ಜಿಲ್ಲಾ ಕಾಂಗ್ರೆಸ್ ಸಮಿತಿ ಕಲಬುರಗಿಯಲ್ಲಿಂದು ಕಾಂಗ್ರೆಸ್ ಆರೋಗ್ಯ ಹಸ್ತ ಕಾರ್ಯಕ್ರಮದ ಉದ್ಘಾಟನೆ ಹಾಗೂ ಸ್ವಯಂ ಸೇವಕರಿಗೆ ಕೋವಿಡ್ -19 ತಪಾಸಣೆ ತರಬೇತಿ ಶಿಬಿರದ ಪತ್ರಿಕಾ ಗೋಷ್ಠಿ ಜರುಗಿತು
ಜಿಲ್ಲಾ ಕಾಂಗ್ರೆಸ್ ಸಮಿತಿ ಕಲಬುರಗಿಯಲ್ಲಿಂದು ಕಾಂಗ್ರೆಸ್ ಆರೋಗ್ಯ ಹಸ್ತ ಕಾರ್ಯಕ್ರಮದ ಉದ್ಘಾಟನೆ ಹಾಗೂ ಸ್ವಯಂ ಸೇವಕರಿಗೆ ಕೋವಿಡ್ -19 ತಪಾಸಣೆ ತರಬೇತಿ ಶಿಬಿರದ ಪತ್ರಿಕಾ ಗೋಷ್ಠಿ ಜರುಗಿತು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಆರೋಗ್ಯ ಹಸ್ತದ ಅಧ್ಯಕ್ಷರು, ಮಾಜಿ ಸಂಸದರಾದ ದ್ರುವ ನಾರಾಯಣ ಹಾಗೂ ಜೇವರ್ಗಿಯ ಜನಪ್ರಿಯ ಶಾಸಕರು, ವಿಧಾನ ಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರು ಮತ್ತು ಕಾಂಗ್ರೆಸ್ ಆರೋಗ್ಯ ಹಸ್ತದ ಸಂಚಾಲಕರಾದ ಡಾ.ಅಜಯ್ ಸಿಂಗ್ ಅವರು ಮಾತನಾಡಿ ಶಿಬಿರದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಜಗದೇವ ಗುತ್ತೇದಾರ್, ಶಾಸಕರಾದ ಪ್ರಿಯಾಂಕ್ ಖರ್ಗೆ, ಕನೀಜ್ ಫಾತೀಮಾ, ಮಾಜಿ ಸಚಿವರಾದ ಶರಣ್ ಪ್ರಕಾಶ ಪಾಟೀಲ್,ಬಿ.ಆರ್ ಪಾಟೀಲ್ ,ಮಾಜಿ ಮಹಾ ಪೌರರಾದ ಶರಣ ಕುಮಾರ ಮೋದಿ ,ಮುಖಂಡರಾದ ನೀಲಕಂಠ ರಾವ್ ಮೂಲಗೆ, ಆರೋಗ್ಯ ಹಸ್ತದ ವೈದ್ಯಕೀಯ ತಂಡ ಹಾಗೂ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.