ಇಂದಿನಿಂದ ಸಾರ್ವಜನಿಕರಿಗೆ ಗೋಕರ್ಣ ಮಹಾಬಲೇಶ್ವರನ ದರ್ಶನ ಭಾಗ್ಯ

ಶ್ರೀ ಕ್ಷೇತ್ರ ಗೋಕರ್ಣದ ಮಹಾಬಲೇಶ್ವರ ದೇವಾಲಯದಲ್ಲಿ  ಇಂದು (05-10-2020) ಮುಂಜಾನೆ 6-00 ಕ್ಕೆ ಸರಿಯಾಗಿ ಸರ್ವಜನರಿಗಾಗಿ ಆತ್ಮಲಿಂಗ ದರ್ಶನ , ಮತ್ತು ಪೂಜಾಸೇವೆ
ಪ್ರಾರಂಭ ಗೊಂಡಿತು . ಕೋವಿಡ್ 19 ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮದ  ಬಗೆಗೆ ಆದ್ಯತೆ ನೀಡಲಾಗಿದೆ.

 

ತಿಳುವಳಿಕೆಯ ಬೋರ್ಡ್ ಹಾಕಿದ್ದಲ್ಲದೆ ಬಂದವರಿಗೆ ದೇವಾಲಯದ ಸಿಬ್ಬಂದಿಗಳು ತಿಳಿಸಿ ಹೇಳುತ್ತಲಿದ್ದಾರೆ . ಪೂಜೆ ಮಾಡುವವರು ಕುಳಿತು ಸಂಕಲ್ಪ ಮಾಡಲು ಅನುಕೂಲವಾಗಲೆಂದು ಗರ್ಭಗುಡಿಯ ಹೊರಗೆ ದೇವಾಲಯದ ಒಳ ಆವರಣದಲ್ಲಿ ಗುರುತು ಮಾಡಿದ್ದು ಇದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವೆನ್ನಿಸಿದೆ .

    

ದೇವಾಲಯದ ಆಡಳಿತ ಮತ್ತು ಉಪಾಧಿವಂತ ಮಂಡಳಿ ಪರಸ್ಪರ ಸಮಾಲೋಚನೆ ಮಾಡಿ ಪೂಜಾವಿಧಾನಗಳ ರೂಪು ರೇಷೆ ಗೊತ್ತುಮಾಡಿದೆ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *