ಹ್ಯಾಟ್ರಿಕ್ ಹೀರೋ-ಡಾಲಿ ಸಿನಿಮಾಗೆ ಮುಹೂರ್ತ ಫಿಕ್ಸ್
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಮತ್ತು ಡಾಲಿ ಜೋಡಿ ಮತ್ತೆ ತೆರೆಮೇಲೆ ಒಂದಾಗುತ್ತಿರೋದು ಗೊತ್ತೇಯಿದೆ. ಇದೀಗ ಈ ಚಿತ್ರ ಅಫೀಶೀಯಲ್ ಆಗಿ ಸೆಟ್ಟೇರೋಕ್ಕೆ ಸಜ್ಜಾಗಿದೆ. ಚಿತ್ರಕ್ಕೆ ನವೆಂಬರ್ 19ರ ಬೆಳಿಗ್ಗೆ 10.30ಕ್ಕೆ ಮುಹುರ್ತ ಫಿಕ್ಸ್ ಆಗಿದೆ. ಟಗರು ಸಿನಿಮಾದ ನಂತರ ಶಿವಣ್ಣ-ಡಾಲಿ ಜೋಡಿ ಎಷ್ಟರಮಟ್ಟಿಗೆ ಫೇಮಸ್ ಆಗಿದೆ ಅನ್ನೋದು ಗೊತ್ತೇಯಿದೆ. ಇವರಿಬ್ಬರ ಜೋಡಿಯನ್ನ ಮತ್ತೆ ತರೆಮೇಲೆ ನೋಡೋಕ್ಕೆ ಕಾಯ್ತಿದ್ದ ಸಿನಿಪ್ರಿಯರಿಗೆ ಈಗಾಗ್ಲೇ ಸಿಹಿ ಸುದ್ದಿ ಸಿಕ್ಕಿದೆ..ಪ್ರೊಡಕ್ಷನ್ ನಂ.2 ಹೆಸರಿನಲ್ಲಿ ಈಗಾಗ್ಲೇ ಸಿನಿಮಾ ಅನೌನ್ಸ್ ಆಗಿದೆ.
ಸದ್ಯ ನವೆಂಬರ್ 19, ಬೆಳಿಗ್ಗೆ 10.30ಕ್ಕೆ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಈ ಹೊಸ ಚಿತ್ರಕ್ಕೆ ಅಧಿಕೃತವಾಗಿ ಮುಹೂರ್ತ ನೆರವೇರ್ತಿದೆ. ಇನ್ನು ಇದೇ ದಿನ ಚಿತ್ರದ ಟೈಟಲ್ ಕೂಡ ರಿವೀಲ್ ಆಗುವ ಸಾಧ್ಯತೆ ಇದೆ. ಈಗಾಗ್ಲೇ ವಿಜಯದಶಮಿ ದಿನದಂದೇ ಚಿತ್ರದ ಮ್ಯೂಸಿಕ್ ವರ್ಕ್ ಶುರುವಾಗಿತ್ತು. ಅನೂಪ್ ಸೀಳಿನ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ವಿಶೇಷ ಅಂದ್ರೆ ಶಿವಣ್ಣ ಮತ್ತು ಡಾಲಿ ಜೊತೆ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಸಹ ಈ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ. ಅಂದ್ಹಾಗೇ ಈ ಚಿತ್ರಕ್ಕೆ ಕ್ಯಾಮರಮ್ಯಾನ್ ಕಂ ಡೈರೆಕ್ಟರ್ ವಿಜಯ್ ಮಿಲ್ಟನ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಅಂದ್ಹಾಗೇ ಈ ಹಿಂದೆ ದಯವಿಟ್ಟು ಗಮನಿಸಿ ಚಿತ್ರಕ್ಕೆ ಬಂಡವಾಳ ಹೂಡಿದ್ದ ಕೃಷ್ಣ ಸಾರ್ಥಕ್, ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಇದೇ ತಿಂಗಳ ಕೊನೆಯ ವಾರದಿಂದ ಸಿನಿಮಾ ಶೂಟಿಂಗ್ ಶುರುವಾಗಲಿದೆ.