ಮನೆಯ ಹಿತ್ತಲಲ್ಲೇ ಸಿಗುವ ಈ ಎಲೆಗಳನ್ನು ಬಳಸಿದರೆ 7 ದಿನಗಳಲ್ಲಿ ಯೂರಿಕ್ ಆಸಿಡ್ ಹರಳುಗಳೆಲ್ಲಾ ಪುಡಿಯಾಗುವುದು !ಕೀಲುಗಳಲ್ಲಿನ ಊತ ನೋವಿನಿಂದಲೂ ಮುಕ್ತಿ
ಬೆಂಗಳೂರು : ಯೂರಿಕ್ ಆಸಿಡ್ ದೇಹದಲ್ಲಿ ಪ್ಯೂರಿನ್ ಗಳ ವಿಭಜನೆಯಿಂದ ರೂಪುಗೊಳ್ಳುತ್ತದೆ.ಅದರಲ್ಲಿ ಹೆಚ್ಚಿನವು ರಕ್ತದಲ್ಲಿ ಕರಗುತ್ತವೆ ಮತ್ತು ಮೂತ್ರಪಿಂಡದಿಂದ ಮೂತ್ರದ ರೂಪದಲ್ಲಿ ಹೊರಹಾಕಲ್ಪಡುತ್ತವೆ.ಆದರೆ,ಯೂರಿಕ್ ಆಸಿಡ್ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೂಪುಗೊಳ್ಳಲು ಪ್ರಾರಂಭಿಸಿದರೆ,ಅದನ್ನು ಸರಿಯಾದ ಪ್ರಮಾಣದಲ್ಲಿ ಹೊರಹಾಕುವುದು ಕಷ್ಟವಾಗುತ್ತದೆ.ಹೀಗಾದಾಗ ವ್ಯಕ್ತಿಯು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟ ಹೆಚ್ಚಾದರೆ ಅದನ್ನು ಹೈಪರ್ಯುರಿಸೆಮಿಯಾ ಎಂದು ಕರೆಯಲಾಗುತ್ತದೆ.ಅಲ್ಲದೆ,ಯೂರಿಕ್ ಆಸಿಡ್ ಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ರೋಗಿಗಳಿಗೆ ಬಹಳಷ್ಟು ತೊಂದರೆಗಳನ್ನು ಉಂಟುಮಾಡುತ್ತದೆ.
ತುಳಸಿ ಎಲೆ :
ತುಳಸಿ ಎಲೆಗಳಿಂದ ಯೂರಿಕ್ ಆಸಿಡ್ ಅನ್ನು ಸುಲಭವಾಗಿ ನಿಯಂತ್ರಿಸಬಹುದು.ತುಳಸಿ ಎಲೆಗಳನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಿಂದ ತ್ಯಾಜ್ಯ ಉತ್ಪನ್ನಗಳನ್ನು ಹೊರಹಾಕುವುದು ಸಾಧ್ಯವಾಗುತ್ತದೆ. ತುಳಸಿ ಎಲೆ ದೇಹದಲ್ಲಿ ಯೂರಿಕ್ ಆಸಿಡ್ ಶೇಖರಣೆಯಾಗದಂತೆ ನೋಡಿಕೊಳ್ಳುತ್ತದೆ.ಪ್ರತಿದಿನ 4 ರಿಂದ 5 ತುಳಸಿ ಎಲೆಗಳನ್ನು ಅಗಿಯುತ್ತ ಬಂದರೆ ರಕ್ತದಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಸುಲಭವಾಗು ದೇಹದಿಂದ ಹೊರ ಬರುತ್ತದೆ.
ಬೇವಿನ ಎಲೆಗಳು :
ಬೇವಿನ ಎಲೆಗಳು ಶಕ್ತಿಯುತವಾದ ನಿರ್ವಿಶೀಕರಣ ಗುಣಲಕ್ಷಣಗಳನ್ನು ಹೊಂದಿವೆ.ಇದು ರಕ್ತದಲ್ಲಿರುವ ವಿಷವನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿ ಯೂರಿಕ್ ಆಸಿಡ್ ಅನ್ನು ತೆಗೆದುಹಾಕುವ ಗುಣವನ್ನು ಬೇವಿನ ಎಲೆಗಳು ಹೊಂದಿದೆ.ಇದಲ್ಲದೆ,ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಆಕ್ಸಿಡೆಂಟ್‌ಗಳಂತಹ ಗುಣಗಳ ಆಗರವಾಗಿದೆ.
ನುಗ್ಗೆ ಸೊಪ್ಪು :
ನುಗ್ಗೆ ಸೊಪ್ಪು ನಮ್ಮ ಹಿತ್ತಲಲ್ಲಿಯೇ ಸಿಗುತ್ತದೆ.ಈ ಎಲೆಯನ್ನು ಜಗಿಯುವುದರಿಂದ ರಕ್ತದಲ್ಲಿರುವ ಸೇರಿಕೊಂಡಿರುವ ಎಲ್ಲಾ ವಿಷ ಪದಾರ್ಥಗಳನ್ನು ದೇಹದಿಂದ ಹೊರ ಹಾಕುವುದು ಸಾಧ್ಯವಾಗುತ್ತದೆ. ಇದು ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದಂತಹ ಗುಣಲಕ್ಷಣಗಳನ್ನು ಹೊಂದಿದೆ. ಇದು ಯೂರಿಕ್ ಆಸಿಡ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ.