ಚಿತ್ತಾಪುರದಲ್ಲಿ ಬೈಕ್ಗಳ ನಡುವೆ ಡಿಕ್ಕಿ: ನಾಲ್ವರ ದುರ್ಮರಣ
ಕಲಬುರಗಿ: ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ದುರ್ಮರಣ ಹೊಂದಿರುವ ಘಟನೆ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಬಳಿ ನಡೆದಿದೆ
ಮರೆಪ್ಪ (50), ಬಸಪ್ಪ (32), ದೇವೇಂದ್ರ (50), ಮಲ್ಲಪ್ಪ (35) ಮೃತರು ಎಂದು ಗುರುತಿಸಲಾಗಿದೆ. ಮೃತರಲ್ಲಿ ಇಬ್ಬರು ಲಾಡ್ಲಾಪುರ ಗ್ರಾಮದವರು, ಇಬ್ಬರು ಅಲ್ಲೂರ ಗ್ರಾಮದವರು ಎಂದು ತಿಳಿದು ಬಂದಿದೆ. ಒಂದು ಬೈಕ್ ಮೇಲೆ ಮೂವರಂತೆ ಎರಡು ಬೈಕ್ ಮೇಲೆ ಆರು ಜನ ಪ್ರಯಾಣ ಮಾಡುವಾಗ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲಿಯೇ ಮೃತಪಟ್ಟರೆ, ಇನ್ನೋರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡ ಹನುಮಂತ ಹಾಗೂ ಕಾಶಿನಾಥ ಇಬ್ಬರಿಗೆ ವಾಡಿ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.