’24 ಗಂಟೆಗಳಲ್ಲಿ ವಿಡಿಯೋ ತೆಗೆದು ಹಾಕಿ.. ಇಲ್ಲವಾದಲ್ಲಿ..’: ನಟಿ Nayantharaಗೆ ನಟ Dhanush ಲಾಯರ್ ನೋಟಿಸ್!

ಚೆನ್ನೈ: ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಟ ಧನುಷ್ ನಡುವಿನ ಸಮರ ಮತ್ತೊಂದು ಹಂತಕ್ಕೇರಿದ್ದು, 24 ಗಂಟೆಗಳಲ್ಲಿ ವಿವಾದಿತ ವಿಡಿಯೋವನ್ನು ತೆಗೆದುಹಾಕದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನಟ ಧನುಷ್ ಪರ ವಕೀಲ ನಟಿ ನಯನತಾರಾ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ವಿವಾದಿತ ವಿಡಿಯೋ ಕುರಿತು ನಟ ಧನುಷ್ 10 ಕೋಟಿ ರೂಗಳ ಪರಿಹಾರ ಕೇಳಿ ನೋಟಿಸ್ ಕಳುಹಿಸಿದ ಬೆನ್ನಲ್ಲೇ ಧನುಷ್ ವಿರುದ್ಧ ಕೆಂಡಾಮಂಡಲರಾಗಿದ್ದ ನಟಿ ನಯನತಾರಾ ಬಹಿರಂಗ ಪತ್ರ ಬರೆದಿದ್ದರು.

ಇದೀಗ ಈ ಹೈವೋಲ್ಟೇಜ್ ಪ್ರಕರಣದಲ್ಲಿ ಧನುಷ್ ಪರ ವಕೀಲರು ಮಧ್ಯ ಪ್ರವೇಶ ಮಾಡಿದ್ದು, “24 ಗಂಟೆಗಳ ಒಳಗೆ ವಿಡಿಯೋ ತೆಗೆದುಹಾಕಿ ಅಥವಾ… ಕಠಿಣ ಕಾನೂನು ಕ್ರಮ ಎದುರಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.

“ನಾನೂ ರೌಡಿ ಧಾನ್ ಚಿತ್ರದ ಮೇಲೆ ನನ್ನ ಕಕ್ಷಿದಾರನ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸುವ ವಿಷಯವನ್ನು 24 ಗಂಟೆಗಳ ಒಳಗೆ ನಿಮ್ಮ ಕ್ಲೈಂಟ್‌ ನಯಂತರಾ ಅವರ ಬಿಯಾಂಡ್ ದಿ ಫೇರಿಟೇಲ್ ಎಂಬ ಹೆಸರಿನ ಸಾಕ್ಷ್ಯಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಅದನ್ನು ತೆಗೆದುಹಾಕಲು ನಿಮ್ಮ ಕ್ಲೈಂಟ್‌ಗೆ ಸಲಹೆ ನೀಡಿ ಎಂದು ವಕೀಲರು ಸೂಚಿಸಿದ್ದಾರೆ.

ಒಂದು ವೇಳೆ ವಿವಾದಿತ ವಿಡಿಯೋ ಕಟೆಂಟ್ ತೆಗೆಯದಿದ್ದರೆ ನಿಮ್ಮ ಕ್ಲೈಂಟ್ ಮತ್ತು ನೆಟ್‌ಫ್ಲಿಕ್ಸ್ ಇಂಡಿಯಾದ ವಿರುದ್ಧ 10 ಕೋಟಿ ರೂ.ಗಳ ಮೊತ್ತಕ್ಕೆ ಹಾನಿಯಾಗುವುದು ಸೇರಿದಂತೆ ಸೂಕ್ತ ಕಾನೂನು ಕ್ರಮವನ್ನು ಪ್ರಾರಂಭಿಸಲು ಒತ್ತಾಯಿಸಲಾಗುತ್ತದೆ ಎಂದು ಹೇಳಿದ್ದಾರೆ.

ನಯನತಾರಾ ಆರೋಪಗಳಿಗೆ ಧನುಷ್ ಉತ್ತರಿಸುತ್ತಾರೆ!

ಇದೇ ವೇಳೆ ನಯನತಾರಾ ಆರೋಪಕ್ಕೆ ನಟ ಧನುಷ್ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ವಕೀಲ ಅರುಣ್ ಹೇಳಿದ್ದು, ‘ಆರೋಪಗಳಿಗೆಲ್ಲಾ ನಟ ಧನುಷ್​ ಉತ್ತರ ನೀಡ್ತಾರೆ. ಯಾವುದೇ ವಿಷಯವಾದ್ರು ನಟ ಧನುಷ್ ನಿರ್ಧಾರ ತೆಗೆದುಕೊಳ್ತಾರೆ. ಧನುಷ್ ಏನು ಬೇಕಾದರೂ ಅನೌನ್ಸ್ ಮಾಡಬಹುದು ಎಂದು ವಕೀಲ ಅರುಣ್ ಹೊಸ ಬಾಂಬ್ ಸಿಡಿಸಿದ್ದಾರೆ.

ಏನಿದು ವಿವಾದ?

ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರ ‘ನಯನತಾರಾ: ಬಿಯಾಂಡ್ ದಿ ಫೇರಿಟೇಲ್’ ನಲ್ಲಿ ‘ನಾನುಮ್​ ರೌಡಿ ದಾ ’ ಸಿನಿಮಾದ ಒಂದು ಹಾಡನ್ನು ಬಳಸಲಾಗಿತ್ತು. ಧನುಷ್ ಈ ಚಿತ್ರದ ನಿರ್ಮಾಪಕರಾಗಿದ್ದರು. ಸಾಕ್ಷ್ಯಚಿತ್ರದಲ್ಲಿ ಈ ಹಾಡನ್ನು ಬಳಸಲು ಅನುಮತಿ ನೀಡಲು ನಟ ಧನುಷ್ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ನಯನತಾರಾ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಈ ಚಿತ್ರವನ್ನು ಬಿಟಿಎಸ್ ಸಾಕ್ಷ್ಯಚಿತ್ರದಲ್ಲಿ ಬಳಸಿದ್ದಕ್ಕಾಗಿ ಲೀಗಲ್ ನೋಟಿಸ್ ಕೂಡ ಕಳುಹಿಸಿದ್ರು ಎಂದು ನಯನತಾರಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *