ಡಿಸೆಂಬರ್ 7ರಿಂದ 15ರ ವರೆಗೆ ಚಳಿಗಾಲದ ಅಧಿವೇಶನ – ಸಚಿವ ಜೆ.ಸಿ ಮಾಧುಸ್ವಾಮಿ
ಬೆಂಗಳೂರು: ಇವತ್ತು ಸ್ವಲ್ಪ ಬೇಗ ಸಚಿವ ಸಂಪುಟ ಸಭೆ ಮುಗಿಸಿದ್ದೇವೆ, ಡಿಸೆಂಬರ್ 7ರಿಂದ 15ರ ವರೆಗೆ ಚಳಿಗಾಲದ ಅಧಿವೇಶನ ನಡೆಯಲಿದೆ ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಅವರು ಬುಧವಾರ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ವಿಜಯನಗರ ಜಿಲ್ಲೆ ರಚಿಸಲು ತೀರ್ಮಾನ ಮಾಡಲಾಗಿದ್ದು, ಅನೌಪಚಾರಿಕವಾಗಿ ವಿಜಯನಗರ ಜಿಲ್ಲೆ ಬಗ್ಗೆ ಚರ್ಚೆ ಮಾಡಲಾಗಿದೆ. ಮರಾಠ ಸಮುದಾಯ ನಿಗಮ ಸ್ಥಾಪಿಸಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು. ಇನ್ನು ಪ್ರಾಧಿಕಾರ ರಚನೆ ಮಾಡಲು ಕಾನೂನು ಇಲಾಖೆ ತೆಗೆದುಕೊಳ್ಳಬೇಕು. ಭಾಷೆ ವಿಚಾರಕ್ಕೆ ಪ್ರಾಧಿಕಾರ ರಚನೆ ಮಾಡಲಾಗುತ್ತದೆ. ಸಮುದಾಯದ ಅಭಿವೃದ್ಧಿಗೆ ನಿಗಮ ಮಾಡಬೇಕು. ಹೀಗಾಗಿ ಮರಾಠ ಸಮುದಾಯ ನಿಗಮ ರಚನೆ ಮಾಡಲಾಗಿದೆ. ಈ ನಿಗಮಕ್ಕೆ ಅನುದಾನದ ಬಗ್ಗೆ ಚರ್ಚೆ ಮಾಡಿಲ್ಲ. ಅಭಿವೃದ್ಧಿಗಾಗಿ ನಿಗಮ ರಚಿಸಲಾಗಿದೆ ಇದಕ್ಕೆ ವಿರೋಧ ವ್ಯಕ್ತಪಡಿಸುವ ಅವಶ್ಯಕತೆ ಇಲ್ಲ ಎಂದು ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದ್ದಾರೆ.
ಇದೇ ವೇಳೆ ಸಚಿವ ಆನಂದ್ ಸಿಂಗ್ ಮಾತನಾಡಿದ್ದು, ವಿಜಯನಗರ ಜಿಲ್ಲೆ ಆಗಬೇಕೆನ್ನುವುದು ಬಹುದಿನದ ಬೇಡಿಕೆ ಇತ್ತು. ಇತಿಹಾಸದ ಪುಟ ಸೇರುವಂತ ಐತಿಹಾಸಿಕ ತೀರ್ಮಾನವಾಗಿದೆ. ಯಾರಿಗೂ ನೋವು ಕೊಡುವ ಉದ್ದೇಶ ಇರಲಿಲ್ಲ. ಸಿಎಂ ಯಡಿಯೂರಪ್ಪ ಅವರು ತೀರ್ಮಾನ ಸ್ವಾಗತಿಸುತ್ತೇನೆ. ಪಶ್ಚಿಮ ತಾಲೂಕುಗಳ ಹೋರಾಟ ನಡೆದಿತ್ತು. ವಿಜಯನಗರ ಜಿಲ್ಲೆಯ ತೀರ್ಮಾನ ಮಾಡಲಾಗಿದೆ ಎಂದಿದ್ದಾರೆ. ಸಚಿವ ಶ್ರೀರಾಮುಲು ಅವರು ಪ್ರತಿಕ್ರಿಯೆ ನೀಡಿದ್ದು, ವಿಜಯನಗರ ಜಿಲ್ಲೆ ರಚನೆ ಸ್ವಾಗತಿಸುತ್ತೇನೆ. ಹಳದಿನಗಳಿಂದ ಪ್ರತ್ಯೇಕ ಜಿಲ್ಲೆಯ ಕೂಗು ಇತ್ತು. ಅಲ್ಲಿನ ತಾಲೂಕಿನ ಜನರು ಹೋರಾಟ ಮಾಡಿದ್ದರು ಎಂದರು.