ಪೋಷಕರೇ, ವಿದ್ಯಾರ್ಥಿಗಳೇ ಡೋಂಟ್ವರಿ..! ಸದ್ಯಕ್ಕೆ ಓಪನ್ ಆಗಲ್ಲ…ಸ್ಕೂಲ್-ಕಾಲೇಜ್ಗಳು ..!
ಕೊರೋನಾ ಮಧ್ಯೆ ಶಾಲೆ ಆರಂಭ ಆಗುತ್ತೆ ಅನ್ನೋ ಟೆನ್ಷನ್ನಲ್ಲಿರುವ ಪೋಷಕರೇ, ವಿದ್ಯಾರ್ಥಿಗಳೇ ಡೋಂಟ್ವರಿ. ಯಾಕಂದ್ರೆ ಇನ್ನೂ ಒಂದು ತಿಂಗಳು ಸ್ಕೂಲ್ ಓಪನ್ ಆಗಲ್ಲ
ಅಕ್ಟೋಬರ್ ಅಂತ್ಯದವರೆಗೂ ಸ್ಕೂಲ್ ಓಪನ್ ಮಾಡುವುದಿಲ್ಲವೆಂದು ಆರೋಗ್ಯ-ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರು ಹೇಳಿದ್ದಾರೆ.ರಾಜ್ಯದಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆ ಶಾಲೆ ಆರಂಭ ಮಾಡದಿರಲು ನಿರ್ಧರಿಸಲಾಗಿದೆ ಎಂದು ಬಿಟಿವಿಗೆ ಆರೋಗ್ಯ ಇಲಾಖೆ ಡೈರೆಕ್ಟರ್ ಡಾ.ಪಾಟೀಲ್ ಓಂ ಪ್ರಕಾಶ್ ಹೇಳಿದ್ದಾರೆ.
ಸದ್ಯ ಸ್ಕೂಲ್-ಕಾಲೇಜ್ ಓಪನ್ ಮಾಡೋ ಸ್ಥಿತಿ ರಾಜ್ಯದಲ್ಲಿ ಇಲ್ಲ. ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ರೂ ರಾಜ್ಯಗಳ ವಿವೇಚನೆಗೆ ಬಿಟ್ಟಿದೆ. ಪರಿಸ್ಥಿತಿ ಅವಲೋಕನ ಮಾಡಿ ಮುಂದಿನ ನಿರ್ಧಾರ ಮಾಡ್ತೇವೆ ಅಂತ ಪಾಟೀಲ್ ಓಂ ಪ್ರಕಾಶ್ ತಿಳಿಸಿದ್ದಾರೆ.