CM Siddaramaiah: ಸಿದ್ದರಾಮಯ್ಯ ರಿಸೈನ್ ಮಾಡಿದ್ರೆ ಸಿಎಂ ನಾನಾಗಬೇಕು ಇಲ್ಲ ನೀವಾಗಬೇಕು! ಸತೀಶ್ ಜಾರಕಿಹೊಳಿ-ಪರಮೇಶ್ವರ್ ನಡುವೆ ನಡೀತಾ ಒಪ್ಪಂದ?
ಮೈಸೂರು: ಮುಡಾ ಹಗರಣಕ್ಕೆ (Muda Scam) ಸಂಬಂಧಿಸಿದಂತೆ ರಾಜ್ಯ ರಾಜಕಾರಣದಲ್ಲಿ ಸಿಎಂ (CM ) ಬದಲಾವಣೆಯ ಕೂಗು ಹೆಚ್ಚಾದ ಬೆನ್ನಲ್ಲೆ ರಾಜ್ಯದಲ್ಲಿ ದಲಿತ ಸಿಎಂ (Dalit CM) ಕೂಗು ಕೂಡ ಜೋರಾಗಿಯೇ ಸದ್ದು ಮಾಡುತ್ತಿದೆ. ಅದಕ್ಕೆ ತಕ್ಕಂತೆ ಡಾ. ಜಿ ಪರಮೇಶ್ವರ್ (Dr G Parameshwara) ಹಾಗೂ ಸತೀಶ್ ಜಾರಕಿಹೊಳಿ (Satish Jarakiholi) ಇಬ್ಬರೂ ಮಾತನಾಡಿಕೊಂಡು ಪರಸ್ಪರ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಸಿಎಂ ಸಿದ್ದರಾಮಯ್ಯ (CM Siddaramaiah) ಬದಲಾವಣೆಯಾದರೆ ದಲಿತರೇ ಸಿಎಂ ಆಗಬೇಕು. ಅದೂ ಕೂಡ ಒಂದು ನಾನೇ ಸಿಎಂ ಆಗ್ತೀನಿ ಇಲ್ಲ ನೀವು ಆಗಿ ಎಂದು ಒಪ್ಪಂದ ಆಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿಎಂ ಸಿದ್ದರಾಮಯ್ಯ ಪದತ್ಯಾಗ ಮಾಡಿದ್ರೆ ದಲಿತರೇ ಸಿಎಂ ಆಗಬೇಕು. ಒಂದು ನಾನು ಸಿಎಂ ಆಗ್ತೇನೆ, ಇಲ್ಲವೇ ನೀವು ಆಗಿ ಎಂದು ಸತೀಶ್ ಜಾರಕಿಹೊಳಿ ಹಾಗೂ ಪರಮೇಶ್ವರ್ ಪರಸ್ಪರ ಒಪ್ಪಂದದ ಮಾತುಕತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಉಭಯ ನಾಯಕರು ಸದ್ಯ ಮೈಸೂರು ಪ್ರವಾಸದಲ್ಲಿದ್ದು, ನಾಡಹಬ್ಬ ದಸರಾ ಸಂದರ್ಭದಲ್ಲಿ ಡಾ. ಹೆಚ್.ಸಿ ಮಹಾದೇವಪ್ಪ ನಿವಾಸದಲ್ಲಿ ಈ ಮಾತುಕತೆ ನಡೆದಿದೆ ಎನ್ನಲಾಗಿದೆ.
ಮೈಸೂರು ದಸರಾ ಹಿನ್ನೆಲೆ ಇಬ್ಬರೂ ನಾಯಕರು ಮೈಸೂರು ಪ್ರವಾಸ ಕೈಗೊಂಡಿದ್ದಾರೆ. ಈ ನಡುವೆ ಡಾ.ಹೆಚ್.ಸಿ.ಮಹಾದೇವಪ್ಪ ನಿವಾಸದಲ್ಲಿ ರಹಸ್ಯ ಮಾತಕತೆ ನಡೆಸಿರುವ ನಾಯಕರುಗಳು, ದಸರಾ ಬಳಿಕ ಸಿಎಂ ರಾಜೀನಾಮೆ ಎಂದು ವಿಪಕ್ಷ ನಾಯಕರು ಹೇಳುತ್ತಿದ್ದಾರೆ. ಈ ಹೊತ್ತಿನಲ್ಲಿ ಸಿಎಂ ರಾಜೀನಾಮೆ ಚರ್ಚೆ ನಡುವೆ ಮಹತ್ವ ಪಡೆದುಕೊಂಡಿರುವ ದಲಿತ ಸಚಿವರ ಪ್ರತ್ಯೇಕ ಸಭೆ.
ನಿಮ್ಮ ಪಕ್ಷದ ಅಂತ್ಯೋದಯ ಸಾಕಾರಗೊಳ್ಳುತ್ತದೆ
ಹೌದು, ಜಾತಿ ಗಣತಿ ಬಿಡುಗಡೆಗೆ ಬಿಜೆಪಿಯಿಂದ ಯಾವುದೇ ತಕರಾರು ಇಲ್ಲ ಎಂಬ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ ಹಿನ್ನೆಲೆ ಅವರಿಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮ ಪ್ರಕಟಣೆ ಮೂಲಕ ಟಾಂಗ್ ನೀಡಿದ್ದಾರೆ. ಆರ್. ಅಶೋಕ್ ಅವರ ಹೇಳಿಕೆ ಓದಿ ಮನಸ್ಸು ನಿರಾಳವಾಯಿತು, ನಮ್ಮ ಪಕ್ಷದೊಳಗಿನ ತಕರಾರುಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಬೇಡಿ.ಅವುಗಳನ್ನು ನಾವು ಬಗೆಹರಿಸಿಕೊಳ್ಳುತ್ತೇವೆ, ನೀವು ನುಡಿದಂತೆ ನಡೆದರೆ ಜಾತಿ ಜನಗಣತಿ ಜಾರಿಯಾಗಿ ನೀವೇ ಹೇಳಿಕೊಂಡಿರುವ ನಿಮ್ಮ ಪಕ್ಷದ ಕನಸಿನ “ಅಂತ್ಯೋದಯ’’ ಸಾಕಾರಗೊಳ್ಳುತ್ತದೆ ಎಂಬ ವಿಶ್ವಾಸ ನನಗಿದೆ. ನೀವು ಮಾತ್ರ, ಕೊಟ್ಟ ಮಾತಿಗೆ ತಪ್ಪಿ ನಡೆಯಬಾರದು ಅಷ್ಟೆ ಎಂದು ಟಾಂಗ್ ನೀಡಿದ್ದಾರೆ.
ಜಾತಿಗಣತಿ ವರದಿ ಅಂಗೀಕರಿಸಲು ನಮ್ಮ ಸರ್ಕಾರ ಬದ್ಧವಾಗಿದೆ
ಜಾತಿಗಣತಿ ವರದಿಯನ್ನ ಅಂಗೀಕರಿಸಲು ನಮ್ಮ ಪಕ್ಷ, ಸರ್ಕಾರ ಬದ್ಧವಾಗಿದೆ. ನಮ್ಮ ಪಕ್ಷದ ಎಲ್ಲಾ ನಾಯಕರು ತಾತ್ವಿಕವಾಗಿ ಜಾತಿ ಗಣತಿಯನ್ನು ಒಪ್ಪಿಕೊಂಡಿದ್ದಾರೆ. ಯಾರ ವಿರೋಧವೂ ಇಲ್ಲ,ವಿಪಕ್ಷಗಳ ಸುಳ್ಳು ಪ್ರಚಾರದಿಂದಾಗಿ ಕೆಲವರಲ್ಲಿ ನಿರಾಧಾರವಾದ ಸಂಶಯಗಳು ಹುಟ್ಟಿಕೊಂಡಿವೆ. ಇನ್ನೂ ಕೆಲವರಲ್ಲಿ ತಪ್ಪು ಅಭಿಪ್ರಾಯಗಳಿಂದಾಗಿ ಗೊಂದಲಗಳಿವೆ. ಮಠಾಧೀಶರು ಸೇರಿದಂತೆ ಎಲ್ಲರ ಅನುಮಾನ-ಸಂಶಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಂಡು ಜಾರಿಗೆ ತರುವ ನಿರ್ಧಾರವನ್ನು ಶೀಘ್ರವಾಗಿ ಕೈಗೊಳ್ಳಲಾಗುವುದು. ಯಾವ ಆಧಾರದಲ್ಲಿ ವರದಿ ಅವೈಜ್ಞಾನಿಕ ಎಂಬುದನ್ನ ಸ್ಪಷ್ಟಪಡಿಸಬೇಕು. ಜಾತಿಗಣತಿ ವರದಿ ಬಿಡುಗಡೆ ದಿಢೀರ್ ನಿರ್ಧಾರ ಅಲ್ಲ ಎಂದು ಹೇಳಿದ್ದಾರೆ.