ಭಾರತೀಯರಿಗೆ ಇನ್ನೊಂದು ತಿಂಗಳಲ್ಲಿ ಕೇಂದ್ರದಿಂದ ಸಿಗಲಿದೆ ಗುಡ್ ನ್ಯೂಸ್…..

ಭಾರತೀಯರಿಗೆ ಇನ್ನೊಂದು ತಿಂಗಳಲ್ಲಿ ಗುಡ್​ನ್ಯೂಸ್​ ಸಿಗಲಿದೆ. ಜನವರಿಗೆ ಕೊರೋನಾ ವ್ಯಾಕ್ಸಿನ್​​​​ ವಿತರಣೆ ಮಾಡೋಕೆ ಕೇಂದ್ರ ಸರ್ಕಾರ ಸಜ್ಜಾಗಿದೆ. ಕೋವಿಡ್​ ಡೋಸ್​ಗಳ ಮೊದಲ ಸ್ಟಾಕ್​ ಈ ವರ್ಷಾಂತ್ಯಕ್ಕೆ ಬರಲಿದ್ದು, ಜನವರಿ ಮತ್ತು ಫೆಬ್ರವರಿಯಲ್ಲಿ ಫ್ರಂಟ್​ಲೈನ್​​ ವರ್ಕರ್ಸ್​ಗೆ ನೀಡುವ ತಯಾರಿ ನಡೆದಿದೆ. ಡಾಕ್ಟರ್ಸ್​, ನರ್ಸ್​ ಮತ್ತು ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗೆ ವ್ಯಾಕ್ಸಿನ್​​ ವಿತರಣೆ ಆಗಲಿದೆ.

ಸೆರಮ್​ ಇನ್ಸ್​ಟಿಟ್ಯೂಟ್​ ಮತ್ತು ಆಕ್ಸ್​ಫರ್ಡ್​ ವಿವಿ ಅನ್ವೇಷಣೆ ಮಾಡಿರುವ ಆಸ್ಟ್ರಾಜನಿಕಾ ವ್ಯಾಕ್ಸಿನ್​​​​​​​​ನ ತುರ್ತು ಬಳಕೆಗೆ ತಯಾರಿ ನಡೆದಿದೆ. ಇಂಗ್ಲೆಂಡ್​ನ ಔಷಧೀಯ ಸಂಶೋಧನಾ ಸಂಸ್ಥೆ ಒಪ್ಪಿಗೆ ಸಿಕ್ಕ ಕೂಡಲೇ ತುರ್ತು ಬಳಕೆ ಶುರುವಾಗಲಿದೆ. ಡಿಸೆಂಬರ್​ ಅಂತ್ಯದ ವೇಳೆಗೆ ದೇಶದ 28 ಸಾವಿರ ಕೇಂದ್ರಗಳಲ್ಲಿ ವ್ಯಾಕ್ಸಿನ್​ ಸಂಗ್ರಹಕ್ಕೆ ವ್ಯವಸ್ಥೆ ಆಗ್ತಿದೆ.

ಕೋವಿಶೀಲ್ಡ್​ ವ್ಯಾಕ್ಸಿನ್​ನ ಒಂದು ಡೋಸ್​​​​​​​​​ 500-600 ರೂ.ಗೆ ಸಿಗಲಿದೆ. ಸರ್ಕಾರ ಬಲ್ಕ್​​ನಲ್ಲಿ ಖರೀದಿ ಮಾಡೋದ್ರಿಂದ ಕಡಿಮೆ ಬೆಲೆಗೆ ಸಿಗಲಿದೆ. ಈ ಮಧ್ಯೆ ಭಾರತ್​ ಬಯೋಟೆಕ್​​ನ ಕೊವಾಕ್ಸಿನ್​​​ ತುರ್ತು ಬಳಕೆಗೂ ಭಾರತ ತಯಾರಿ ಮಾಡಿಕೊಂಡಿದೆ. ಫೆಬ್ರವರಿಗೆ ಕೋವಿಶೀಲ್ಡ್​ ಮತ್ತು ಕೊವಾಕ್ಸಿನ್​​ ಭಾರತದಲ್ಲಿ ಕೊರೋನಾ ವಾರಿಯರ್ಸ್​​ಗೆ ಸಿಗಲಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *