ಆನ್‌ಲೈನ್ ಶಿಕ್ಷಣಕ್ಕೆ ಗೈಡ್ ಲೈನ್ಸ್ ರಿಲೀಸ್..! ತಜ್ಞರ ಶಿಫಾರಸಿನಂತೆ ಆನ್‌ಲೈನ್ ಶಿಕ್ಷಣಕ್ಕೆ ಅವಧಿ ನಿಗದಿ..!
ದೇಶದೆಲ್ಲೆಡೆ ಮಹಾಮಾರಿ ಕೊರೋನಾದಿಂದಾಗಿ ಜನರು ಪರದಾಡುವಂತಾಗಿತ್ತು. ಇತ್ತ ಕೆಲಸ ಎಲ್ಲ ದುಡಿಮೆ ಇಲ್ಲ.. ಒಂದೊತ್ತಿನ ಊಟಕ್ಕೂ ಕಷ್ಟಪಡುವಂತಾಗಿತ್ತು ಇದರ ನಡುವೆ ತಮ್ಮ ಮಕ್ಕಳನ್ನ ಶಾಲೆಗೆ ಕಳುಹಿಸಬೇಕಾ..? ಬೇಡ್ವಾ..? ಅನ್ನೋ ಗೊಂದಲದಲ್ಲಿದ್ದಾರೆ ಜನರು.
ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಈಗಾಗಲೇ ಮಕ್ಕಳಿಗೆ ಆನ್ ಲೈನ್ ಮೂಲಕ ಶಿಕ್ಷಣ ನೀಡಲಾಗ್ತಿದ್ದು. ಆದ್ರೀಗ, ಆನ್ ಲೈನ್ ಶಿಕ್ಷಣಕ್ಕೆ, ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆಗಿದ್ರೆ ಈ ಮಾರ್ಗ ಸೂಚಿಯಲ್ಲೇನಿದೆ..?
ಪ್ರತಿ ತರಗತಿಗೆ ಗರಿಷ್ಠ ಸಮಯ 30 ನಿಮಿಷಗಳದ್ದಾಗಿರುತ್ತದೆ. 6 ರಿಂದ ನಂತರದ ತರಗತಿಗಳಿಗೆ ಅವಶ್ಯಕತೆಗಳಿಗೆ ಅನುಗುಣವಾಗಿ 30 ರಿಂದ 45 ನಿಮಿಷದ ತರಗತಿಯಿರಲಿದೆ.
ವಯೋಮಾನಕ್ಕೆ ಅನುಗುಣವಾಗಿ ದಿನಕ್ಕೆ 1 ರಿಂದ 4 ಗಂಟೆ ತರಗತಿ ಮಾಡಬಹುದು. ಎರಡನೇ ತರಗತಿವರೆಗೆ ಪರ್ಯಾಯ ದಿನಗಳ ಬೋಧನೆ ಇರಲಿದೆ. 2ನೇ ತರಗತಿಯವರೆಗೆ ಪೋಷಕರ ಉಪಸ್ಥಿತಿ ಕಡ್ಡಾಯವಾಗಿರುತ್ತದೆ. ಪೋಷಕರ ಅನುಮತಿ ಮೇರೆಗೆ ವಯಸ್ಕರ ಉಪಸ್ಥಿತಿಗೆ ಅವಕಾಶ. 3ನೇ ತರಗತಿ ನಂತರ ವಾರಕ್ಕೆ ಗರಿಷ್ಠ 5 ದಿನಗಳವರೆಗೆ ಬೋಧನೆ ಮಾಡಬಹುದು. ತಜ್ಞರ ಸಮಿತಿ ಶಿಫಾರಸ್ಸಿನನ್ವಯ ಆನ್‌ಲೈನ್ ತರಗತಿಗೆ ಅವಧಿ ನಿಗದಿ ಪಡಿಸಲಾಗಿದೆ.