ಮಹಾದೇವ ಸಾಹುಕಾರ ಮೇಲೆ ಗುಂಡಿನ ದಾಳಿಃ ಓರ್ವ ಸಾವುಃ ಭೈರಗೊಂಡ ಸ್ಥಿತಿ ಗಂಭೀರ

ವಿಜಯಪುರ, ನ.2-ಭೀಮಾ ತೀರದ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ಗುಂಡಿನ ದಾಳಿ ಜತೆಗೆ ಜೆಸಿಬಿ ಮೂಲಕ ಹತ್ಯೆ ಮಾಡಲು ಯತ್ನಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಸ್ಪಷ್ಟಪಡಿಸಿದ್ದಾರೆ.
ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿರುವಂತ ಮಹಾದೇವ ಭೈರಗೊಂಡ ಅವರ ಸ್ಥಿತಿ ಗಂಭೀರವಾಗಿದ್ದರೇ, ಮತ್ತೋರ್ವ ವ್ಯಕ್ತಿ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಈ ದುರ್ಘಟನೆಯಲ್ಲಿ ಮಹಾದೇವ ಸಾಹುಕಾರ ಭೈರಗೊಂಡ ಇವರ ಮ್ಯಾನೇಜರ್ ಬಾಬುರಾಮ ಮಾರುತಿ ಕಂಚನಾಳ (64) ಇವರಿಗೆ ಗುಂಡು ತಗುಲಿ ಮೃತರಾಗಿದ್ದಾರೆ.
ಜಿಲ್ಲೆಯ ಅರಕೇರಿ ತಾಂಡಾ ಬಳಿ 3 ಜನ ಅಪರಿಚಿತರಿಂದ ಗುಂಡಿನ ದಾಳಿ ನಡೆದಿದೆ ಎನ್ನಲಾಗಿದ್ದು, ಮಹಾದೇವ ಸಾಹುಕಾರ ಹಾಗೂ ಆತನ ಜೊತೆಗಿದ್ದ ಬಾಬುರಾಯ ಎಂಬುವರಿಗೂ ಗಾಯವಾಗಿದೆ. ಈಗ ಸದ್ಯಕ್ಕೆ ಗಾಯಾಳುಗಳನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಮಹಾದೇವ ಸಾಹುಕಾರ ಸಂಚರಿಸುತ್ತಿದ್ದ ಕಾರಿಗೆ ಟಿಪ್ಪರ್ ಡಿಕ್ಕಿ ಹೊಡೆದ ಬಳಿಕ ಅಪರಿಚಿತರಿಂದ ಗುಂಡಿನ ದಾಳಿ ನಡೆಸಲಾಗಿದೆ. ಮಹಾದೇವ ಸಾಹುಕಾರ ಭೈರಗೊಂಡಗೆ ಎರಡು ಗುಂಡುಗಳು ತಾಗಿದೆ ಎಂದು ತಿಳಿದು ಬಂದಿದೆ.
ವಿಜಯಪುರದ ಅರಕೇರೆ ತಾಂಡ ಬಳಿಯಲ್ಲಿ ಭೀಮಾತೀರದ ಹಂತದ ಮಹಾದೇವ ಭೈರಗೊಂಡ ಕಾರಿಗೆ ಟಿಪ್ಪರ್ ಲಾರಿಯಿಂದ ಡಿಕ್ಕಿ ಹೊಡಿದ್ದಾರೆ. ಹೀಗೆ ಡಿಕ್ಕಿ ಹೊಡೆದು ಕಾರು ಅಡ್ಡಗಟ್ಟಿದಂತ ಮೂವರು ಅಪರಿಚಿತರು ಏಕಾಏಕಿ ಗುಂಡಿನ ದಾಳಿಯನ್ನು ನಡೆಸಿದ್ದಾರೆ.
ಅಪರಿಚಿತರ ಗುಂಡಿನ ದಾಳಿಯಿಂದಾಗಿ ಮಹಾದೇವ ಭೈರಗೊಂಡ ಗಾಯಗೊಂಡರೇ, ಅವರ ಸಹಚರ ಬಾಬುರಾಯ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಮಹಾದೇವ ಸಾಹುಕಾರ ಭೈರಗೊಂಡ ಇವರಿಗೆ ಹೊಟ್ಟೆಯ ಭಾಗದಲ್ಲಿ 2 ಗುಂಡುಗಳು ಹಾಗೂ ಬೆನ್ನಿನ ಪಕ್ಕೆಲುಬಿಗೆ 1 ಗುಂಡು ತಗುಲಿ ಗಾಯವಾಗಿದ್ದು, ವಾಹನ ಚಾಲಕನಾದ ಲಕ್ಷಣ ಇವನಿಗೆ ಟಿಪ್ಪರ್ ವಾಹನ ಅಪಘಾತದಿಂದ ಕಾಲು ಮುರಿದಿದೆ.
ಗನ್‍ಮ್ಯಾನ್ ರಮೇಶ ಇವನಿಗೆ ತಲೆಗೆ ಗಾಯಪೆಟ್ಟು ಆಗಿದ್ದು, ಇನ್ನುಳಿದ ಗನ್‍ಮ್ಯಾನ್‍ಗಳಾದ ಜಗಬೀರಸಿಂಗ್ ಹಾಗೂ ಹುಸೇನಿ ಇವರಿಗೆ ಸಣ್ಣಪುಟ್ಟ ಗಾಯಳಾಗಿದ್ದು, ಗಾಯಾಳುಗಳಿಗೆ ವಿಜಯಪುರ ಶಹರದ ಬಿಎಲ್‍ಡಿಇ ಆಸ್ಪತ್ರೆಗೆ ಚಿಕಿತ್ಸೆ ಕುರಿತು ದಾಖಲು ಮಾಡಿದ್ದು, ಘಟನೆ ಸಂಬಂಧಿಸಿದಂತೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿ ಶಹರದಲ್ಲಿ ನಾಕಾಬಂದಿ ನೇಮಿಸಿ ಆರೋಪಿತರ ಪತ್ತೆಕಾರ್ಯ ನಡೆದಿದೆ.
ಮಹಾದೇವ ಭೈರಗೊಂಡ ಅವರನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆಯಂತೆ. ಆದ್ರೇ ಗುಂಡೇಟಿನಿಂದ ಅವರ ಆರೋಗ್ಯ ಗಂಭೀರ ಸ್ಥಿತಿಯನ್ನು ತಲುಪಿರುವುದಾಗಿ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಚಡಚಣ ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಾಳ ಕ್ರಾಸ್ ಹತ್ತಿರ ಫೋರ್ಡ್ ಇಂಡಿಗೋ ವಾಹನ ಸಂಖ್ಯೆ ಎಮ್‍ಎಚ್-13/ಸಿಟಿ-4689 ವಾಹನದಲ್ಲಿ 1) ಮಹಾದೇವ ಸಾಹುಕಾರ ಭೈರಗೊಂಡ, 2) ಲಕ್ಷ್ಮಣ ಸುರೇಶ ಖೋಗಾಂವ, ವಯಾ: 25 ವರ್ಷ (ವಾಹನ ಚಾಲಕ) ಗನ್‍ಮ್ಯಾನ್‍ಗಳಾದ 3) ಜಗಬೀರಸಿಂಗ್ ಪ್ರೇಮ್‍ಸಿಂಗ್, ವಯಾ: 36 ವರ್ಷ 4) ಹುಸೇನಿ ಬಸಣ್ಣ ಬಜಂತ್ರಿ, ವಯಾ: 28 ವರ್ಷ 5) ರಮೇಶ ಇವರುಗಳು ಇದ್ದು, ಇನ್ನೊಂದು ವಾಹನದಲ್ಲಿ 1) ಶಿವರಾಜ ಭೈರಗೊಂಡ (ವಾಹನ ಚಾಲಕ) 2) ಬಾಬುರಾಮ ಮಾರುತಿ ಕಂಚನಾಳ, ವಯಾ: 64 ವರ್ಷ, (ಮ್ಯಾನೇಜರ್) ಇದ್ದು, ಮೂರನೇ ವಾಹನದಲ್ಲಿ 5 ಜನರು ಹೀಗೆ ಒಟ್ಟು 03 ವಾಹನಗಳಲ್ಲಿ ವಿಜಯಪುರ ಹೊರವಲಯದ ಎನ್‍ಎಚ್ ರಸ್ತೆಗೆ, ಭೂತನಾಳ ಕ್ರಾಸ್ ಹತ್ತಿರದ ಶ್ರೀ ಹಣಮಂತ ಚಿಂಚಲಿ ಇವರ ಫೈಪ್ ಫ್ಯಾಕ್ಟರಿಗೆ ಭೆಟ್ಟಿ ಕೊಟ್ಟು, ಮರಳಿ ಚಡಚಣ ಕಡೆಗೆ ಹೋರಟಾಗ ಕನ್ನಾಳ ಕ್ರಾಸ್ ಹತ್ತಿರ ಸದರಿಯವರ ವಾಹನಕ್ಕೆ ಟಿಪ್ಪರ್ ವಾಹನದಿಂದ ಅಪಘಾತಪಡಿಸಿ ಸುಮಾರು 08-10 ಜನರು ವಾಹನಗಳಿಗೆ ಸುತ್ತುಗಟ್ಟಿ ಕಲ್ಲು ತುರಾಟ ಹಾಗೂ ಗುಂಡುಗಳನ್ನು ಹಾರಿಸಿ ಟಿಪ್ಪರ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದಾರೆ ಎಂದು ಪೋಲಿಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ ತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *