ಕೊರೋನಾ ಆರ್ಭಟ.. ಸಿಲಿಕಾನ್ ಸಿಟಿಯಲ್ಲಿ ಡ್ರೈ ಫ್ರೂಟ್ಸ್ ಗೆ ಮೊರೆ ಹೋದ ಜನತೆ
ಕೊರೊನಾ ರೌದ್ರ ನರ್ತನಕ್ಕೆ ಸಿಲಿಕಾನ್ ಸಿಟಿ ಜನ್ರಲ್ಲಿ ದಿನದಿಂದ ದಿನಕ್ಕೆ ಹೆಲ್ತ್ ಕಾನ್ಶಿಯಸ್ ಜಾಸ್ತಿಯಾಗಿದೆ. ಅದ್ರಲ್ಲೂ ನಾವು ತಿನ್ನೋ ಆಹಾರ ಮೇಲೆ ಪ್ರತಿ ಕ್ಷಣ ನಿಗಾವಹಿಬೇಕಾಗಿದೆ. ಹಾಗಾಗಿ ಐಟಿಸಿಟಿ ಜನ್ರು ಡ್ರೈಪ್ರೂಟ್ ತಿನ್ನೋಕೆ ಶುರು ಮಾಡಿದ್ದಾರೆ. ಹಾಗಿದ್ರೆ ಹೇಗಿದೆ ಡ್ರೈಪ್ರೂಟ್ ಡಿಮ್ಯಾಂಡ್ !!
ಡೆಡ್ಲಿ ಕೊರೊನಾ ಅಟ್ಟಹಾಸಕ್ಕೆ ಸಿಲಿಕಾನ್ ಸಿಟಿಯ ಜನ್ರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸೊಕೆ ಶುರು ಮಾಡಿದ್ದಾರೆ. ಅದ್ರಲ್ಲೂ ಮೊದಲಿನಂತೆ ಪಿಜ್ಜಾ ಬರ್ಗರ್ ತಿನ್ನೋದನ್ನ ಬಿಟ್ಟು ಇದೀಗಾ ಹೆಲ್ದಿಯಾಗಿರೋ ದೇಶವಿದೇಶ ಡ್ರೈಪ್ರೂಟ್ಗಳ ಮೊರೆ ಹೋಗಿದ್ದಾರೆ..
ಹೌದು ಕೊರೊನಾ ಬಳಿಕ ಇದೀಗ ಎಲ್ಲೆಡೆಯೂ ಡ್ರೈಪ್ರೋಟ್ ಸಿಕ್ಕಪಟ್ಟೆ ಡಿಮ್ಯಾಂಡ್ ಹೆಚ್ಚಾಗಿದೆ.ಸಿಲಿಕಾನ್ ಸಿಟಿಯ ರಸೆಲ್ ಮಾರ್ಕೆಟ್ನಲ್ಲಿ ದೇಶವಿದೇಶ ಡ್ರೈಪ್ರೋಟ್ಗಳನ್ನು ಎಲ್ಲರ ಗಮನಸೆಳೆಯುತ್ತಿದೆ. ಅದ್ರಲ್ಲೂ ಬಾದಾಮಿ ಗೋಡಂಬಿ, ಪಿಸ್ತಾ, ಕರ್ಜೂರಾ ಸಖತ್ ಟೇಸ್ಟೀ ಆ್ಯಂಡ್ ಪ್ರೇಶ್ ಆಗಿದೆ. ಜತೆಗೆ ಮೆಕ್ಕಾ, ಮದೀನಾ, ಸೌಧಿ ಅರೇಬಿಯಾ, ಜಾರ್ಖಂಡ್, ಅಫಘಾನ್ನಿಸ್ತಾನ್, ಸೇರಿದಂತೆ ಹತ್ತಾರು ವಿದೇಶಿ ಕರ್ಜೂರಗಳು ಸಿಗ್ತಿದೆ. ಕೊರೊನಾ ನಿಮಿತ್ತ ಹೆಲ್ದಿ ಡ್ರೈಪ್ರೂಟ್ ತಿನ್ನುತ್ತಾ ಆರೋಗ್ಯ ವೃದ್ಧಿಗಾಗಿ ಆಫರ್ ನೀಡ್ತಿದ್ದೇವೆ ಅಂತಾರೆ ವ್ಯಾಪಾರಿಗಳು..
ಇನ್ನೂ ಕಳೆದ ವರ್ಷಕ್ಕಿಂತ ಈ ವರ್ಷ ಡ್ರೈಪ್ರೂಟ್ಗಳ ಬೆಲೆ ಎಷ್ಟೇದೆ ಅಂತಾ ನೋಡೋದಾದ್ರೆ…
ಡ್ರೈಪ್ರೂಟ್ ಹೆಸರು – 2020- 2019
ಬಾದಾಮಿ – 800 590
ಕ್ಯಾಲಿಫ್ರೂನಿಯಾ ಪಿಸ್ತಾ- 2000 1280
ಬ್ಲಾಕ್ ಡ್ರೈ ಗ್ರೇಫ್ಸ್ – 580 380
ಅಂಜೂರಾ- 2000 – 1000
ಕರ್ಜೂರ 900- 500
ಒಟ್ಟಾರೆಯಾಗಿ ಕೊರೊನಾ ಬಂದಾಗಿನಿಂದ ಹಾಳುಮೂಳು ತಿನ್ನುತ್ತಿದ್ದ ಸಿಟಿ ಜನ್ರ ಡ್ರೈಪ್ರೂಟ್ ತಿನ್ನೋಕೆ ಶುರು ಮಾಡಿದ್ದೇ ತಡ ಡಿಮ್ಯಾಂಡ್ ಹೆಚ್ಚಾಗಿದ್ದಂತೂ ನಿಜ..