ಡಾ. ಮಾಲಕರೆಡ್ಡಿ ಹೋಮಿಯೋಪತಿ ಕಾಲೇಜಿನ ಸಹಯೋಗದೊಂದಿಗೆ ಬೀದಿ ವ್ಯಾಪಾರಿಗಳಿಗೆ, ಕೂಲಿ ಕಾರ್ಮಿಕರಿಗೆ, ಸಾರ್ವಜನಿಕರಿಗೆ ಉಚಿತವಾಗಿ ಹೋಮಿಯೋಪಥಿ ರೋಗ ನಿರೋಧಕ ಮಾತ್ರೆಗಳನ್ನು ಮತ್ತು ಸ್ಯಾನಿಟೈಜರ್ ಕಿಟ್ ಗಳನ್ನು ವಿತರಿಸಲಾಯಿತು

ದಿನಾಂಕ 02.10.2020 ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಯವರ ಜಯಂತಿಯ ಶುಭ ಸಂದರ್ಭದಲ್ಲಿ ಕಲಬುರಗಿಯ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಡಾ. ಮಾಲಕರೆಡ್ಡಿ ಹೋಮಿಯೋಪತಿ ಕಾಲೇಜಿನ ಸಹಯೋಗದೊಂದಿಗೆ ಸುಲೇಪೇಟನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಕೌಟ್ಸ್ & ಗೈಡ್ಸ್ ರೋವರ್ ಮತ್ತು ರೇಂಜರ್ ಘಟಕ , ರಾಜ್ಯಶಾಸ್ತ್ರ ಚಾಣಕ್ಯ ಸಂಘ, ರೆಡ್ ಕ್ರಾಸ್ ಘಟಕಗಳ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಸುಲೇಪೇಟ ಗ್ರಾಮದ ಬೀದಿ ವ್ಯಾಪಾರಿಗಳಿಗೆ, ಕೂಲಿ ಕಾರ್ಮಿಕರಿಗೆ, ಸಾರ್ವಜನಿಕರಿಗೆ ಉಚಿತವಾಗಿ ಹೋಮಿಯೋಪಥಿ ರೋಗ ನಿರೋಧಕ ಮಾತ್ರೆಗಳನ್ನು ಮತ್ತು ಸ್ಯಾನಿಟೈಜರ್ ಕಿಟ್ ಗಳನ್ನು ವಿತರಿಸಲಾಯಿತು. ಪ್ರಾಂಶುಪಾಲರಾದ ಬಸವರಾಜ ಭಾಗಾರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಇಂದಿನ ಕರೋನಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯ ದಿಂದ ಜೀವನ ನಡೆಸಲು ದೇಹದ ರೋಗ ನಿರೋಧಕ ಶಕ್ತಿ ಮಹತ್ವದ ಪಾತ್ರ ವಹಿಸುವುದರಿಂದ ಸುಲೇಪೇಟ ಗ್ರಾಮದ ಸಾರ್ವಜನಿಕರಿಗೆ ಉಚಿತವಾಗಿ ಹೋಮಿಯೋಪಥಿ ಮಾತ್ರೆಗಳನ್ನು ಹಾಗೂ ಸ್ಯಾನಿಟೈಜರ್ ವಿತರಿಸುವ ಕಾರ್ಯ ಸಮಾಜಮುಖಿಯಾಗಿದೆ ಎಂದು ಹೇಳಿದರು. ವಿ. ಕ ವರದಿಗಾರರಾದ ಮೋಯಿಜ್ ಪಟೇಲ್ ಅತಿಥಿಗಳಾಗಿ ಭಾಗವಹಿಸಿದ್ದರು. ಸ್ಕೌಟ್ಸ್ ಮತ್ತು ಗೈಡ್ಸ್ ರೋವರ್ ಘಟಕದ ಸಂಚಾಲಕರಾದ ಶ್ರೀ ದಯಾನಂದ ರಟಕಲ್ ಅವರು ಕಾರ್ಯಕ್ರಮದ ನಿರ್ವಹಣೆ ಮಾಡಿದರು. ಶ್ರೀಮತಿ ಬಸವರಾಜೇಶ್ವರಿಯವರು ಹೋಮಿಯೋಪಥಿ ಮಾತ್ರೆಗಳ ಮಹತ್ವ ಮತ್ತು ಉಪಯೋಗಿಸುವ ರೀತಿಯನ್ನು ತಿಳಿಸಿಕೊಟ್ಟರು. ಶ್ರೀ ಶಿವಾನಂದ ಹಿರೇಮಠ ವಂದಿಸಿದರು. ಪ್ರಾಧ್ಯಾಪಕರಾದ ಶಿವಶರಣಪ್ಪ, ಅಲ್ಲಮಪ್ರಭು, ಹಸೀನಾ ಬೇಗಂ, ಶೇಖ್ ಸಿರಾಜ್ ಪಟೇಲ್, ಸುವರ್ಣ ಹಾಗೂ ವಿದ್ಯಾರ್ಥಿಗಳಾದ ಶಿವರಾಜ, ರಾಹುಲ್, ಜ್ಯೋತಿ, ಜಗನ್ನಾಥ ಮುಂತಾದವರು ಹಾಜರಿದ್ದರು.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *