ಪಕ್ಷದ ಕಚೇರಿಯಲ್ಲಿ Hookah ಸೇದುತ್ತಿರುವ ಕಾಂಗ್ರೆಸ್ ಸಂಸದನ ವಿಡಿಯೋ ವೈರಲ್!

ನವದೆಹಲಿ: ಉತ್ತರ ಪ್ರದೇಶದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಪಕ್ಷದ ಕಚೇರಿಯಲ್ಲೇ ಹುಕ್ಕಾ ಸೇದುತ್ತಿರುವ ವಿಡಿಯೋ ವೈರಲ್ ಆಗತೊಡಗಿದೆ.

ವಿಶ್ವಹಿಂದೂ ಪರಿಷತ್ ಸದಸ್ಯ ಹಾಗೂ ಭಗ್ವಾ ಕ್ರಾಂತಿ ಸೇನಾ ಅಧ್ಯಕ್ಷ ಸಾದ್ವಿ ಪ್ರಾಚಿ ಸೇರಿದಂತೆ ಹಲವು ನೆಟ್ಟಿಗರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಾಚಿ, ಕಾಂಗ್ರೆಸ್ ನ ಸಂಸ್ಕೃತಿಯ ಪ್ರದರ್ಶನ! ಎಂಬ ಶೀರ್ಷಿಕೆ ಕೊಟ್ಟಿದ್ದು, ಪ್ರಧಾನಿ ಮೋದಿ ಅವರಿಗೆ ಹಿಂದೊಮ್ಮೆ ಜೀವ ಬೆದರಿಕೆ ಹಾಕಿದ್ದ ಸಂಸದ ಇಮ್ರಾನ್ ಮಸೂದ್ ಅವರೇ ಈಗ ಪಕ್ಷದ ಕಚೇರಿಯಲ್ಲಿ ಹುಕ್ಕಾ ಸೇದುತ್ತಿದ್ದಾರೆ, ಕಾಂಗ್ರೆಸ್ ನ ಮೌಲ್ಯಗಳನ್ನು ನೋಡಿ ಎಂದು ಹೇಳಿದ್ದಾರೆ.

2014 ರಲ್ಲಿ ಮಸೂದ್ ಮಾಡಿದ ಭಾಷಣವನ್ನು ಸಾದ್ವಿ ಪ್ರಾಚಿ ಉಲ್ಲೇಖಿಸಿದ್ದಾರೆ. ಮಸೂದೆ ತಮ್ಮ ಭಾಷಣದಲ್ಲಿ “ಪ್ರಧಾನ ಮಂತ್ರಿಯನ್ನು ತುಂಡುಗಳಾಗಿ ಕತ್ತರಿಸುತ್ತೇನೆ” ಎಂದು ಹೇಳಿದ್ದರು.

ಮಸೂದ್ ಪ್ರಸ್ತುತ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಪರಿಶೀಲಿಸಲು ರಚಿಸಲಾದ ಜಂಟಿ ಸಂಸದೀಯ ಸಮಿತಿಯ ಭಾಗವಾಗಿದ್ದಾರೆ. 2006 ರಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಗೆದ್ದಿದ್ದ ಅವರು ಮುಜಾಫರಾಬಾದ್ ನ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದರು.

ನಂತರ, ಮಸೂದ್ ಸತತವಾಗಿ ನಾಲ್ಕು ಚುನಾವಣೆಗಳಲ್ಲಿ ಸೋತಿದ್ದರು. ಇದರಲ್ಲಿ ಎರಡು ಲೋಕಸಭಾ ಚುನಾವಣೆಗಳು (2014 ಮತ್ತು 2019) ಸೇರಿವೆ. 2024 ರ ಚುನಾವಣೆಯಲ್ಲಿ ಬಿಜೆಪಿಯ ರಾಘವ್ ಲಖನ್‌ಪಾಲ್ ಅವರನ್ನು ಸೋಲಿಸಿ ಸಂಸದರಾಗಿ ಆಯ್ಕೆಯಾಗಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *