ಆರೋಪಿಯ ವಿಚಾರಣೆ ವೇಳೆ ರಾಜಕೀಯ ನಾಯಕರ 50ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ಪತ್ತೆ

ಬೆಂಗಳೂರು,ಜು.5- ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಮುಖಂಡರೊಬ್ಬರ ವಿಚಾರಣೆಯ ವೇಳೆ ಪ್ರಮುಖ ರಾಜಕೀಯ ನಾಯಕರ 50ಕ್ಕೂ ಹೆಚ್ಚು ಅಶ್ಲೀಲ ವೀಡಿಯೋಗಳು ಪತ್ತೆಯಾಗಿವೆ. 2024ರ ನವೆಂಬರ್‌ 11ರಂದು ನಡೆದಿದ್ದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಮೀತ್‌ರಾಜ್‌ ಧರೆಗುಡ್ಡೆ ಅವರನ್ನು 6 ತಿಂಗಳ ಬಳಿಕ ಬಂಧಿಸಲಾಗಿದೆ.

ಆತನಿಂದ ಸಾಕ್ಷ್ಯಗಳನ್ನು ಕಲೆ ಹಾಕಲು ಆತನ ಮೊಬೈಲ್‌ನ್ನು ವಶಕ್ಕೆ ಪಡೆದು, ಡಿಲಿಟ್‌ ಆಗಿದ್ದ ದತ್ತಾಂಶಗಳನ್ನು ಮರು ಸ್ಥಾಪನೆಯ ವೇಳೆ ಬೆಚ್ಚಿಬೀಳಿಸುವಂತಹ ಅಶ್ಲೀಲ ವೀಡಿಯೋಗಳು ಪತ್ತೆಯಾಗಿವೆ.

ಇದನ್ನು ಪರಿಶೀಲಿಸಿದ ಮೂಡಬಿದರೆ ಪೊಲೀಸ್‌‍ ಇನ್ಸ್ ಪೆಕ್ಟರ್‌ ಮತ್ತೊಂದು ಸ್ವಯಂ ಪ್ರೇರಿತ ಎಫ್‌ಐಆರ್‌ ದಾಖಲಿಸಿದ್ದು, ಮೊಬೈಲ್‌ನಲ್ಲಿ ಪತ್ತೆಯಾಗಿರುವ ವೀಡಿಯೋಗಳು ಸಮಾಜದ ಸ್ವಾಸ್ಥ್ಯಕ್ಕೆ ಹಾನಿಕಾರಕ ಎಂದು ಭಾವಿಸಿದ್ದಾರೆ.

ಈ ನಿಟ್ಟಿನಲ್ಲೂ ವಿಚಾರಣೆ ಮುಂದುವರೆದಿದೆ. ಅಶ್ಲೀಲ ವೀಡಿಯೋದ ಪಾತ್ರದಾರಿ ಪ್ರಮುಖ ರಾಜಕಾರಣಿಯ ಮಾಹಿತಿಯನ್ನು ರಹಸ್ಯವಾಗಿಯೇ ಇಡಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *