ಅಂಗನವಾಡಿ ಅಂಗಳಕ್ಕೂ ಕಾಲಿಟ್ಟ ಉದ್ಯಾನವನ: ಮೇಕೇರಿ ಗ್ರಾಮ ಪಂಚಾಯಿತಿಯಿಂದ ಹೊಸ ಹೆಜ್ಜೆ

ಇದೀಗ ಅಂಗನವಾಡಿ ಅಂಗಳಕ್ಕೂ ಉದ್ಯಾನವನ ಕಾಲಿಟ್ಟಿದ್ದು, ರಾಜ್ಯದಲ್ಲೇ ಪ್ರಥಮ ಎನ್ನುವಂತೆ ಮಡಿಕೇರಿ ಸಮೀಪದ ಮೇಕೇರಿಯ ಗ್ರಾಮದ ಅಂಗನವಾಡಿಯ ಅಂಗಳದಲ್ಲಿ ಸುಂದರವಾದ ಉದ್ಯಾನವನವೊಂದು ನಿರ್ಮಾಣವಾಗುತ್ತಿದೆ. ಕೆಲವೇ ದಿನಗಳಲ್ಲಿ ಉದ್ಘಾಟನೆಗೊಳ್ಳಲಿದೆ.

 
ಧರಣೇಶ್ ಕುಲಾಲ್ ಮೇಕೇರಿ
ಮಡಿಕೇರಿ: ನಗರ ಪ್ರದೇಶಗಳಿಗೆ, ವಸತಿ ಸಮುಚ್ಚಯಗಳಿಗೆ ಸೀಮಿತವಾಗಿದ್ದ ಉದ್ಯಾನವನಗಳು ಈಗ ಗ್ರಾಮದ ಅಂಗನವಾಡಿಗಳ ಅಂಗಳದಲ್ಲಿ ನಿರ್ಮಾಣವಾಗಿರುವುದು ವಿಶೇಷವಾಗಿದೆ. ರಾಜ್ಯದಲ್ಲೇ ಪ್ರಥಮ ಎನ್ನುವಂತೆ ಮಡಿಕೇರಿ ಸಮೀಪದ ಮೇಕೇರಿಯ ಗ್ರಾಮದ ಅಂಗನವಾಡಿಯ ಅಂಗಳದಲ್ಲಿ ಸುಂದರವಾದ ಉದ್ಯಾನವನವೊಂದು ನಿರ್ಮಾಣವಾಗುತ್ತಿದ್ದು, ಕೆಲವೇ ದಿನಗಳಲ್ಲಿ ಉದ್ಘಾಟನೆಗೊಳ್ಳಲಿದೆ.

ಮೇಕೇರಿ ಗ್ರಾಮದ ಸುಭಾಶ್ ನಗರದ ಅಂಗನವಾಡಿಯ ಮುಂಭಾಗ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಾಣವಾಗುತ್ತಿರುವ ಈ ಉದ್ಯಾನವನಕ್ಕೆ ಮೇಕೇರಿ ಸ್ವಾಗತ ಯುವಕ ಸಂಘ ಸಾಥ್ ಕೊಟ್ಟಕಾರಣ ಕೇವಲ ತಿಂಗಳಲ್ಲಿ ಉದ್ಘಾಟನೆಗೆ ಕಾದು ಕುಳಿತಿದೆ. ಅಂಗನವಾಡಿಗೆ ಬರುವ ಪುಟ್ಟಮಕ್ಕಳ ಮನಸ್ಸಿನಲ್ಲಿ ಪರಿಸರ ಪ್ರೇಮವನ್ನು ಹುಟ್ಟು ಹಾಕುವಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಈ ಉದ್ಯಾನವನ ಸಾಕ್ಷಿಯಾಗಲಿದೆ.

ಮೇಕೇರಿ ಅಂಗನವಾಡಿ

ಸುಮಾರು ಮೂರು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸುವ ಜವಾಬ್ದಾರಿಗೆ ಸ್ವಾಗತ ಯುವಕ ಸಂಘದ ಸದಸ್ಯರು ಹೆಗಲು ಕೊಟ್ಟಿದ್ದಾರೆ.
ನಮ್ಮ ಬಡಾವಣೆಯಲ್ಲಿ ಇಂತಹ ಒಂದು ಸುಂದರ ಉದ್ಯಾನವನ ನಿರ್ಮಾಣ ಆಗಿರುವುದು ನಮಗೆ ತುಂಬಾ ಖುಷಿ ಕೊಟ್ಟಿದೆ ಎನ್ನುತ್ತಾರೆ ಸುಭಾಶ್ ನಗರ ಬಡಾವಣೆಯ ನಿವಾಸಿಗಳು.
ಅಂಗನವಾಡಿ ಮೊಬೈಲ್ ಭಾಗ್ಯ..! ಸಿಬ್ಬಂದಿಗೆ ಬಯೋಮೆಟ್ರಿಕ್, ಮಕ್ಕಳಿಗೆ ಫೇಸ್‌ ರೀಡಿಂಗ್..!

ಮೇಕೇರಿ ಅಂಗನವಾಡಿ

ಉದ್ಯಾನವನ ನಿರ್ಮಾಣದ ಕಲ್ಪನೆ ಮೇಕೇರಿ ಪಂಚಾಯಿತಿಯದ್ದಾದರೂ ಇದಕ್ಕೆ ಗ್ರಾಮಸ್ಥರ ಸಹಕಾರ ಉತ್ತಮವಾಗಿ ಲಭಿಸಿದೆ. ಮೇಕೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸುಭಾಸ್ ನಗರದ ಅಂಗನವಾಡಿಯ ಅಂಗಳದಲ್ಲಿ ನಿರ್ಮಾಣವಾಗುತ್ತಿರುವ ಉದ್ಯಾನವನ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಮೇಕೇರಿಯ ಸ್ವಾಗತ ಯುವಕ ಸಂಘದ ಸದಸ್ಯರು ಯಾವುದೇ ಫಲಾಪೇಕ್ಷೆಯಿಲ್ಲದೆ ರಾತ್ರಿ, ಹಗಲೆನ್ನದೆ ದುಡಿಯುವ ಮೂಲಕ ಸುಭಾಸ್ ನಗರದ ಅಂಗನವಾಡಿಯ ಉದ್ಯಾನವನವನ್ನು ಸುಂದರಗೊಳಿಸುಳಿಸುವಲ್ಲಿ ಸಫಲರಾಗಿದ್ದಾರೆ. ಅವರಿಗೆ ಧನ್ಯವಾದಗಳು.

ಮೇಕೇರಿ ಅಂಗನವಾಡಿ

‌ನಗರ ಪ್ರದೇಶಗಳಿಗೇ ಸೀಮಿತ ಅನ್ನುವಂತಿದ್ದ ಉದ್ಯಾನವನಗಳು ಇದೀಗ ಗ್ರಾಮೀಣ ಭಾಗಗಳಲ್ಲಿ ನಿರ್ಮಾಣಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಹಿರಿಯರಿಗೆ ಉದ್ಯಾನವನದಲ್ಲಿ ವಾಕಿಂಗ್ ಏರಿಯಾ ಮತ್ತು ಸಣ್ಣ ಮಕ್ಕಳಿಗೆ ಆಟವಾಡಲು ಬೇಕಾದ ವ್ಯವಸ್ಥೆಗಳಿರುವುದರಿಂದ ಸಾರ್ವಜನಿಕರಿಗೆ ಅನುಕೂಲವೆನಿಸಿದೆ.
‌ಕುಮಾರ್, ಸ್ಥಳೀಯರು

ಮೇಕೇರಿ ಅಂಗನವಾಡಿ

‌ನಮ್ಮ ಅಂಗನವಾಡಿಯಲ್ಲಿ ಉದ್ಯಾನವನ ನಿರ್ಮಿಸಲು ಶ್ರಮಿಸಿದ ಮೇಕೇರಿ ಗ್ರಾಮ ಪಂಚಾಯಿತಿ ಮತ್ತು ಸ್ವಾಗತ ಯುವಕ ಸಂಘಕ್ಕೆ ಧನ್ಯವಾದಗಳು
ಸರಸ್ವತಿ, ಶಿಕ್ಷಕಿ, ಅಂಗನವಾಡಿ ಸುಭಾಶ್ ನಗರ

ಮೇಕೇರಿ ಅಂಗನವಾಡಿ

ಗ್ರಾಮ ಪಂಚಾಯಿತಿಯವರು ಉದ್ಯಾನವನ ನಿರ್ಮಾಣದ ಕುರಿತು ನಮ್ಮ ಬಳಿ ಪ್ರಸ್ತಾಪಿಸಿದಾಗ ಸಂಘದ ಎಲ್ಲಾ ಸದಸ್ಯರೂ ಒಪ್ಪಿಕೊಂಡು ಪಂಚಾಯಿತಿಯೊಂದಿಗೆ ಕೈಜೋಡಿಸಿದ್ದೇವೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *