ಕೊನೆಗೂ ಡಿವೋರ್ಸ್ ಬಗ್ಗೆ ಮೌನ ಮುರಿದ ನಿವೇದಿತಾ- ಚಂದನ್..! ಅಸಲಿ ಕಾರಣ ಬಿಚ್ಚಿಟ್ಟ ಜೋಡಿ
Chandan Shetty Nivedita Gowda Divorce : ಕೊನೆಗೂ ನಟ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ್ ತಮ್ಮ ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ್ದಾರೆ. ಬಿಗ್‌ಬಾಸ್‌ನಿಂದ ಪ್ರಾರಂಭವಾದ ಲವ್ ಜರ್ನಿಯನ್ನು ಕೊನೆಗೊಳಿಸಿದ್ದಾರೆ. ಸಧ್ಯ ಈ ಕುರಿತು ಇಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವಿಚ್ಚೇದನ ಕುರಿತು ಕ್ಲಾರೀಟಿ ನೀಡಿರುವ ನಿವೇದಿತಾ, ಈ ದಿನ., ಚಂದನ್ ಶೆಟ್ಟಿ ಮತ್ತು ನಾನು, ನಮ್ಮ ದಾಂಪತ್ಯ ಜೀವನವನ್ನ ಕಾನೂನುಬದ್ದವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೂಳಿಸಿದ್ದೇವೆ, ನಮ್ಮ ನಿರ್ಧಾರವನ್ನು ಮತ್ತು ನಮ್ಮ ಜೀವನದ ಖಾಸಗಿತನವನ್ನು ಗೌರವಿಸಲು ಕೋರುತ್ತೇವೆ, ಪ್ರತಿ ಸಂದರ್ಭದಲ್ಲಿ ನಮ್ಮೊಂದಿಗೆ ನಿಂತ ಮಾಧ್ಯಮ ಮಿತ್ರರು ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ನಾವು ಎಂದಿನಂತೆ ಬೆಂಬಲವನ್ನು ಕೋರುತ್ತೇವೆ, ನಾವು ನಮ್ಮ ಪ್ರತ್ಯೇಕ ಮಾರ್ಗ ಅನುಸರಿಸಿದರು ಪರಸ್ಪರ ಒಬ್ಬರನ್ನು ಒಬ್ಬರು ಗೌರವಿಸುತ್ತೇವೆ, ಸೂಕ್ಷ್ಮ ಪರಿಗಣೆಗಾಗಿ ಎಲ್ಲರಿಗೂ ಧನ್ಯವಾದಗಳು.. ಎಂದು ನಿವೇದಿತಾ ಗೌಡ ಅವರು ಬರೆದುಕೊಂಡಿದ್ದಾರೆ.
ಚಂದನ್ ಶೆಟ್ಟಿ ಸಹ, ಈ ದಿನ., ನಿವೇದಿತಾ ಗೌಡ ಮತ್ತು ನಾನು, ನಮ್ಮ ದಾಂಪತ್ಯ ಜೀವನವನ್ನ ಕಾನೂನುಬದ್ದವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೂಳಿಸಿದ್ದೇವೆ.. ನಮ್ಮ ನಿರ್ಧಾರವನ್ನು ಮತ್ತು ನಮ್ಮ ಜೀವನದ ಖಾಸಗಿತನವನ್ನು ಗೌರವಿಸಲು ಕೋರುತ್ತೇವೆ.. ಪ್ರತಿ ಸಂದರ್ಭದಲ್ಲಿ ನಮ್ಮೊಂದಿಗೆ ನಿಂತ ಮಾಧ್ಯಮ ಮಿತ್ರರು ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ನಾವು ಎಂದಿನಂತೆ ಬೆಂಬಲವನ್ನು ಕೋರುತ್ತೇವೆ.. ನಾವು ನಮ್ಮ ಪ್ರತ್ಯೇಕ ಮಾರ್ಗ ಅನುಸರಿಸಿದರು ಪರಸ್ಪರ ಒಬ್ಬರನ್ನು ಒಬ್ಬರು ಗೌರವಿಸುತ್ತೇವೆ… ಸೂಕ್ಷ್ಮ ಪರಿಗಣೆಗಾಗಿ ಎಲ್ಲರಿಗೂ ಧನ್ಯವಾದಗಳು.. ಅಂತ ತಮ್ಮ ಸೋಷಿಯಲ್ ಮೇಡಿಯಾ ಖಾತೆಯ ಮೂಲಕ ಚಂದನ್ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಜೂನ್ 6ರಂದು ಈ ಜೋಡಿ ಬೆಂಗಳೂರಿನ ಶಾಂತಿನಗರದ ಫ್ಯಾಮಿಲಿ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. 2017ರಲ್ಲಿ ಪ್ರಸಾರವಾದ ಬಿಗ್ ಬಾಸ್ ಕನ್ನಡ ಸೀಸನ್ 5 ಶೋನಲ್ಲಿ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಭಾಗವಹಿಸಿದ್ದರು. ತದನಂತರ ಇಬ್ಬರು ಪರಸ್ಪರ ಪ್ರೀತಿಸಿ, ಕುಟುಂಬದವರ ಒಪ್ಪಿಗೆ ಪಡೆದು 2020ರಲ್ಲಿ ವಿವಾಹವಾಗಿದ್ದರು.