ತಿರುಪತಿಗೆ ಹೋದಾಗ ತಪ್ಪದೇ ಭೇಟಿ ನೀಡಬೇಕಾದ 9 ದೇವಸ್ಥಾನಗಳಿವು.!
ಆಂಧ್ರಪ್ರದೇಶದಲ್ಲಿ ಭಾರತದ ಅತ್ಯಂತ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾಗಿ ಕರೆಸಿಕೊಂಡಿರುವ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನವು ಪ್ರತಿವರ್ಷ ಲಕ್ಷಾಂತರ ಭಕ್ತರನ್ನು ಸೆಳೆಯುತ್ತದೆ. ಇಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯು ನೆಲೆಸಿದ್ದು, ಭಕ್ತರ ಕಷ್ಟವನ್ನು ದೂರವಾಗಿಸುತ್ತಾನೆ ಎಂದು ನಂಬಲಾಗಿದೆ. 7 ಬೆಟ್ಟಗಳ ಒಡೆಯ ತಿಮ್ಮಪ್ಪನನ್ನು ದರ್ಶನ ಪಡೆದ ನಂತರ ನೀವು ಸಮೀಪದ ಯಾವೆಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡಬಹುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. ತಿರುಪತಿ ಆಸುಪಾಸಿನಲ್ಲಿ 9 ಪ್ರಸಿದ್ಧ ದೇವಸ್ಥಾನಗಳಿವೆ ಅವು ಹೀಗಿವೆ…
ಶ್ರೀ ಕಾಳಹಸ್ತಿ ದೇವಸ್ಥಾನ: ತಿರುಪತಿಯಿಂದ 35 ಕಿ.ಮೀ ದೂರ
ತಿರುಪತಿಗೆ ಭೇಟಿ ನೀಡುವ ಸಾಕಷ್ಟು ಭಕ್ತರು ತಪ್ಪದೇ ಶ್ರೀ ಕಾಳಹಸ್ತಿಶ್ವರ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇದು ತಿರುಪತಿಯಿಂದ ಕೇವಲ 35 ಕಿ.ಮೀ ದೂರದಲ್ಲಿದೆ. ಇದು ಪಂಚಭೂತ ಸ್ಥಳಗಳಲ್ಲಿ ಒಂದಾಗಿದ್ದು, ಶಿವನಿಗೆ ಅರ್ಪಿತವಾದ ಪ್ರಾಚೀನ ದೇವಾಲಯವಾಗಿದೆ. ಇಲ್ಲಿ ಶಿವನನ್ನು ಕಾಳಹಸ್ತೀಶ್ವರ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ. ಹಾಗೆಯೇ, ಶಿವನ ಪತ್ನಿ ಪಾರ್ವತಿ ದೇವಿಯನ್ನು ಜ್ಞಾನಪ್ರಸುನಾಂಬಿಕೆ ಎಂದು ಆರಾಧಿಸಲಾಗುತ್ತದೆ. ಈ ದೇವಾಲಯವು ‘ರಾಹು ಕೇತು ಕ್ಷೇತ್ರ’ ವಾಗಿ ಪ್ರಸಿದ್ಧಿ ಪಡೆದಿದೆ.
ದೇವಾಲಯ ಪ್ರವೇಶ ಸಮಯ: ಬೆಳಿಗ್ಗೆ 6 ರಿಂದ ರಾತ್ರಿ 9 ರವರೆಗೆ.
ಪರಶುರಾಮೇಶ್ವರ ದೇವಾಲಯ: ತಿರುಪತಿಯಿಂದ 30 ಕಿ.ಮೀ ದೂರ
ತಿರುಪತಿಯಿಂದ ಕೇವಲ 30 ಕಿ.ಮೀ ದೂರದಲ್ಲಿರುವ ಈ ಪರಶುರಾಮೇಶ್ವರ ದೇವಸ್ಥಾನವು ಪ್ರಾಚೀನ ಶಿವ ದೇವಾಲಯಗಳಲ್ಲಿ ಒಂದಾಗಿದೆ. ದಂತಕಥೆಯ ಪ್ರಕಾರ, ಈ ಆಲಯವು ಸುಮಾರು 2200 ವರ್ಷಗಳಿಗಿಂತ ಹಳೆಯದು ಎಂದು ನಂಬಲಾಗಿದೆ. ಈ ದೇವಾಲಯದ ಗರ್ಭಗುಡಿಯಲ್ಲಿ ಪರಶುರಾಮೇಶ್ವರ ನೆಲೆಸಿದ್ದು, ತ್ರಿಮೂರ್ತಿಗಳು ಒಂದೇ ಸೂರಿನಡಿ ನೆಲೆಸಿದ್ದಾರೆ.
ದೇವಾಲಯ ಸಮಯ: ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ.
ಪದ್ಮಾವತಿ ದೇವಸ್ಥಾನ, ತಿರುಪತಿಯಿಂದ 6 ಕಿ.ಮೀ ದೂರ
ಅಲಮೇಲಿ ಮಂಗಾಪುರಂ ಎಂದೇ ಕರೆಯಲ್ಪಡುವ ಶ್ರೀ ಪದ್ಮಾವತಿ ಅಮ್ಮ ದೇವಸ್ಥಾನವು ತಿರುಪತಿ ತಿಮ್ಮಪ್ಪನ ಪತ್ನಿ ಲಕ್ಷ್ಮಿ ದೇವಿಗೆ ಸಮರ್ಪಿತವಾಗಿದೆ. ತಿರುಪತಿಗೆ ಹೋಗುವ ಬಹುತೇಕ ಭಕ್ತರು ದೇವಿಯ ಆಶೀರ್ವಾದ ಪಡೆಯಲು ಭೇಟಿ ನೀಡುತ್ತಾರೆ.
ಪ್ರವೇಶ ಸಮಯ: ಬೆಳಿಗ್ಗೆ 5:25 ರಿಂದ ರಾತ್ರಿ 9:30 ರವರೆಗೆ.
ಕಲ್ಯಾಣ ವೆಂಕಟೇಶ್ವರ ದೇವಸ್ಥಾನ: ತಿರುಪತಿಯಿಂದ 45 ಕಿ.ಮೀ ದೂರ
ತಿರುಪತಿಯಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ಕಲ್ಯಾಣ ವೆಂಕಟೇಶ್ವರ ದೇವಸ್ಥಾನವು, ವಿಷ್ಣುವಿಗೆ ಸಮರ್ಪಿತವಾದ ಮತ್ತೊಂದು ಆಲಯವಾಗಿದೆ. ಈ ಆಲಯವು ಶ್ರೀ ವೆಂಕಟೇಶ್ವರ ಸ್ವಾಮಿ ಮತ್ತು ಪದ್ಮಾವತಿ ದೇವಿ ವಿವಾಹವಾದ ಸ್ಥಳ ಎಂದು ಹೇಳಲಾಗುತ್ತದೆ. ಪದ್ಮಾವತಿ ದೇವಿಯ ತಂದೆ ಆಕಾಶ ರಾಜ ಅವರನ್ನು ಮೊದಲು ಶ್ರೀನಿವಾಸನಿಗೆ ದೇವಾಲಯವನ್ನು ನಿರ್ಮಿಸಿದವರು ಎಂದು ಪರಿಗಣಿಸಲಾಗಿದೆ.
ದೇವಾಲಯ ಸಮಯ: ಬೆಳಿಗ್ಗೆ 5 ರಿಂದ ರಾತ್ರಿ 8 ರವರೆಗೆ.
ಕಲ್ಯಾಣ ವೆಂಕಟೇಶ್ವರ ದೇವಸ್ಥಾನ: ತಿರುಪತಿಯಿಂದ 45 ಕಿ.ಮೀ ದೂರ
ತಿರುಪತಿಯಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ಕಲ್ಯಾಣ ವೆಂಕಟೇಶ್ವರ ದೇವಸ್ಥಾನವು, ವಿಷ್ಣುವಿಗೆ ಸಮರ್ಪಿತವಾದ ಮತ್ತೊಂದು ಆಲಯವಾಗಿದೆ. ಈ ಆಲಯವು ಶ್ರೀ ವೆಂಕಟೇಶ್ವರ ಸ್ವಾಮಿ ಮತ್ತು ಪದ್ಮಾವತಿ ದೇವಿ ವಿವಾಹವಾದ ಸ್ಥಳ ಎಂದು ಹೇಳಲಾಗುತ್ತದೆ. ಪದ್ಮಾವತಿ ದೇವಿಯ ತಂದೆ ಆಕಾಶ ರಾಜ ಅವರನ್ನು ಮೊದಲು ಶ್ರೀನಿವಾಸನಿಗೆ ದೇವಾಲಯವನ್ನು ನಿರ್ಮಿಸಿದವರು ಎಂದು ಪರಿಗಣಿಸಲಾಗಿದೆ.
ದೇವಾಲಯ ಸಮಯ: ಬೆಳಿಗ್ಗೆ 5 ರಿಂದ ರಾತ್ರಿ 8 ರವರೆಗೆ.
ಶ್ರೀ ವರ ಸಿದ್ಧಿ ವಿನಾಯಕ ದೇವಸ್ಥಾನ: ತಿರುಪತಿಯಿಂದ ಸುಮಾರು 72 ಕಿ.ಮೀ ದೂರ
ಕಾಣಿಪಾಕಂ ವಿನಾಯಕ ದೇವಸ್ಥಾನವು ದಕ್ಷಿಣ ಭಾರತದಲ್ಲಿ ಬಹಳ ಪ್ರಸಿದ್ಧವಾಗಿದೆ. ಇದನ್ನು ಶ್ರೀ ಸ್ವಯಂಭು ವರ ಸಿದ್ಧಿ ವಿನಾಯಕ (ಗಣಪತಿ) ದೇವಸ್ಥಾನ ಎಂದೇ ಕರೆಯುತ್ತಾರೆ. ವಿನಾಯಕನ ವಿಗ್ರಹವು ಸ್ವಯಂಭು ಆಗಿದ್ದು, ದಿನದಿಂದ ದಿನಕ್ಕೆ ಗಾತ್ರದಲ್ಲಿ ಬೆಳೆಯುತ್ತಿದೆ ಎಂದು ನಂಬಲಾಗಿದೆ. ಪ್ರಸ್ತುತ, ವಿಗ್ರಹದ ಮೊಣಕಾಲುಗಳು ಮತ್ತು ಹೊಟ್ಟೆ ಮಾತ್ರ ಗೋಚರಿಸುತ್ತದೆ.
ದೇವಾಲಯ ಸಮಯ: ಬೆಳಿಗ್ಗೆ 5.30 ರಿಂದ ರಾತ್ರಿ 9 ರವರೆಗೆ.
ಪಲ್ಲಿಕೊಂಡೇಶ್ವರ ಸ್ವಾಮಿ ದೇವಸ್ಥಾನ: ತಿರುಪತಿಯಿಂದ ಸುಮಾರು 92 ಕಿ.ಮೀ ದೂರ
ತಿರುಪತಿಯಿಂದ ಸುಮಾರು ಪಲ್ಲಿಕೊಂಡೇಶ್ವರ ಸ್ವಾಮಿ ದೇವಸ್ಥಾನವು ಸುಮಾರು 100 ಕಿ.ಮೀ ಗಿಂತ ಕಡಿಮೆ ಅಂತರವಿದೆ. ಇದು ಒಂದು ವಿಶಿಷ್ಟ ಶಿವ ದೇವಾಲಯವಾಗಿದ್ದು, ಅಲ್ಲಿನ ಪ್ರಧಾನ ದೇವರು ಪಲ್ಲಿಕೊಂಡೇಶ್ವರನು ವಿಷ್ಣುವಿನ ಅನಂತಶಯನ ಭಂಗಿಯಂತೆ ದರ್ಶನ ನೀಡುತ್ತಾನೆ. ತನ್ನ ಪತ್ನಿ ಪಾರ್ವತಿಯ ಮಡಿಲಲ್ಲಿ ಒರಗಿಕೊಳ್ಳುವ ಭಂಗಿಯಲ್ಲಿದ್ದಾನೆ.
ದೇವಾಲಯ ಸಮಯ: ಬೆಳಿಗ್ಗೆ 5.30 ರಿಂದ ರಾತ್ರಿ 8 ರವರೆಗೆ.
ಶ್ರೀ ವೇದನಾರಾಯಣ ದೇವಸ್ಥಾನ: ತಿರುಪತಿಯಿಂದ ಸುಮಾರು 72 ಕಿ.ಮೀ ದೂರ
ನಾಗಲಾಪುರಂ ಶ್ರೀ ವೇದನಾರಾಯಣ ದೇವಸ್ಥಾನಕ್ಕೆ ಪ್ರಸಿದ್ಧವಾಗಿದೆ. ಈ ದೇವಾಲಯವು ಕೂಡ ವಿಷ್ಣುವಿನ ರೂಪವಾದ ಮತ್ಸ್ಯ ಅವತಾರಕ್ಕೆ ಹೆಸರುವಾಸಿಯಾಗಿದೆ. ಸ್ವಾಮಿಯನ್ನು ಮತ್ಸ್ಯ ನಾರಾಯಣ ಅಥವಾ ವೇದ ನಾರಾಯಣ ಎಂದು ಕರೆಯಲಾಗುತ್ತದೆ. ತಮಿಳು ತಿಂಗಳ ಪಂಗುಣಿಯಲ್ಲಿ 3 ದಿನಗಳ ಕಾಲ ಸೂರ್ಯ ಪೂಜೆಯನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸೂರ್ಯನ ಕಿರಣಗಳು ಮುಖ್ಯ ದೇವರ ಮೇಲೆ ಬೀಳುತ್ತವೆ. ಮೊದಲ ದಿನ ಅದು ಪಾದಗಳ ಮೇಲೆ, ಮರುದಿನ ಎದೆಯ ಮೇಲೆ ಮತ್ತು ಕೊನೆಯ ದಿನ ಹಣೆಯ ಮೇಲೆ ಬೀಳುತ್ತದೆ. ಈ ಅದ್ಭುತವನ್ನು ನೋಡಲು ದೇಶದ ನಾನಾ ಭಾಗಗಳಿಂದ ಭಕ್ತರು ಬರುತ್ತಾರೆ.
ದೇವಾಲಯ ಸಮಯ: ಬೆಳಿಗ್ಗೆ 5.30 ರಿಂದ ರಾತ್ರಿ 8 ರವರೆಗೆ.
ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ: ತಿರುಪತಿಯಿಂದ ಕೇವಲ 47 ಕಿ.ಮೀ ದೂರ
ಕರ್ವೇತಿನಗರಂನಲ್ಲಿರುವ ಈ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನವು ಪ್ರಮುಖ ವೈಷ್ಣವ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಸ್ಥಾನವು ವೇಣುಗೋಪಾಲ ಎಂದೂ ಕರೆಯಲ್ಪಡುವ ಶ್ರೀಕೃಷ್ಣನಿಗೆ ಅರ್ಪಿತವಾಗಿದೆ. ಭಗವಂತನ ವಿಗ್ರಹವು ಕೈಯಲ್ಲಿ ಕೊಳಲನ್ನು ಹಿಡಿದುಕೊಂಡು, ಪತ್ನಿಯರಾದ ರುಕ್ಮಿಣಿ ದೇವಿ ಮತ್ತು ಸತ್ಯಭಾಮ ದೇವಿಯರೊಂದಿಗೆ ದರ್ಶನ ನೀಡುತ್ತಾನೆ.
ದೇವಾಲಯ ಸಮಯ: ಬೆಳಿಗ್ಗೆ 6.00 ರಿಂದ ರಾತ್ರಿ 8 ರವರೆಗೆ.
