Chaitra Hallikeri: ಡಿವೋರ್ಸ್​ ರೂಮರ್ಸ್​ಗೆ ಫುಲ್ ಸ್ಟಾಪ್​ ಇಟ್ಟ ಬಿಗ್‌‌ ಬಾಸ್‌‌ ಖ್ಯಾತಿಯ ಚೈತ್ರಾ ಹಳ್ಳಿಕೇರಿ! ನಟಿ ಹೇಳಿದ್ದೇನು?

ಬಿಗ್‌ ಬಾಸ್‌ ಕನ್ನಡ (Bigg Boss Kannada) ಒಟಿಟಿ ರಿಯಾಲಿಟಿ ಶೋನಲ್ಲಿ ಮನೆಮಾತಾಗಿದ್ದ ಚೈತ್ರಾ ಹಳ್ಳಿಕೇರಿ (Chaitra Hallikeri)  ಶಿಷ್ಯ ಹಾಗೂ ಖುಷಿ ಸಿನಿಮಾದಲ್ಲಿ ಅಭಿನಯಿಸಿ ಕನ್ನಡಿಗರಿಗೆ ಪರಿಚತರಾಗಿದ್ದರು. ನಟಿ, ನಿರ್ದೇಶಕಿ ಸ್ವಪ್ನ ಕೃಷ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಅಂತರಪಟ’ ಧಾರಾವಾಹಿಯಲ್ಲಿ ಬ್ಯುಸಿನೆಸ್ ವುಮೆನ್ ಚಾಂದಿನಿ ಪಾತ್ರದ ಮೂಲಕ ಚೈತ್ರಾ ಹಳ್ಳಿಕೇರಿ ಕಮ್‌ ಬ್ಯಾಕ್‌ ಕೂಡ ಆಗಿದ್ದರು. ಇದೀಗ ನಟಿ ವೈಯಕ್ತಿಕ ವಿವಾರಗಳಿಗೆ ಸಖತ್‌ ಸುದ್ದಿಯಾಗಿದ್ದಾರೆ.

‘ನಾಗಪಂಚಮಿ’ ಎಂಬ ತೆಲುಗು ಧಾರಾವಾಹಿಯಲ್ಲೂ ಕಾಣಿಸಿಕೊಳ್ಳುತ್ತಿರುವ ಚೈತ್ರಾ ಹಳ್ಳಿಕೇರಿ  ಇದೀಗ ವೈಯಕ್ತಿಕ ವಿಚಾರಗಳಿಗೆ ಸಖತ್‌ ಸುದ್ದಿಯಾಗಿದ್ದಾರೆ.  ಗೌಡ್ರು, ಖುಷಿ, ಶಿಷ್ಯ, ಗುನ್ನ, ಪಾರ್ಥ, ಶ್ರೀ ದಾನಮ್ಮ ದೇವಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದರು. ಮದುವೆಯ ನಂತರ ಸಿನಿಮಾ ರಂಗದಿಂದಲೇ ದೂರವಾದರು. ಜೀ ತೆಲುಗಿನ ತ್ರಿನಯನಿ ಧಾರಾವಾಹಿ  ಮೂಲಕ ಇನ್ನಷ್ಟು ಖ್ಯಾತಿ ಪಡೆದಿದ್ದಾರೆ ನಟಿ. ಇದೀಗ ತಮ್ಮ ಡಿವೋರ್ಸ್‌ ಕುರಿತಾಗಿ ಪೋಸ್ಟ್‌‌ ಶೇರ್‌ ಮಾಡಿಕೊಂಡಿದ್ದಾರೆ.

ಪೋಸ್ಟ್‌‌ನಲ್ಲಿ ಏನಿದೆ?

ಚೈತ್ರಾ ಪೋಸ್ಟ್‌‌‌ನಲ್ಲಿ “ಇವತ್ತು ನಾನು ಎಲ್ಲರಿಗೂ ಒಂದು ವಿಷಯ ಹೇಳಲು ಬಯಸುತ್ತೇನೆ. ಇನ್ಸ್ಟಾ ಮತ್ತು ಎಫ್‌ಬಿ ಮೆಸೇಜ್‌ಗಳಲ್ಲಿ ಎಲ್ಲರೂ ನನ್ನನ್ನು ಕೇಳುತ್ತಿದ್ದ ಪ್ರಶ್ನೆ ಡಿವೋರ್ಸಿನಾ ನೀವು? ಎಂದು. ಹೌದು.. ನಾನು ವಿಚ್ಛೇದನ ಪಡೆದಿದ್ದೇನೆ. ಅನೇಕ ಜನರು ನನ್ನ ಬಗ್ಗೆ ಯೋಚಿಸಿದ್ದಾರೆ. ಆದರೆ ನಾನು ಅವರನ್ನು ಕಡೆಗಣಿಸಿದೆ. ನಾನು ಜೀವನದಲ್ಲಿ ಬಲಶಾಲಿಯಾಗಿ ಮತ್ತು ಚುರುಕಾಗಿ ನನ್ನನ್ನು ರೂಪಿಸಿಕೊಂಡಿದ್ದೇನೆ. ನಾನು 17 ವರ್ಷಗಳಿಂದ ಕಟ್ಟಿಕೊಂಡಿದ್ದ ಬದುಕು ಈಗ ಇಲ್ಲ. ಅದರ ಬಗ್ಗೆ ನನಗೆ ಸಂತೋಷವಾಗಿದೆ. ನಾನು ಎದುರಿಸಿದ ಅವಮಾನ ಮತ್ತು ದ್ವೇಷವನ್ನು ಲೆಕ್ಕಿಸದೆ ಮುನ್ನಡೆಯಲು ನಿರ್ಧರಿಸಿದೆ.

News18

ಕಳೆದ ನಾಲ್ಕು ವರ್ಷಗಳಿಂದ ನೀವು ನನಗೆ ತೋರಿದ   ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ಜೀವನದಲ್ಲಿ ಕಷ್ಟದ ಸಮಯಗಳು ಬಂದೇ ಬರುತ್ತವೆ. ನನ್ನಂತೆ ಕಷ್ಟ ಪೆಉತ್ತಿರುವ ಎಲ್ಲರಿಗೂ ನಾನು ಹೇಳುವುದು ಒಂದೇ ಮಾತು.. ನಿಮ್ಮ ಜೀವನದ ಆಯ್ಕೆ ನಿಮ್ಮದೇ ಆಗಿರಬೇಕು  ಎಂದು ಚೈತ್ರಾ ಪೋಸ್ಟ್‌ನಲ್ಲಿ ಬರೆದಿದ್ದಾರೆ.

 

2006 ರಲ್ಲಿ ಉದ್ಯಮಿ ಬಾಲಾಜಿ ಅವರನ್ನು ವಿವಾಹವಾಗಿದ್ದರು. ನಟಿಗೆ ಇಬ್ಬರು ಮಕ್ಕಳಿದ್ದಾರೆ. 2021ರಲ್ಲಿ  ಡಿವೋರ್ಸ್‌ ಪಡೆದುಕೊಂಡರು ಎಂದು ವರದಿಯಾಗಿದೆ. ವಿಚ್ಛೇದನದ ನಂತರ ಕಳೆದ ನಾಲ್ಕು ವರ್ಷಗಳಲ್ಲಿ ತಾನು ಅನೇಕ ಕಿರುಕುಳ ಮತ್ತು ಅವಮಾನಗಳನ್ನು ಎದುರಿಸಿದ್ದೇನೆ ಎಂದು ಚೈತ್ರಾ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.

ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದಿದ್ದರು ಚೈತ್ರಾ ಹಳ್ಳಿಕೇರಿ. ಒಬ್ಬ ಗಂಡು ಮಗು ಹಾಗೂ ಒಬ್ಬ ಹೆಣ್ಣು ಮಗುವಿನ ಜೊತೆಗೆ ಚೈತ್ರಾ ಹಳ್ಳಿಕೇರಿ ಜೀವನ ನಡೆಸುತ್ತಿದ್ದಾರೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *