ಟದಲ್ಲಿ ಇಂಡಿಯಾ ಮೈತ್ರಿಕೂಟದ ಭಾಗವಾದ ಎಡಪಕ್ಷದ ಅಭ್ಯರ್ಥಿ ವಿರುದ್ದ ರಾಹುಲ್ ಮುನ್ನಡೆಯಲ್ಲಿದ್ದಾರೆ.