ಡ್ರಗ್ಸ್ ವಿಚಾರ ಹಳ್ಳ ಹಿಡಿಯುತ್ತೆ ಎಂದು ಮೊದಲೇ ಹೇಳಿದ್ದೆ. ಆ ಮಾಜಿ ಸಿಎಂ ಯಾರು ಅಂತ ತನಿಖೆಯಾಗಲಿ -ಎಚ್ ಡಿ ಕೆ
ಡ್ರಗ್ಸ್ ವಿಚಾರ ಹಳ್ಳ ಹಿಡಿಯುತ್ತೆ ಎಂದು ಮೊದಲೇ ಹೇಳಿದ್ದೆ , ದೊಡ್ಡ ವ್ಯಕ್ತಿಗಳು ಇದರಲ್ಲಿ ಭಾಗಿ ಆಗಿದ್ದಾರೆ ಎಂದು
ಕಪೋಲ ಕಲ್ಪಿತ ಸ್ಟೋರಿ ಬರ್ತಿವೆ, ಟಿವಿ ಆ್ಯಂಕರ್ ಬಗ್ಗೆ ಲಿಂಕ್ ಇರುವ ಬಗ್ಗೆ ಮಂಗಳೂರು ಪೊಲೀಸ್ ನೋಟಿಸ್ ಕೊಟ್ಟಿದ್ದಾರೆ
ಅವರಿಗೆ ನೋಟಿಸ್ ಬಂದ ತಕ್ಷಣ ಮೂರು ರಾಜಕೀಯ ಪಕ್ಷಗಳ ಪ್ರಭಾವಿ ನಾಯಕ ಜೊತೆಗೆ ಚರ್ಚೆ ಮಾಡಿದ್ದಾರೆ ಎಂಬ ಸುದ್ದಿ ನಿನ್ನೆ ನಾನು ಟಿವಿಯಲ್ಲಿ ನೋಡಿದೆ
ಎರಡು ವಾರಿ ಸಿಎಂ ಆಗಿದ್ರು, ಮಾಜಿ ಸಿಎಂ ಮಗ, ನಾನು ಎರಡು ಬಾರಿ ಸಿಎಂ ಆಗಿದ್ದೆ, ಯಡಿಯೂರಪ್ಪ ನಾಲ್ಕು ಬಾರಿ ಸಿಎಂ, ಜಗದೀಶ್ ಶೆಟ್ಟರ್, ಸದಾನಂದ ಗೌಡ, ಸಿದ್ದರಾಮಯ್ಯ ಇದ್ದೇವೆ

ಈ ವಿಚಾರದ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಲಿ, ಮಾಜಿ ಸಿಎಂ ಯಾರು ಅನ್ನೋದನ್ನು ಜನತೆಗೆ ತಿಳಿಸಲಿ,
ಸರ್ಕಾರ, ಗೃಹ ಸಚಿವರಿಗೆ ಈ ಬಗ್ಗೆ ಪತ್ರ ಬರೆಯುತ್ತೇನೆ, ತನಿಖೆಗೆ ಯಾರು ಒತ್ತಡ ಹೇರಿದ್ರು ಅನ್ನೋದು ಬಹಿರಂಗ ಆಗಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.