“ಹೊಸವರ್ಷಾಚರಣೆ ವೇಳೆ ಬೇರೆಯವರಿಗೆ ತೊಂದರೆ ಕೊಟ್ಟರೆ ಮುಲಾಜಿಲ್ಲದೇ ಕ್ರಮ”

ಬೆಂಗಳೂರು-ಹೊಸವರ್ಷಾಚರಣೆ ಸಂಭ್ರಮದ ಸಂದರ್ಭದಲ್ಲಿ ಬೇರೆಯವರಿಗೆ ತೊಂದರೆ ಕೊಟ್ಟರೆ ಮುಲಾಜಿಲ್ಲದೇ ಬಂಧಿಸಲಾಗುವುದು ಎಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೀವು ಹೊಸವರ್ಷವನ್ನು ಸಂತೋಷದಿಂದ ಆಚರಿಸಿ. ಬೇರೆಯವರಿಗೂ ಆಚರಿಸಲು ಬಿಡಿ. ಆದರೆ ಸಂಭ್ರಮದ ಸಂದರ್ಭದಲ್ಲಿ ಬೇರೆಯವರಿಗೆ ಅದರಲ್ಲೂ ಮಹಿಳೆಯರಿಗೆ ತೊಂದರೆ ಕೊಟ್ಟರೆ ಅಂತಹವರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆಂದು ತಿಳಿಸಿದರು.

ಮಹಿಳೆಯರ ಸುರಕ್ಷತೆ ಮತ್ತು ಜನಸಂದಣಿ ನಿಯಂತ್ರಣ ನಮ ಮೊದಲ ಆದ್ಯತೆ ಎಂದು ತಿಳಿಸಿದ ಅವರು, ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕೈಗೊಂಡಿರುವ ಸುರಕ್ಷತೆ ಹಾಗೂ ಭದ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ಸುರಕ್ಷತೆ ಮತ್ತು ಸುಗಮ ಸಂಚಾರಕ್ಕಾಗಿ ಡಿ.31 ರಂದು ರಾತ್ರಿ 50 ಫ್ಲೈಓವರ್‌ಗಳನ್ನು ಬಂದ್‌ ಮಾಡಲಾಗುತ್ತದೆ. 166 ಕಡೆ ಡ್ರಂಕ್‌ ಅಂಡ್‌ ಡ್ರೈವ್‌ ತಪಾಸಣೆ ಮಾಡಲಾಗುವುದು ಎಂದರು.

ವೀಲಿಂಗ್‌ ಮಾಡುವವರ ಮೇಲೆ ಪೊಲೀಸರು ಕಣ್ಣಿಡಲಾಗಿದೆ. 92 ಕಡೆ ವೀಲಿಂಗ್‌ ಜಾಗಗಳನ್ನು ಗುರುತಿಸಲಾಗಿದೆ. ಆ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗುವುದು. ವೀಲಿಂಗ್‌ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಅವರು ವಿವರಿಸಿದರು.
ಅಂದು ಕ್ಯೂಆರ್‌ಟಿ, ಚನ್ನಮ ಪಡೆ ಸೇರಿದಂತೆ ವಿಶೇಷ ಪಡೆಗಳನ್ನು ನಿಯೋಜಿಸಲಾಗುತ್ತದೆ. ಅ ಮಧ್ಯರಾತ್ರಿ ಸಂಭ್ರಮದ ನಂತರ ಜನಸಂದಣಿಯನ್ನು ತೆರವುಗೊಳಿಸಲು ಮೊದಲ ಬಾರಿಗೆ ಬಸ್‌‍ಗಳು ಮತ್ತು ಟೆಂಪೋ ಟ್ರಾವೆಲರ್‌ಗಳನ್ನು ಸೂಕ್ತ ಸ್ಥಳಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

ಯಾವುದೇ ಕಿಡಿಗೇಡಿತನ ಅಥವಾ ಉಲ್ಲಂಘನೆಗಳನ್ನು ಪತ್ತೆ ಹಚ್ಚಿ ದಾಖಲೀಕರಿಸಿ ತ್ವರಿತ ಕ್ರಮ ಕೈಗೊಳ್ಳಲು “ಮ್ಯಾಜಿಕ್‌ ಬಾಕ್‌್ಸ” ವ್ಯವಸ್ಥೆಯೊಂದಿಗೆ ನಿರಂತರ ಸಿಸಿಟಿವಿ ನಿಗಾವಣೆ ಕೈಗೊಳ್ಳಲಾಗುತ್ತದೆ ಎಂದು ವಿವರಿಸಿದರು.ಒಟ್ಟಾರೆ ಅಧಿಕಾರಿಗಳು ಸೇರಿದಂತೆ ಸುಮಾರು 20 ಸಾವಿರ ಸಿಬ್ಬಂದಿಯನ್ನು ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *