ಹೆಣ್ಣಿನ ಮದುವೆಯ ಕನಿಷ್ಠ ವಯಸ್ಸು 18 ಅಲ್ಲ ಕೇವಲ 9, ಹೊಸ ಕಾಯ್ದೆ ಮಂಡಿಸಿದ ಇರಾಕ್!
ಇರಾಕ್(ಆ.09) ಭಾರತದಲ್ಲಿ ಮದುವೆಯ ಕನಿಷ್ಠ ವಯಸ್ಸು ಹೆಣ್ಣಿಗೆ 18, ಗಂಡಿಗೆ 21. ಕನಿಷ್ಠ ವಯಸ್ಸಿಂತ ಕಡಿಮೆ ಇದ್ದರ ಬಾಲ್ಯ ವಿವಾಹ ಎಂದು ಪರಿಗಣಿಸಿ ಪ್ರಕರಣ ದಾಖಲಾಗುತ್ತದೆ. ಬಹುತೇಕ ದೇಶಗಳಲ್ಲಿ ಇದೇ ಕನಿಷ್ಠ ವಯಸ್ಸಿನ ಅರ್ಹತೆ ಚಾಲ್ತಿಯಲ್ಲಿದೆ. ಆದರೆ ಇರಾಕ್ನಲ್ಲಿ ಇದೀಗ ಹೊಸ ಕಾಯ್ದೆ ಮಂಡಿಸಲಾಗಿದೆ. ಇಲ್ಲಿ ಹೆಣ್ಣಿನ ಮದುವೆ ಕನಿಷ್ಠ ವಯಸ್ಸನ್ನು 18 ವರ್ಷದಿಂದ ಕೇವಲ 9 ವರ್ಷಕ್ಕೆ ಇಳಿಸಲಾಗಿದೆ. ಇನ್ನು ಗಂಡಿನ ವಯಸ್ಸನ್ನು 15 ವರ್ಷಕ್ಕೆ ಇಳಿಸಲಾಗಿದೆ. ವಿಶೇಷ ಅಂದರೆ ಇರಾಕ್ನಲ್ಲಿ ಕೆಲ ಮಹಿಳೆಯರು ಇದನ್ನು ವಿರೋಧಿಸಿದ್ದರೆ. ಆದರೆ ಭಾರಿ ವಿರೋಧ ವ್ಯಕ್ತವಾಗಿಲ್ಲ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಕಾಯ್ದೆಗೆ ವಿರೋಧಗಳು ವ್ಯಕ್ತವಾಗಿದೆ.
ಇರಾಕ್ನಲ್ಲಿ ಇದೀಗ ಧಾರ್ಮಿಕ ಆಚರಣೆಗಳಿಗೆ ಅನುಗುಣುವಾಗಿ ಈ ಬಿಲ್ ಮಂಡಿಸಲಾಗಿದೆ. ಅಕ್ಷರಶಃ ಬಾಲ್ಯವಿವಾಹವನ್ನೇ ಇರಾಕ್ ಜಾರಿಗೆ ತರುತ್ತಿದೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿರೋಧಗಳು ವ್ಯಕ್ತವಾಗುತ್ತಿದೆ. ಇದರಿಂದ ಗಂಡು ಹಾಗೂ ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ ಸೇರಿದಂತೆ ಸಾಮಾಜಿಕ ಸ್ಥಿತಿಗತಿಗಳ ಮೇಲೆ ಪರಿಣಾಮ ಬೀರಲಿದೆ. ಈ ನಿಯಮದಿಂದ ದುರ್ಬಳೆಕೆ ಹೆಚ್ಚಾಗಲಿದೆ ಎಂದು ಮಾನವ ಹಕ್ಕುಗಳ ಆಯೋಗ ಸೇರಿದಂತೆ ವಿಶ್ವ ಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ.
ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ( UNICEF) ವರದಿ ಪ್ರಕಾರ ಇರಾಕ್ನಲ್ಲಿ ಶೇಕಡಾ 28 ರಷ್ಟು ಹೆಣ್ಣುಮಕ್ಕಳು ಈಗಾಗಲೇ 18 ವಯಸ್ಸಿಗಿಂತ ಕಡಿಮೆ ವಯಸ್ಸಿನಲ್ಲೇ ಮದುವೆ ಮಾಡಲಾಗುತ್ತಿದೆ. ಈಗಲೇ ಬಾಲ್ಯ ವಿವಾಹ ಹೆಚ್ಚಾಗಿದೆ. ಇದರ ಜೊತೆಗೆ ವಯಸ್ಸು ಇಳಿಕೆ ಮಾಡಿ ಮತ್ತಷ್ಟು ದುರ್ಬಳಕೆ ಹಾಗೂ ಹೆಣ್ಣಿನ ಶೋಷಣೆಗೆ ಪ್ರೋತ್ಸಾಹ ನೀಡಿದಂತೆ ಎಂದು UNICEF ಹೇಳಿದೆ. ಸಂಪ್ರದಾಯ, ಧಾರ್ಮಿಕ ಕಟ್ಟುಪಾಡುಗಳ ಹೆಸರಿನಲ್ಲಿ ಇರಾಕ್ ಹೆಣ್ಣು ಮಕ್ಕಳನ್ನು ಬಹು ಬೇಗನೆ ಮದುವೆ ಮಾಡಿಸುತ್ತಿದ್ದಾರೆ. ಈಗಾಗಲೇ ಈ ವಿಚಾರ ಕಳವಳಕಾರಿಯಾಗಿದೆ. ಇದರ ಬೆನ್ನಲ್ಲೇ ಬಿಲ್ ಮಂಡನೆ ಮತ್ತಷ್ಟು ಆಘಾತಕಾರಿ ಎಂದು UNICEF ಹೇಳಿದೆ.
ಈ ಮಸೂದೆಗೆ ಇರಾನ್ ಸಂಸತ್ತಿನಲ್ಲ ಅನುಮೋದನೆ ಸಿಗುವ ಸಾಧ್ಯತೆ ಹೆಚ್ಚಿದೆ.ಕಾರಣ ಸದ್ಯ ಇರಾಕ್ ಸಂಸತ್ತಿಲ್ಲಿ ಶಿಯಾ ಬ್ಲಾಕ್ ನಾಯಕರೇ ಹೆಚ್ಚಿದ್ದಾರೆ. ಧಾರ್ಮಿಕ ಆಚರಣೆ ಹಾಗೂ ಪದ್ಧತಿಗೆ ಅನುಗುಣವಾಗಿ ಈ ನಿಯಮ ರೂಪಿಸಲಾಗಿದೆ ಎಂದು ಮಸೂದೆ ಪರವಾಗಿ ವಾದಿಸುತ್ತಿದ್ದಾರೆ. ಇರಾಕ್ ವಿರೋಧ ಪಕ್ಷ ಈ ಮಸೂದೆಯನ್ನು ವಿರೋಧಿಸಿದೆ. ಇದರಿಂದ ಇರಾಕ್ ಮತ್ತಷ್ಟು ಹಿಂದುಳಿಯಲಿದೆ. ಅರಾಜಕತೆ ಸೃಷ್ಟಿಯಾಗಲಿದೆ ಎಂದು ಎಚ್ಚರಿಸಿದೆ.