Darshan-Vijayalakshmi: ದರ್ಶನ್ಗೆ ಬೇಲ್ ಸಿಗ್ತಿದ್ದಂತೆ ಬಳ್ಳಾರಿಗೆ ಓಡೋಡಿ ಬಂದ ವಿಜಯಲಕ್ಷ್ಮಿ! ದಾಸನ ಪತ್ನಿ ಫುಲ್ ಖುಷ್!
ರೇಣುಕಾಸ್ವಾಮಿ ಕೇಸ್ನಲ್ಲಿ (Renukaswamy Case) ಜೈಲು ಸೇರಿದ್ದ ನಟ ದರ್ಶನ್ಗೆ (Actor Darshan) ದೀಪಾವಳಿ ಗಿಫ್ಟ್ ಸಿಕ್ಕಿದೆ. ದರ್ಶನ್ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಜಾಮೀನು (Interim Bail) ನೀಡಿ ಆದೇಶ ಹೊರಡಿಸಿದೆ. ದರ್ಶನ್ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆ ಚಿಕಿತ್ಸೆಗಾಗಿ 6 ವಾರಗಳ ಅವಧಿಯ ಮಧ್ಯಂತರ ಜಾಮೀನು ನೀಡಲಾಗಿದೆ. ದರ್ಶನ್ ಜಾಮೀನಿಗಾಗಿ ಕಾನೂನು ಹೋರಾಟ ಮಾಡ್ತಿದ್ದ ವಿಜಯಲಕ್ಷ್ಮಿಗೆ (Vijayalakshmi) ಕೊನೆಗೂ ಗೆಲುವು ಸಿಕ್ಕಿದೆ. ದರ್ಶನ್ಗೆ ಬೇಲ್ ಮಂಜೂರು ಆಗ್ತಿದ್ದಂತೆ ಬಳ್ಳಾರಿ ಜೈಲಿಗೆ ವಿಜಯಲಕ್ಷ್ಮಿ ಓಡೋಡಿ ಬಂದಿದ್ದಾರೆ.
ನಗು ಮುಖದಲ್ಲಿ ವಿಜಯಲಕ್ಷ್ಮಿ
ಜೈಲಿನಲ್ಲಿದ್ದ ಪತಿ ದರ್ಶನ್ ನೋಡಲು ಪ್ರತಿ ವಾರ ಜೈಲಿಗೆ ಬರ್ತಿದ್ದ ವಿಜಯಲಕ್ಷ್ಮಿ ಮುಖದಲ್ಲಿ ಬೇಸರ, ದುಃಖ ಕಾಣ್ತಿತ್ತು. ಇದೀಗ ದರ್ಶನ್ಗೆ ಬೇಲ್ ಸಿಕ್ಕ ಖುಷಿಯಲ್ಲಿ ವಿಜಯಲಕ್ಷ್ಮಿ ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ರು. ಈ ಬಾರಿ ದರ್ಶನ್ ಪತ್ನಿ ಮುಖದಲ್ಲಿ ಅಭಿಮಾನಿಗಳು ನಗು ಕಂಡಿದ್ದಾರೆ. ಜೈಲಿಗೆ ಆಗಮಿಸಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಖುಷಿಯಿಂದಲೇ ಜೈಲಿನ ಸಂದರ್ಶಕರ ಕೊಠಡಿಗೆ ತೆರಳಿದ್ರು.
ಕಾನೂನು ಹೋರಾಟದ ಜೊತೆ ವಿಜಯಲಕ್ಷ್ಮಿ ಗುಡಿ-ಗೋಪುರಗಳನ್ನು ಸಹ ಸುತ್ತಿದ್ರು. ಕೊಲ್ಲೂರು ಮುಕಾಂಬಿಕೆ, ಬೆಂಗಳೂರಿನ ಬನಶಂಕರಿ, ಮೈಸೂರು ಚಾಮುಂಡೇಶ್ವರಿ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಭೇಟಿ ನೀಡಿದ ಪತಿಗಾಗಿ ಹರಕೆ ಹೊತ್ತಿದ್ರು. ಇದೀಗ ವಿಜಯಲಕ್ಷ್ಮಿ ಪೂಜೆ ಫಲಿಸಿದ್ದು, ದಾಸನಿಗೆ ಮಧ್ಯಂತರ ಜಾಮೀನು ಸಿಕ್ಕಿದೆ.
ವಿಜಯಲಕ್ಷ್ಮಿ ಮೊದಲ ಪೋಸ್ಟ್
ಪತಿ ದರ್ಶನ್ ಅವರಿಗೆ ಬೇಲ್ ಸಿಗ್ತಿದ್ದಂತೆ ವಿಜಯಲಕ್ಷ್ಮಿ ಮೊದಲ ಪೋಸ್ಟ್ ಶೇರ್ ಮಾಡಿದ್ದಾರೆ. ಈ ಹಿಂದೆ ವಿಜಯಲಕ್ಷ್ಮಿ, ಅಸ್ಸಾಂನ ಗುವಾಹಟಿಯಲ್ಲಿರುವ ಶಕ್ತಿಪೀಠ ಕಾಮಾಕ್ಯ ದೇವಿ ದೇವಾಲಯಕ್ಕೆ ಭೇಟಿ ನೀಡಿದ್ರು. ಈ ದೇವಿಯ ಮಹಿಮೆಯಿಂದಲೇ ದರ್ಶನ್ಗೆ ಬೇಲ್ ಸಿಕ್ಕಿದೆ ಎನ್ನುವ ನಂಬಿಕೆಯಲ್ಲಿ ವಿಜಯಲಕ್ಷ್ಮಿ ಮೊದಲ ಪೋಸ್ಟ್ ಶೇರ್ ಮಾಡಿದ್ದಾರೆ.
ಇನ್ಸ್ಟಾಗ್ರಾಮ್ನ ಸ್ಟೋರಿಸ್ನಲ್ಲಿ ವಿಜಯಲಕ್ಷ್ಮಿ ಗುವಾಹಟಿಯಲ್ಲಿರುವ ಶಕ್ತಿಪೀಠ ಕಾಮಾಕ್ಯ ದೇವಿ ದೇವಸ್ಥಾನದ ಫೋಟೋವನ್ನು ಶೇರ್ ಮಾಡಿದ್ದಾರೆ. ದೇವಿಗೆ ಧನ್ಯವಾದ ತಿಳಿಸಿದ್ದಾರೆ. ಥ್ಯಾಂಕ್ಫುಲ್, ಗ್ರೇಟ್ಫುಲ್, ನಿಮ್ಮ ಆಶೀರ್ವಾದ ಎಂದು ವಿಜಯಲಕ್ಷ್ಮಿ ಬರೆದಿದ್ದಾರೆ.
ಇಂದೇ ದರ್ಶನ್ ರಿಲೀಸ್ ಆಗುವ ಸಾಧ್ಯತೆ!
ಬೆಳಗ್ಗೆಯೇ ದರ್ಶನ್ಗೆ ಜಾಮೀನು ಮಂಜೂರಾಗಿರುವ ಹಿನ್ನೆಲೆ ಇಂದು ಸಂಜೆ ಅಥವಾ ರಾತ್ರಿ ವೇಳೆಗೆ ನಟ ದರ್ಶನ್ ಬಳ್ಳಾರಿ ಜೈಲಿನಿಂದ ರಿಲೀಸ್ ಆಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ದರ್ಶನ್ಗೆ ಬೇಲ್ ಸಿಕ್ಕ ಸುದ್ದಿ ಕೇಳಿ ಫ್ಯಾನ್ಸ್ ಕೂಡ ಖುಷ್ ಆಗಿದ್ದಾರೆ.
6 ವಾರಗಳ ಕಾಲ ಜಾಮೀನು ಮಂಜೂರು ಮಾಡಿರುವ ನ್ಯಾಯಾಲಯ, ಮಧ್ಯಂತರ ಜಾಮೀನಿಗೆ ಸಾಕಷ್ಟು ಷರತ್ತುಗಳನ್ನು ವಿಧಿಸಿದೆ. 131 ದಿನಗಳ ಬಳಿಕ ದರ್ಶನ್ ಜೈಲಿನಿಂದ ಹೊರಗೆ ಬರ್ತಿದ್ದಾರೆ. ಬಳ್ಳಾರಿ ಜೈಲು ಸೇರಿ ದರ್ಶನ್ 65 ದಿನಗಳು ಕಳೆದಿತ್ತು. ಇದೀಗ ದಾಸನಿಗೆ ಬಿಡುಗಡೆ ಭಾಗ್ಯ ಲಭಿಸಿದೆ. ಜಾಮೀನು ಅದೇಶ ಜೈಲಾಧಿಕಾರಿಗಳ ಕೈ ಸೇರುತ್ತಿದ್ದಂತೆ ದರ್ಶನ್ ರಿಲೀಸ್ ಆಗಿದ್ದಾರೆ.