ಸ್ಯಾಂಡಲ್​ವುಡ್​ ನಟನಿಗೆ ಡಬಲ್​ ಸಂಕಷ್ಟ..!

ಸ್ಯಾಂಡಲ್​ವುಡ್​ನಲ್ಲಿ ಮಿಂಚುತ್ತಿರುವ ಸ್ಟಾರ್​ ನಟ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಯಾಂಡಲ್​ವುಡ್​ ನಟ ಮಾಡಿರುವ ಎರಡು ತಪ್ಪುಗಳಿಂದ ಸಿನಿ ಭವಿಷ್ಯಕ್ಕೆ ಕಂಟಕವಾಗಿದೆ. ಹಾಗಾದ್ರೆ ಯಾರು ಆ ನಟ, ಆ ನಟ ಮಾಡಿರುವ ತಪ್ಪೇನು? ಈ ಸ್ಟೋರಿ ನೋಡಿ…

ಸಿಂಪಲ್​ ಸುನಿ ನಿರ್ದೇಶನದ ಮೂಲಕ ಸ್ಯಾಂಡಲ್​ವುಡ್​​ನಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದ್ದ ನಟ ಧನ್ವೀರ್​ ಗೌಡ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಂಡೀಪುರ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನೈಟ್​ ಸಫಾರಿ ನಿಷೇಧವಿದ್ದರೂ, ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನಟ ಧನ್ವೀರ್​ ಸಫಾರಿ ಮಾಡಿ ನಿಯಮ ಉಲ್ಲಂಘಿಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಕಾರಣವಾಗಿತ್ತು.

ಈಗ ನಟ ಧನ್ವೀರ್​ ಮತ್ತೋದು ಅವಾಂತರವನ್ನು ಮೈಗೆಳೆದುಕೊಂಡಿದ್ದಾರೆ. ಮೈಸೂರಿನ ಮತ್ತಿಗೋಡು ಆನೆ ಶಿಬಿರಕ್ಕೆ ಅನುಮತಿ ಇಲ್ಲದೇ ಭೇಟಿ ನೀಡಿ ಸಾಕಾನೆ ಮಹೇಂದ್ರನ ಮೇಲೆ ಹತ್ತಿ ಸವಾರಿ ಮಾಡಿದ್ದರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡಿದ್ದರು. ಅವರು ಅಪ್​ಲೋಡ್​ ಮಾಡಿರುವ ವಿಡಿಯೋ ಈಗ ಅವರಿಗೇ ಮಾರಕವಾಗಿ ಪರಿಣಮಿಸಿದೆ.

ಅನುಮತಿ ಇಲ್ಲದೇ ಅಕ್ರಮವಾಗಿ ಆನೆ ಶಿಬಿರಕ್ಕೆ ಪ್ರವೇಶ ಮಾಡಿರುವುದೂ ಅಲ್ಲದೇ ಆನೆ ಮೇಲೆ ಸವಾರಿ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ ಧನ್ವೀರ್​ ಮೇಲೆ FIR ದಾಖಲು ಮಾಡಿದೆ. FIRನಲ್ಲಿ ನಟ ಧನ್ವೀರ್​ ಜೊತೆ 6 ಮಂದಿಯ ವಿರುದ್ಧ ಕೇಸ್​ ದಾಖಲಾಗಿದೆ. ಜೊತೆಗೆ ನಟ ಧನ್ವೀರ್​ನನ್ನು ಜನಸಾಮಾನ್ಯನಂತೆ ಪರಿಗಣಿಸದೇ, ಅತಿಥಿಯಂತೆ ಉಪಚರಿಸಿದಕ್ಕಾಗಿ ಕಾರಣ ಕೇಳಿ ಅಧಿಕಾರಿಗಳಿಗೆ ನೊಟೀಸ್​ ಜಾರಿ ಮಾಡಿರುವುದಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *