ಮನಿ ಪ್ಲಾಂಟ್ ತುಳಸಿ ಅಲ್ಲ!ಮನೆಯಲ್ಲಿನ ಎಲ್ಲಾ ವಾಸ್ತು ದೋಷ ನಿವಾರಣೆ ಮಾಡಿ ಹಣದ ಹರಿವು ಹರಿಸುತ್ತದೆ ಈ ಸಸ್ಯ !ಶ್ರಾವಣದಲ್ಲಿ ನೆಟ್ಟರೆ ಇನ್ನೂ ಶುಭ
ಬೆಂಗಳೂರು : ಸಂಪತ್ತು,ಸಮೃದ್ಧಿ,ಸಕಾರಾತ್ಮಕತೆ ಸಂತೋಷವನ್ನು ಆಕರ್ಷಿಸುವ ಸಸ್ಯಗಳ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.ಈ ಸಸ್ಯಗಳು ಮನೆಯಲ್ಲಿ ನೆಮ್ಮದಿಯ ವಾತಾವರಣ ಉಳಿಯುವಂತೆ ಮಾಡುತ್ತದೆ.ಈ ಸಸ್ಯವನ್ನು ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಹಣದ ಹರಿವು ಹೆಚ್ಚಿಸುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯಾಗುತ್ತದೆ.ಇದಲ್ಲದೆ,ಈ ಸಸ್ಯಗಳು ಮನೆಯ ವಾಸ್ತು ದೋಷಗಳನ್ನು ಮತ್ತು ಜಾತಕದಲ್ಲಿನ ಗ್ರಹ ದೋಷಗಳನ್ನು ನಿವಾರಿಸುತ್ತದೆ. ಸಾಮಾನ್ಯವಾಗಿ ತುಳಸಿ ಮತ್ತು ಮನಿ ಪ್ಲಾಂಟ್ ಮಾತ್ರ ಮಂಗಳಕರ ಸಸ್ಯ ಎನ್ನುವ ನಂಬಿಕೆಯಿದೆ. ಆದರೆ ತುಳಸಿ ಮತ್ತು ಮನಿ ಪ್ಲಾಂಟ್ ಅನ್ನು ಮೀರಿಸುವ ಸಸ್ಯವಿದೆ. ಈ ಸಸ್ಯವನ್ನು ಮನೆ ಮುಂದೆ ನೆಟ್ಟರೆ ಸರ್ವ ರೀತಿಯ ವಾಸ್ತು ದೋಷ ನಿವಾರಣೆಯಾಗಿ
ಧನಲಕ್ಷ್ಮೀ ಮನೆಯೊಳಗೆ ಹೆಜ್ಜೆ ಇಡುತ್ತಾಳೆಯಂತೆ.
ಎಲ್ಲಾ ವಾಸ್ತು ದೋಷಗಳು ನಿವಾರಣೆ :
ಮನೆಯಲ್ಲಿ ವಾಸ್ತು ದೋಷಗಳಿದ್ದರೆ ಒಂದರ ಹಿಂದೆ ಒಂದರಂತೆ ಸಮಸ್ಯೆಗಳು ಉದ್ಭವಿಸುತ್ತಲೇ ಇರುತ್ತದೆ.ಹೀಗಾದಾಗ ಅದರ ಪರಿಹಾರವಾಗಿ ಮನೆಯ ಮುಂದೆ ಒಂದು ಬಿಲ್ವ ಪತ್ರೆ ಗಿಡವನ್ನು ನೆಡಬೇಕು.ಬಿಲ್ವಪತ್ರೆ ಶಿವನಿಗೆ ಪ್ರಿಯವಾದ ಸಸ್ಯ. ಯಾವ ಮನೆ ಮುಂದೆ ಬಿಲ್ವಪತ್ರೆ ಇರುವುದೂ ಆ ಮನೆ ಮಂದಿ ಮೇಲೆ ಶಿವನ ಕೃಪೆ ಸದಾ ಇರುತ್ತದೆ. ಜೊತೆಗೆ ಆ ಮನೆಯ ಸಂತೋಷ ಮತ್ತು ಸಮೃದ್ಧಿಯನ್ನು ಶಿವ ಕಾಪಾಡಿಕೊಂಡು ಬರುತ್ತಾನೆ. ಶ್ರಾವಣ ಮಾಸದಲ್ಲಿ ಈ ಸಸ್ಯಕ್ಕೆ ವಿಶೇಷ ಮಹತ್ವವಿದೆ. ಹಾಗಾಗಿ ಶ್ರಾವಣ ಸೋಮವಾರ ಈ ಗಿಡವನ್ನು ಮನೆ ಮುಂದೆ ನೆಟ್ಟರೆ ನಿಮ್ಮ ಎಲ್ಲಾ ಕಷ್ಟಗಳು ದೂರವಾದಂತೆ.
ಸಾಡೇಸಾತಿ, ಧೈಯ ಸೇರಿದಂತೆ ಗ್ರಹದೋಷ ನಿವಾರಣೆ :
ಬಿಲ್ವಪತ್ರೆ ಸಸ್ಯ ಬಹಳ ಶಕ್ತಿಶಾಲಿ. ಶನಿ ದೇವನೂ ಶಿವನ ಭಕ್ತ.ಆದ್ದರಿಂದ ಶಿವನನ್ನು ಪೂಜಿಸುವವರಿಗೆ ಅಥವಾ ಯಾರ ಮನೆ ಮುಂದೆ ಬಿಲ್ವಪತ್ರೆ ಇರುತ್ತದೆಯೂ ಅವರಿಗೆ ಶನೀಶ್ವರ ಕೂಡಾ ತೊಂದರೆ ನೀಡುವುದಿಲ್ಲವಂತೆ.ಶನಿಯ ಸಾಡೇಸಾತಿ ಅಥವಾ ದೈಯ್ಯಾದಿಂದ ತೊಂದರೆ ಅನುಭವಿಸುತ್ತಿರುವವರು ಈ ಗಿಡವನ್ನು ಮನೆಯಲ್ಲಿ ನೆಟ್ಟರೆ ಶನಿದೇವನ ವಕ್ರ ದೃಷ್ಟಿಯಿಂದಲೂ ತಪ್ಪಿಸಿಕೊಳ್ಳಬಹುದು.
ಇದಲ್ಲದೇ ಪಿತೃದೋಷ ಮತ್ತು ಜಾತಕದ ಗ್ರಹದೋಷಗಳ ದುಷ್ಪರಿಣಾಮಗಳನ್ನು ದೂರ ಮಾಡುವ ಶಕ್ತಿಯು ಈ ಗಿಡಕ್ಕಿದೆ. ಮನೆಯಲ್ಲಿ ನೆಟ್ಟ ಬಿಲ್ವಪತ್ರೆ ಈ ಅಶುಭ ಫಲಿತಾಂಶಗಳನ್ನು ಹೋಗಲಾಡಿಸುತ್ತದೆ.ಈ ಗಿಡಕ್ಕೆ ಪ್ರತಿನಿತ್ಯ ನೀರು ಅರ್ಪಿಸಿ ಪೂಜೆ ಮಾಡುವುದು ಒಳ್ಳೆಯದು. ಹೀಗೆ ಮಾಡುವುದರಿಂದ ವ್ಯಕ್ತಿಯು ಪಾಪಗಳಿಂದ ಮುಕ್ತಿಯನ್ನೂ ಪಡೆಯುತ್ತಾನೆ.
ಈ ದಿಕ್ಕಿನಲ್ಲಿ ನೆಡಬೇಕು ಬಿಲ್ವಪತ್ರೆ ಗಿಡ :
ವಾಸ್ತು ಶಾಸ್ತ್ರದ ಪ್ರಕಾರ,ಮನೆಯ ಈಶಾನ್ಯ ದಿಕ್ಕಿನಲ್ಲಿ ಬಿಲ್ವಪಗಿಡವನ್ನು ನೆಡುವುದು ಅತ್ಯಂತ ಮಂಗಳಕರ. ಹೀಗೆ ಮಾಡುವುದರಿಂದ ಕೀರ್ತಿ ಮತ್ತು ಸಂಪತ್ತು ಹೆಚ್ಚುತ್ತದೆ. ಇನ್ನು ಈ ಗಿಡದ ಸುತ್ತಲೂ ಕೊಳಕು ಅಥವಾ ಯಾವುದೇ ಅಶುದ್ಧ ವಸ್ತುಗಳನ್ನು ಇಡಬಾರದು.