ಪರಪ್ಪನ ಅಗ್ರಹಾರದಲ್ಲಿ ತುಪ್ಪದ ಬೆಡಗಿ ರಾಗಿಣಿಗೆ ಫುಲ್​​ ಡಿಮ್ಯಾಂಡ್..! ಜೈಲಲ್ಲಿ ಹೀರೋಯಿನ್ ಕಂಡು ಫುಲ್ ಖುಷ್​ !

ಸ್ಯಾಂಡಲ್ ವುಡ್​ ಡ್ರಗ್ಸ್ ಮಾಫಿಯಾ ಆರೋಪದಿಂದಾಗಿ ಸತತ 11 ದಿನಗಳ ವಿಚಾರಣೆಯ ನಂತರ ನಟಿ ರಾಗಿಣಿ ಜೈಲು ಪಾಲಾಗಿ, ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಿರುವ ತುಪ್ಪದ ಬೆಡಗಿಗೆ ಜೈಲಿನಲ್ಲಿ ಫುಲ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.

ಇದೇ ಮೊದಲ ಬಾರಿಗೆ ಸ್ಯಾಂಡಲ್​​ವುಡ್​​ ನಟಿ ಜೈಲು ಪಾಲಾಗಿರುವ ಕುಖ್ಯಾತಿಗೆ ನಟಿ ರಾಗಿಣಿ ದ್ವಿವೇದಿ ಪಾತ್ರವಾಗಿದ್ದಾರೆ, ಆ ಮೂಲಕ ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಂದು ರಾತ್ರಿ ಕಳೆದ ರಾಗಿಣಿಯನ್ನು ನೋಡಲು ಬೆಳ್ಳಂಬೆಳಗ್ಗೆ ಕೈದಿಗಳು ಮುಗಿಬಿದ್ದಿದ್ದಾರೆ.

ನಮ್ಮನ್ನು ಒಂದ್ ಸಲ ಬಿಡಿ..ರಾಗಿಣಿಯನ್ನು ನೋಡ್ಬೇಕು ಎಂದು ಕೆಲ ಕೈದಿಗಳು ಬ್ಯಾರಕ್​ ವಾರ್ಡನ್​​ ಬಳಿ ಮನವಿ ಮಾಡಿಕೊಳ್ಳುತ್ತಿದ್ದರೆ, ಮತ್ತೆ ಕೆಲವರು ಕಿಟಕಿ, ಬಾಗಿಲುಗಳಿಂದ ಇಣುಕಿ-ಇಣುಕಿ ರಾಗಿಣಿಯನ್ನ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.

ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ನಟಿ ರಾಗಿಣಿ ರಾತ್ರಿ ಓದಿದ ಇಂಗ್ಲಿಷ್​ ಕಾದಂಬರಿ ಪಕ್ಕಕ್ಕಿಟ್ಟು, ಜೈಲು ಸಿಬ್ಬಂದಿ ನೀಡಿದ ಫಸ್ಟ್​ ಪೇಪರ್​ ಸೆಟ್​ ಮೇಲೆ ಕಣ್ಣಾಡಿಸಿದ್ದಾರೆ. ಪತ್ರಿಕೆಗಳಲ್ಲಿ ಬಂದ ತನ್ನ ಫೋಟೋ, ಸುದ್ದಿ​ ನೋಡಿ ರಾಗಿಣಿ ಗಳಗಳನೆ ಕಣ್ಣೀರಿಟ್ಟಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *