ಮಂತ್ರಾಲಯ ರಾಘವೇಂದ್ರ ಸ್ವಾಮಿ ದರ್ಶನ ಸಮಯಕ್ಕೆ ವಂದೇ ಭಾರತ್ ರೈಲು ಸಮಯ ಬದಲು : ಕೆಜೆ ಜಾರ್ಜ್ ಮನವಿ

ಬೆಂಗಳೂರು : ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿ ದರ್ಶನ ಬೆಳಿಗ್ಗೆ 6 ರಿಂದ ರಾತ್ರಿ 8 ರ ವರೆಗೆ ಇರಲಿದ್ದು ಆ ಸಮಯಕ್ಕೆ ಅನುಗುಣವಾಗಿ ಬೆಂಗಳೂರು ಕಲಬುರಗಿ ವಂದೇ ಭಾರತ್ ರೈಲು ಸಂಚಾರ ಸಮಯ ಬದಲು ಮಾಡಲು ಸಚಿವ ಕೆಜೆ ಜಾರ್ಚ್ ಕೇಂದ್ರ ರೈಲು ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದಾರೆ.

ವಂದೇ ಭಾರತ್ ರೈಲು (ನಂ. 22232) ಬೆಂಗಳೂರಿನ ಸ‌ರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ (ಎಸ್.ಎಂ.ವಿ) ಟರ್ಮಿನಲ್ಸ್, ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದಿಂದ ನಿರ್ಗಮಿಸುವ ಸಮಯವನ್ನು ಮಧ್ಯಾಹ್ನ 2.40 ಗಂಟೆಯ ಬದಲಾಗಿ ಬೆಳಿಗ್ಗೆ ಸುಮಾರು 7.00 ಅಥವಾ 8.00 ಗಂಟೆಗೆ ನಿಗಧಿಪಡಿಸಿದರೆ ಅಥವಾ ಕಲಬುರಗಿ ರೈಲ್ವೆ ನಿಲ್ಯಾಣದಿಂದ ಹೊರಡುವ ಸಮಯವನ್ನು ಬೆಳಿಗ್ಗೆ 5.15 ಗಂಟೆಯ ಬದಲಾಗಿ 8.30 ಅಥವಾ 9.00 ಗಂಟೆಗೆ ನಿಗಧಿಪಡಿಸಿದರೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಆಗಮಿಸುವ ಮತ್ತು ದೇವರ ದರ್ಶನದ ನಂತರ ತೆರಳುವ ಲಕ್ಷಾಂತರ ಭಕ್ತಾಧಿಗಳಿಗೆ ಅನುಕೂಲವಾಗುತ್ತದೆ, ಎಂದು ಜಾರ್ಜ್ ಮನವಿ ಮಾಡಿದ್ದಾರೆ

ವಂದೇ ಭಾರತ್ ರೈಲು (ನಂ.22232) ಬೆಂಗಳೂರಿನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ (ಎಸ್.ಎಂ.ವಿ) ಟರ್ಮಿನಲ್ಸ್, ಬೈಯಪ್ಪನಹಳ್ಳಿ ನಿಲ್ದಾಣದಿಂದ ಮಧ್ಯಾಹ್ನ, 2.40 ಗಂಟೆಗೆ ಹೊರಟು ರಾತ್ರಿ 8.20ಕ್ಕೆ ಮಂತ್ರಾಲಯ ರಸ್ತೆ ನಿಲ್ದಾಣ ತಲುಪಿ, ತದನಂತರ ರಾತ್ರಿ 11.30ಕ್ಕೆ ಕಲಬುರಗಿಯಿಂದ ನಿಲಯಕ್ಕೆ ಸೇರಲಿದೆ. ಇದೇ ರೈಲು (ನಂ. 22231) ಕಲಬುರಗಿ ನಿಲ್ದಾಣದಿಂದ ಮುಂದಿನ ದಿನ ಬೆಳಿಗ್ಗೆ 5.15 ಗಂಟೆಗೆ ಹೊರಟು 7.10ಕ್ಕೆ ಮಂತ್ರಾಲಯ ರಸ್ತೆ ನಿಲ್ದಾಣಕ್ಕೆ ತಲುಪಿ, ಅಲ್ಲಿಂದ ನಿರ್ಗಮಿಸಿದ ನಂತರ ಮಧ್ಯಾಹ್ನ 2.00 ಗಂಟೆಗೆ ಬೆಂಗಳೂರಿನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ (ಎಸ್.ಎಂ.ವಿ) ಟರ್ಮಿನಲ್ಸ್ ಬೈಯಪ್ಪನಹಳ್ಳಿ ಗ್ರಾಮ ನಿಲ್ದಾಣಕ್ಕೆ ಬಂದು ಸೇರುತ್ತದೆ.

ಈ ರೈಲಿನಲ್ಲಿ ಆಗಮಿಸುವ ಮತ್ತು ನಿರ್ಗಮಿಸುವ ಪಯಣಿಸುವ ಲಕ್ಷಾಂತರ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಭಕ್ತಾದಿಗಳಿಗೆ ಗೊಂದಲ ಉಂಟಾಗಲು ಕಾರಣವಾಗಿದೆ. ಶ್ರೀ ಗುರು ರಾಯರ ದರ್ಶನ ಸಮಯ ಪ್ರತಿ ದಿನ ಬೆಳಗಿನ 6.00 ಗಂಟೆಯಿಂದ ರಾತ್ರಿ 8.30 ಗಂಟೆಯವರೆಗೆ ಇರುತ್ತದೆ.  ಭಕ್ತಾಧಿಗಳು ರಾತ್ರಿ 6.20 ಗಂಟೆಗೆ ನಿಲ್ದಾಣ ರಸ್ತೆಗೆ ತಲುಪಿ, ಮಂತ್ರಾಲಯ ರಸ್ತೆಯಿಂದ ಮಂತ್ರಾಲಯಕ್ಕೆ ರಸ್ತೆ ಮೂಲಕ ತಲುಪಲು ಕನಿಷ್ಠ 40-50 ನಿಮಿಷಗಳು, ಆ ಸಮಯಕ್ಕೆ ಶ್ರೀ ರಾಯರ ದರ್ಶನದ ಸಮಯ ಮುಗಿದ ನಂತರ ಮುಂದಿನ ದಿನ ಬೆಳಿಗ್ಗೆ 6.00 ಗಂಟೆಗೆ ಭಕ್ತಾದಿಗಳ ದರ್ಶನದಿಂದ ರಾಯರ ದರ್ಶನ ಪಡೆದು ಮತ್ತೆ ಬೆಳಿಗ್ಗೆ, 7.10  ರೈಲನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ.

ವಂದೇ ಭಾರತ್ ರೈಲು (ನಂ. 22232) ಬೆಂಗಳೂರಿನ ಸ‌ರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ (ಎಸ್.ಎಂ.ವಿ) ಟರ್ಮಿನಲ್ಸ್, ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದಿಂದ ನಿರ್ಗಮಿಸುವ ಸಮಯವನ್ನು ಮಧ್ಯಾಹ್ನ 2.40 ಗಂಟೆಯ ಬದಲಾಗಿ ಬೆಳಿಗ್ಗೆ ಸುಮಾರು 7.00 ಅಥವಾ 8.00 ಗಂಟೆಗೆ ನಿಗಧಿಪಡಿಸಿದರೆ ಅಥವಾ ಕಲಬುರಗಿ ರೈಲ್ವೆ ನಿಲ್ಯಾಣದಿಂದ ಹೊರಡುವ ಸಮಯವನ್ನು ಬೆಳಿಗ್ಗೆ 5.15 ಗಂಟೆಯ ಬದಲಾಗಿ 8.30 ಅಥವಾ 9.00 ಗಂಟೆಗೆ ನಿಗಧಿಪಡಿಸಿದರೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಆಗಮಿಸುವ ಮತ್ತು ದೇವರ ದರ್ಶನದ ನಂತರ ತೆರಳುವ ಲಕ್ಷಾಂತರ ಭಕ್ತಾಧಿಗಳಿಗೆ ಅನುಕೂಲವಾಗುತ್ತದೆ ಹಾಗೂ ರಾಯರ ದರ್ಶನಕ್ಕೆ ಸ್ವಂತ ವಾಹನಗಳಲ್ಲಿ ತೆರಳುವ ಭಕ್ತರ ಸಂಖ್ಯೆ ಕಡಿಮೆಯಾಗಿ ಹೆಚ್ಚಾಗಿ ರೈಲು ಪ್ರಯಾಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಇದರಿಂದ ರೈಲ್ವೆ ಇಲಾಖೆಗೆ ಹೆಚ್ಚಿನ ಆದಾಯ ಬರುವುದರ ಜೊತೆಗೆ ಸಂಚಾರ ದಟ್ಟಣೆ ಕಡಿಮೆಯಾಗಿ ವಾಯು ಮಾಲಿನ್ಯವನ್ನು ತಡೆಗಟ್ಟಿದಂತಾಗುತ್ತದೆ. ಇದರಿಂದ ಸ್ಥಳೀಯ ಸಾರ್ವಜನಿಕ ವಾಹನಗಳನ್ನು ಭಕ್ತಾಧಿಗಳು ಹೆಚ್ಚಿಗೆ ಬಳಸುವುದರಿಂದ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಕಲ್ಪಿಸಿದಂತಾಗಿ ಅವರ ಜೀವನ ಮಟ್ಟವೂ ಸಹ ಸುಧಾರಿಸುತ್ತದೆ.ಈ ಎಲ್ಲಾ ಅಂಶಗಳ ಹಿನ್ನಲೆಯಲ್ಲಿ ವಂದೇ ಭಾರತ್ ರೈಲಿನ ಆಗಮನ ಮತ್ತು ನಿರ್ಗಮನ ಸಮಯದಲ್ಲಿ ಬದಲಾವಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಲು ತಮ್ಮನ್ನು ಕೋರುತ್ತೇನೆ, ಎಂದು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *