Renukaswamy: ದರ್ಶನ್ ಅರೆಸ್ಟ್ನಿಂದ ಈ 4 ಬಿಗ್ ಬಜೆಟ್ ಸಿನಿಮಾಗಳಿಗೆ ಭಾರೀ ಹೊಡೆತ, ನಿರ್ಮಾಪಕರ ಕಥೆ ಏನು?

ನಟ ದರ್ಶನ್ ಅವರ ಕಾಟೇರ ಸಿನಿಮಾ ಹಿಟ್ ಆದ ನಂತರ ಅವರ ಇನ್ನೂ ಕೆಲವು ಸಿನಿಮಾ ಅನೌನ್ಸ್ ಆದವು. ಕಾಟೇರ ಸಕ್ಸಸ್ನೊಂದಿಗೆ ದರ್ಶನ್ ಅವರ ಡಲ್ ಆಗಿದ್ದ ಕ್ರೇಜ್ ಮತ್ತೆ ಜೋರಾಗಿದೆ. ಕಾಟೇರ ಸಕ್ಸಸ್ ಸಂಭ್ರಮಿಸಿದ್ದ ನಟ ದರ್ಶನ್ ಅವರು ಆ ನಂತರ ಹಲವು ಸಿನಿಮಾಗಳನ್ನು ಒಪ್ಪಿಕೊಂಡರು.

ಸದ್ಯ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಅವರು ಸದ್ಯಕ್ಕಂತೂ ಈ ಒಂದು ಪ್ರಕರಣದಿಂದ ರಿಲೀಫ್ ಆಗುವ ಯಾವ ಸೂಚನೆಯೂ ಕಾಣಿಸುತ್ತಿಲ್ಲ ಎನ್ನಲಾಗಿದೆ. ದರ್ಶನ್ ಅವರ ವಿರುದ್ಧ ಸಾಕ್ಷಿ ಹಿಡಿದುಕೊಂಡೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ದರ್ಶನ್ ಜೊತೆ ಅವರ ಗೆಳತಿ ಪವಿತ್ರಾ ಗೌಡ ಕೂಡಾ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ದರ್ಶನ್ ಅವರು ಪೊಲೀಸ್ ಕಸ್ಟಡಿಯಲ್ಲಿರುವುದರಿಂದ ಅವರನ್ನು ನಂಬಿದ ನಿರ್ಮಾಪಕ ಕಥೆ ಏನು ಎನ್ನುತ್ತಿದ್ದಾರೆ ಜನ. ಹೌದು, ದರ್ಶನ್ ಕೆಲವು ಬಿಗ್ ಬಜೆಟ್ ಮೂವಿ ಒಪ್ಪಿಕೊಂಡಿದ್ದಾರೆ. ಅಡ್ವಾನ್ಸ್ ಕೂಡಾ ಪಡೆದಿದ್ದಾರೆ.

ಅಂಥಹ ಸಿನಿಮಾದ ಕಥೆ ಏನು? ಅದರ ನಿರ್ಮಾಪಕರು ಏನು ಮಾಡುವುದು? ಸಿನಿಮಾ ಹಿಟ್ ಆಗುವುದು ಬಿಡಿ, ಶುರು ಮಾಡಿರುವ ಸಿನಿಮಾ ಮುಗಿಸುವುದಕ್ಕಾದರೂ ಸಾಧ್ಯ ಆಗುತ್ತಾ? ದರ್ಶನ್ ಸದ್ಯ ಹೊರಗೆ ಬರುತ್ತಾರಾ? ಅಥವಾ ನಿರ್ಮಾಪಕರು ಕೈಸುಟ್ಟುಕೊಳ್ಳಬೇಕಾಗುತ್ತಾ?

ಡೆವಿಲ್ ದರ್ಶನ್ ಅವರ 57ನೇ ಸಿನಿಮಾ. ಡೆವಿಲ್ ಸಿನಿಮಾದ ಚಿತ್ರೀಕರಣವೂ ಬಹುತೇಕವಾಗಿ ಮುಗಿದಿದೆ ಎನ್ನಲಾಗಿದೆ. ಈ ವರ್ಷದ ಕೊನೆಯಲ್ಲಿ ಕ್ರಿಸ್ಮಸ್ ವೇಳೆ ದರ್ಶನ್ ಅವರ ಸಿನಿಮಾ ರಿಲೀಸ್ ಮಾಡಲು ಉದ್ದೇಶಿಸಲಾಗಿತ್ತು. ಆದರೆ ಸದ್ಯ ಈಗಿನ ಅಪ್ಡೇಟ್ಗಳಿಂದ ಎಲ್ಲವೂ ಸ್ವಲ್ಪ ವಿಳಂಬವಾಗುವ ಸಾಧ್ಯತೆ ಕಂಡು ಬರುತ್ತಿದೆ. ಇದನ್ನು ಕ್ರಿಸ್ಮಸ್ಗೆ ರಿಲೀಸ್ ಮಾಡಲು ಉದ್ದೇಶಿಸಲಾಗಿತ್ತು.

ಇಷ್ಟೇ ಅಲ್ಲದೆ ಕನ್ನಡದ ಖ್ಯಾತ ನಿರ್ದೇಶಕ ಪ್ರೇಮ್ ಅವರ ಜೊತೆಗೂ ದರ್ಶನ್ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಹೊರಗೆ ಬಿದ್ದಿತ್ತು. ಫೇಮಸ್ ಪ್ರೊಡಕ್ಷನ್ ಹೌಸ್ಗಳಲ್ಲಿ ಒಂದಾಗಿರುವ ಕೆವಿಎನ್ ಪ್ರೊಡಕ್ಷನ್ ಈ ಬಗ್ಗೆ ಅಪ್ಡೇಟ್ ಕೂಡಾ ಕೊಟ್ಟಿತ್ತು. ದರ್ಶನ್ ಜೊತೆ ಕರಿಯಾ ಮೂವಿ ಮಾಡಿದ್ದ ಪ್ರೇಮ್ ದರ್ಶನ್ 58ನೇ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

ಈ ಸಿನಿಮಾ ಮುಂದಿನ ವರ್ಷ ಸೆಟ್ಟೇರಲಿದೆ ಎನ್ನಲಾಗಿದ್ದು ಈ ಸಿನಿಮಾ ದರ್ಶನ್ ಸಿನಿ ಕೆರಿಯರ್ನಲ್ಲಿಯೇ ಬಿಗ್ ಬಜೆಟ್ ಮೂವಿ ಎನ್ನಲಾಗಿದೆ. ಆದರೆ ಈ ಸಿನಿಮಾದ ಮೇಲೆಯೇ ದರ್ಶನ್ ಅರೆಸ್ಟ್ ಪರಿಣಾಮ ಬೀರುವುದು ಪಕ್ಕಾ. ಈ ಸಿನಿಮಾ ಶುರುವಾಗದೇ ಇರುವ ಸಾಧ್ಯತೆಯೂ ಇದೆ. ಕಾರಣ ಈ ಮೂವಿ ಇನ್ನೂ ಶುರುವಾಗಿರಲಿಲ್ಲ. ಜಸ್ಟ್ ಸಿನಿಮಾ ಅನೌನ್ಸ್ ಆಗಿದೆ ಅಷ್ಟೆ.

ದರ್ಶನ್ ಅವರ 59ನೇ ಮೂವಿಯನ್ನು ಕಾಟೇರ ಡೈರೆಕ್ಟರ್ ತರುಣ್ ಸುಧೀರ್ ಅವರು ನಿರ್ದೇಶಿಸಲಿದ್ದಾರೆ ಎನ್ನಲಾಗಿದ್ದು ದರ್ಶನ್ ಈ ಸಿನಿಮಾವನ್ನು ಒಪ್ಪಿಕೊಂಡು ಕಾಲ್ ಶೀಟ್ ಕೂಡಾ ಕೊಟ್ಟಿದ್ದಾರಂತೆ. ಇದನ್ನು ವಿ ಹರಿಕೃಷ್ಣ ಸಂಸ್ಥೆ ನಿರ್ಮಿಸುತ್ತದೆ ಎನ್ನಲಾಗಿದೆ. ಡೆವಿಲ್ ಆದ ನಂತರ ಪ್ರೇಮ್ ಮೂವಿ ನಂತರ ಇದು ದರ್ಶನ್ 59ನೇ ಮೂವಿಯಾಗಿರಲಿದೆ.

ದರ್ಶನ್ ಅವರ 60 ನೇ ಸಿನಿಮಾ ಸಿದ್ಧತೆಯೂ ನಡೆದಿದೆ ಎನ್ನಲಾಗಿದ್ದು, ನಿರ್ಮಾಪಕ ಸೂರಪ್ಪ ಬಾಬು ಅಡ್ವಾನ್ಸ್ ಕೂಡಾ ಪೇ ಮಾಡಿದ್ದಾರೆ ಎನ್ನಲಾಗಿದೆ. ಇಷ್ಟೇ ಅಲ್ಲದೆ ದರ್ಶನ್ ಅವರಿಗೆ ಅಡ್ವಾನ್ಸ್ ನೀಡಿದ ಕೆಲವು ನಿರ್ಮಾಪಕರು ಕೂಡಾ ಕಾಲ್ಶೀಟ್ಗೆ ಕಾಯುತ್ತಿದ್ದಾರಂತೆ. ಅಂತೂ ದರ್ಶನ್ ಅವರ 57, 58, 59, 60 ಸಿನಿಮಾಗಳ ಮೇಲೆ ಹೊಡೆತ ಬೀಳುವುದಂತೂ ಪಕ್ಕಾ ಎನ್ನುತ್ತಿದ್ದಾರೆ ಜನ.