ಸೇತುವೆ ಮೇಲಿಂದ ಕಬ್ಬಿನ ಟ್ರಾಕ್ಟರ್ ಭೀಮಾನದಿಗೆ ಪಲ್ಟಿ: ಪ್ರಾಣಾಪಾಯದಿಂದ ಚಾಲಕ ಬಚಾವ್
ಚಡಚಣ:: ತಾಲ್ಲೂಕಿನ ಉಮರಾಣಿ ಸೇತುವೆ ಮೇಲಿಂದ ಕಬ್ಬಿನ ಟ್ರಾಕ್ಟರ್ ಭೀಮಾನದಿಗೆ ಪಲ್ಟಿಯಾದ ಘಟನೆಯೊಂದು ಭಾನುವಾರ ಸಂಜೆ ಹೊತ್ತಿಗೆ ನಡೆದಿದೆ.
ನೆರೆ ರಾಜ್ಯ ಮಹಾರಾಷ್ಟ್ರದ ಸಾದೇಪುರ ಗ್ರಾಮದಿಂದ ಚಡಚಣ ತಾಲ್ಲೂಕಿನ ಹಾವಿನಾಳ ಇಂಡಿಯನ್ ಸಕ್ಕರೆ ಕಾರ್ಖಾನೆಗೆ ಕಬ್ಬು ಹೊತ್ತು ಬರುತ್ತಿರುವ ಮಾರ್ಗ ಮಧ್ಯೆ ಉಮರಾಣಿ ಸೇತುವೆ ಮೇಲಿಂದ್ದ, ತಗ್ಗು-ಗುಂಡಿಗಳು ತಪ್ಪಿಸಲು ಹೋಗಿ ಭೀಮಾನದಿಗೆ ಚಾಲಕ ಸಮೇತ ಕಬ್ಬಿನ ಟ್ರಾಕ್ಟರ್ ಪಲ್ಟಿ ಸಂಭವಿಸಿದೆ. ಮಹಾರಾಷ್ಟ್ರದ ಬಾಳಗಿ ಗ್ರಾಮದ ಟ್ರಾಕ್ಟರ್ ಎಂದು ಗುರುತಿಸಲಾಗಿದ್ದು, ಅದೃಷ್ಟವಶಾತ್ ಟ್ರಾಕ್ಟರ್ ಚಾಲಕ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾನೆ.
ಈ ಘಟನೆಗೆ ಉಮರಾಣಿ ಸೇತುವೆ ಸಂಪೂರ್ಣ ತಗ್ಗು-ದಿಣ್ಣೆಗಳಿಂದ ಕುಡಿದ್ದು, ವಾಹನ ಸವಾರರು ಈ ಗುಂಡಿಗಳು ತಪ್ಪಿಸಲು ಹೋಗಿ ಅನಾಹುತಕ್ಕೆ ಕಾರಣವಾಗುತ್ತಿವೆ.
ಈ ಭಾಗದ ಜನಪ್ರತಿನಿಧಿಗಳು ಹಾಗೂ ಸರ್ಕಾರ ಇತ್ತ ಕಡೆ ಸ್ವಲ್ಪ ಹಳ್ಳಿಗಳತ್ತ ಗಮನ ಹರಿಸಿ, ಸೇತುವೆ ದುರಸ್ತಿ ಕಾರ್ಯ ಮಾಡಿಸಿ, ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಇಲ್ಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.