ನಾಗರಿಕರೇ ಎಚ್ಚರ ಎಚ್ಚರ!! ಮಾಸ್ಕ್ ಧರಿಸಿಲ್ಲ ಅಂದ್ರೆ ದಂಡ ಎಷ್ಟು ಗೊತ್ತಾ?
ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದವರಿಗೆ ಕಾದಿದೆ ಬೃಹತ್ ದಂಡ.
ಹೌದು. ಇಷ್ಟು ದಿನ ಮಾಸ್ಕ್ ಧರಿಸದೆ ಇದ್ದವ್ರಿಗೆ 200 ರುಪಾಯಿ ದಂಡ ಹಾಕಲಾಗ್ತಿತ್ತು ಆದ್ರೀಗ ಸರ್ಕಾರದಿಂದ ಅಧಿಕೃತವಾಗಿ ಮಾಸ್ಕ್ ದಂಡವನ್ನು ಹೆಚ್ಚಳಮಾಡಲಾಗಿದೆ. ಹೀಗಾಗಿ ಇನ್ಮುಂದೆ ಮಾಸ್ಕ್ಹಾಕ್ದೆ ಇದ್ರೆ ಭಾರೀ ದಂಡ ಫಿಕ್ಸ್..
ನಿನ್ನೆಯಷ್ಟೇ ಬಿಬಿಎಂಪಿಯಿಂದ ಮಾಸ್ಕ್ ಹಾಕದೆ ಇದ್ರೆ ವಿಧಿಸುವ ದಂಡವನ್ನು ಹೆಚ್ಚಳ ಮಾಡೋ ಬಗ್ಗೆ ಹೇಳಲಾಗಿತ್ತು. ಅದು ಇನ್ನುರು ಮುನ್ನೂರು ರುಪಾಯಿ ಅಲ್ಲ ಬರೋಬ್ಬರಿ 1000 ರೂಪಾಯಿಗೆ ದಂಡವನ್ನು ಏರಿಕೆ ಮಾಡೋದಾಗಿ ಹೇಳಲಾಗಿತ್ತು. ಇದ್ರ ಬೆನ್ನಲ್ಲೇ ಇಂದು ಸರ್ಕಾರದಿಂದ ಮಾಸ್ಕ್ ದಂಡವನ್ನು 1000 ರೂಪಾಯಿಗೆ ಹೆಚ್ಚುಸುವಂತೆ ಅಧಿಕೃತ ಆದೇಶ ಬಂದಿದೆ.
ಹೀಗಾಗಿ ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದೇ ಇರೋವ್ರಿಗೆ 1000 ರೂಪಾಯಿ ಹಾಗೂ ಬಿಬಿಎಂಪಿ ಹೊರತುಪಡಿಸಿ, 500 ರೂಪಾಯಿ ದಂಡವನ್ನು ವಿಧಿಸಲು ಆರಂಭ ಮಾಡಲಾಗಿದೆ. ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರ ಆದೇಶ ನೀಡಿದ್ದು, ಮಾರ್ಷಲ್ಗಳಿಗೆ ಆಯುಕ್ತ ಮಂಜುನಾಥ್ ಪ್ರಸಾದ್ 1000 ರೂಪಾಯಿ ದಂಡದ ಕುರಿತು ಮಾರ್ಷಲ್ಗಳಿಗೆ ಸೂಚನೆ ನೀಡಿದ್ದಾರೆ.
ಇನ್ನು ಇತ್ತ ದಂಡ ಹೆಚ್ಚಳವಾಗ್ತಿದ್ದಂತೆಯೇ ಮಾರ್ಷಲ್ಗಳು ಫೀಲ್ಡ್ಗೆ ಇಳಿದಿದ್ರು. ಇನ್ನು ಡಿವೈಸರ್ನಲ್ಲಿ 1000 ರೂಪಾಯಿ ದಂಡದ ಬಗ್ಗೆ ಆಪ್ಡೇಟ್ ಆಗದ ಕಾರಣ, ಮಾಸ್ಕ್ ಧರಿಸದವ್ರಿಗೆ 200 ರೂಪಾಯಿ ದಂಡ ಹಾಕೋದ್ರ ಜೊತೆಗೆ ಕೊರೋನಾ ಟೆಸ್ಟ್ ಮಾಡಿಸಿದ್ರು