ರೊನಾಲ್ಡೋ ಡಿಜಿಟಲ್ ದಿಗ್ವಿಜಯ: ವಿಶ್ವದಲ್ಲಿ ಯಾರೂ ಮಾಡಲಾಗದ ದಾಖಲೆ ಮಾಡಿದ ಫುಟ್‌ಬಾಲ್‌ ತಾರೆ!

ಕ್ರೀಡಾಂಗಣದಲ್ಲಿ ಮಾತ್ರವಲ್ಲ, ಡಿಜಿಟಲ್ ಲೋಕದಲ್ಲೂ ಯಾರಿಗೂ ತಲುಪಲಾಗದ ಎತ್ತರಕ್ಕೆ ಪೋರ್ಚುಗಲ್‌ ತಂಡದ ಆಟಗಾರ ವಿಶ್ವ ವಿಖ್ಯಾತ ಫುಟ್‌ಬಾಲ್‌ ಪ್ಲೇಯರ್‌ ಕ್ರಿಶ್ಚಿಯಾನೋ ರೊನಾಲ್ಡೋ ತಲುಪುತ್ತಿದ್ದಾರೆ. ವಿವಿಧ ಸೋಶಿಯಲ್‌ ಮೀಡಿಯಾ ವೇದಿಕೆಗಳಿಂದ ಇಂದು ರೊನಾಲ್ಡೋ ಅವರನ್ನು ಫಾಲೋ ಮಾಡುವವರ ಸಂಖ್ಯ 100 ಕೋಟಿಯ ಗಡಿ ಮುಟ್ಟಿದೆ.

article_image2

ಸೋಶಿಯಲ್‌ ಮೀಡಿಯಾದಲ್ಲಿ 100 ಕೋಟಿ ಫಾಲೋವರ್‌ಗಳ ಮಾಂತ್ರಿಕ ಸಂಖ್ಯೆಯ ಗಡಿ ಮುಟ್ಟಿದ ವಿಶ್ವದ ಮೊಟ್ಟಮೊದಲ ವ್ಯಕ್ತಿ ಎನ್ನುವ ಶ್ರೇಯಕ್ಕೂ ಅವರು ಪಾತ್ರರಾಗಿದ್ದಾರೆ.

article_image3

ಸೋಶಿಯಲ್‌ ಮೀಡಿಯಾ ಪೈಕಿ ಇನ್ಸ್‌ಟಾಗ್ರಾಮ್‌ನಲ್ಲಿ ಕ್ರಿಶ್ಚಿಯಾನೋ ರೊನಾಲ್ಡೋಗೆ ಹೆಚ್ಚಿನ ಫಾಲೋವರ್ಸ್‌ಗಳಿದ್ದಾರೆ. ಮೆಟಾ ಮಾಲೀಕತ್ವದ ಈ ಸೋಶಿಯಲ್‌ ಮೀಡಿಯಾ ವೇದಿಕೆಯಲ್ಲಿ ರೊನಾಲ್ಡೋ 63.9 ಕೋಟಿ ಫಾಲೋವರ್‌ಗಳನ್ನು ಹೊಂದಿದ್ದಾರೆ.

article_image4

ಇನ್ನು ಫೇಸ್‌ಬುಕ್‌ನಲ್ಲಿ ರೊನಾಲ್ಡೋ ಅವರ ಫಾಲೋವರ್‌ಗಳ ಸಂಖ್ಯೆ 17 ಕೋಟಿ. ಎಕ್ಸ್‌ನಲ್ಲಿ ರೋನಾಲ್ಡೋರನ್ನು 11.3 ಕೋಟಿ ಜನ ಫಾಲೋ ಮಾಡುತ್ತಾರೆ. ಇನ್ನು ಒಂದು ತಿಂಗಳ ಹಿಂದೆ ಆರಂಭವಾದ ಯೂಟ್ಯೂಬ್ ಚಾನೆಲ್‌ನಲ್ಲಿ 6.5 ಕೋಟಿ ಜನ ರೊನಾಲ್ಡೊ ಅವರ ಚಾನೆಲ್ ಅನ್ನು ಸಬ್‌ಸ್ಕ್ರೈಬ್ ಮಾಡಿದ್ದಾರೆ.

article_image5

ಸಾಮಾಜಿಕ ಮಾಧ್ಯಮಗಳಲ್ಲಿ ತನ್ನನ್ನು ಹಿಂಬಾಲಿಸುವವರ ಸಂಖ್ಯೆ 100 ಕೋಟಿ ಎಂಬುದನ್ನು ರೊನಾಲ್ಡೊ ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಈ ಐತಿಹಾಸಿಕ ಸಾಧನೆಗಾಗಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸುತ್ತಾ ರೊನಾಲ್ಡೊ ಪೋಸ್ಟ್ ಮಾಡಿದ್ದಾರೆ. 100 ಕೋಟಿ ಫಾಲೋವರ್ಸ್‌ಗಳೊಂದಿಗೆ ನಾವು ಇತಿಹಾಸ ಸೃಷ್ಟಿಸಿದ್ದೇವೆ. ಇದು ಕೇವಲ ಒಂದು ಸಂಖ್ಯೆಯಲ್ಲ, ಆಟ ಮತ್ತು ಅದರಾಚೆಗಿನ ನಮ್ಮ ಸಾಮಾನ್ಯ ಉತ್ಸಾಹ, ಚಾಲನೆ ಮತ್ತು ಪ್ರೀತಿಗೆ ಸಾಕ್ಷಿಯಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.

article_image6

ಮದೀರಾದ ಬೀದಿಗಳಿಂದ ಹಿಡಿದು ಜಗತ್ತಿನ ಅತಿದೊಡ್ಡ ವೇದಿಕೆಗಳವರೆಗೆ, ನಾನು ಯಾವಾಗಲೂ ನನ್ನ ಕುಟುಂಬಕ್ಕಾಗಿ ಮತ್ತು ನಿಮಗಾಗಿ ಆಡಿದ್ದೇನೆ. ಈಗ ನಾವು 100 ಕೋಟಿ ಜನ ಒಟ್ಟಿಗೆ ನಿಂತಿದ್ದೇವೆ. ನನ್ನ ಎಲ್ಲಾ ಏರಿಳಿತಗಳಲ್ಲಿ ನೀವು ನನ್ನೊಂದಿಗೆ ಪ್ರತಿ ಹೆಜ್ಜೆಯಲ್ಲೂ ಇದ್ದೀರಿ. ಈ ಪ್ರಯಾಣ ನಮ್ಮ ಪ್ರಯಾಣ, ಒಟ್ಟಾಗಿ, ನಾವು ಏನು ಸಾಧಿಸಬಹುದು ಎಂಬುದಕ್ಕೆ ಯಾವುದೇ ಮಿತಿಗಳಿಲ್ಲ ಎಂದು ನಾವು ಸಾಬೀತುಪಡಿಸಿದ್ದೇವೆ ಎಂದು ರೊನಾಲ್ಡೋ ಬರೆದಿದ್ದಾರೆ.

article_image7

ನನ್ನನ್ನು ನಂಬಿದ್ದಕ್ಕಾಗಿ ಮತ್ತು ನನ್ನ ಜೀವನದ ಭಾಗವಾದ ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು. ಇನ್ನೂ ಅತ್ಯುತ್ತಮ ಪ್ರದರ್ಶನಗಳು ಬರಬೇಕಿದೆ, ನಾವು ಒಟ್ಟಾಗಿ ಮುನ್ನಡೆದು ಜಯಗಳಿಸುತ್ತೇವೆ ಮತ್ತು ಇತಿಹಾಸವನ್ನು ಸೃಷ್ಟಿಸುತ್ತೇವೆ- ಎಂದು ರೊನಾಲ್ಡೊ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *