BMTC: ಚೇತರಿಕೆಯತ್ತ‌ ಬಿಎಂಟಿಸಿ ಸಾರಿಗೆ; ದಿನಂಪ್ರತಿ ಎರಡು ಕೋಟಿ ಕಲೆಕ್ಷನ್

ಬೆಂಗಳೂರು(ನ.26): ಕೊರೋನಾ‌ ಬಂದಾಗಿನಿಂದ ನಷ್ಟದಲ್ಲಿರುವ ಬಿಎಂಟಿಸಿ ಈಗ ಚೇತರಿಕೆಯತ್ತ ಸಾಗುತ್ತಿದೆ. ಕೊವಿಡ್ ಆರಂಭದಲ್ಲಿ ಬಸ್ ಹತ್ತಲು ಹಿಂದೇಟು ಹಾಕುತ್ತಿದ್ದ ಬೆಂಗಳೂರು ಜನತೆ ಇದೀಗ ಬಸ್​​ನತ್ತ ಮುಖ ಮಾಡುತ್ತಿದ್ದಾರೆ. ಕಾಲೇಜು ಆರಂಭವಾಗಿರುವ ಪರಿಣಾಮ ಬಿಎಂಟಿಸಿಯಲ್ಲಿ ಪ್ರತಿನಿತ್ಯ ಎರಡು ಕೋಟಿ ಕಲೆಕ್ಷನ್ ದಾಟುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಟ್ರಾಕ್‌ ಗೆ ಬಿಎಂಟಿಸಿ ಸಾರಿಗೆ ಬಸ್ ಮರಳುತ್ತಿದೆ. ಸದ್ಯ ಬಸ್‌ ಸಂಪೂರ್ಣವಾಗಿ ತುಂಬದೇ ಹೋದರೂ ಸಾಮಾಜಿಕ ಅಂತರ ಕಾಪಾಡುವಷ್ಟು ಫುಲ್ ಆಗಿ ಇರುವುದು ಕಂಡುಬರುತ್ತಿದೆ. ಕೊರೋನಾ ಆರಂಭದಲ್ಲಿ ರಾಜಧಾನಿಯಲ್ಲಿ ಬಸ್ ಗಳು ಪ್ರಯಾಣಿಕರಿಲ್ಲದೇ ಖಾಲಿ ಖಾಲಿ‌ ಹೊಡೆಯುತ್ತಿದ್ದವು. ಆಗ ಬಿಎಂಟಿಸಿ‌ ಕಲೆಕ್ಷನ್‌ ಪ್ರತಿದಿನ ಒಂದು ಕೋಟಿ ಸಹ ದಾಟುತ್ತಿದ್ದಿಲ್ಲ. ಮೂರು ಸಾವಿರ ಬಸ್ ಗಳಲ್ಲಿ ಎಂಟು ಲಕ್ಷ‌ ಪ್ರಯಾಣಿಕರು ಪ್ರಯಾಣ ಮಾಡೋದು ಹೆಚ್ಚಾಗ್ತಿತ್ತು. ಆದರೀಗ ಅದರ ಕಲೆಕ್ಷನ್‌ ದುಪ್ಪಟ್ಟು ಆಗಿದೆ‌.

ಪ್ರತಿದಿನ ಎರಡು ಕೋಟಿಗೂ ಹೆಚ್ಚು ಕಲೆಕ್ಷನ್ ಆಗ್ತಿದ್ದು, ಐದು ಸಾವಿರ ಬಸ್ ಗಳಲ್ಲಿ 19 ಲಕ್ಷ ಪ್ರಯಾಣಿಕರು ದಿನನಿತ್ಯ ಬಿಎಂಟಿಸಿ ಸಾರಿಗೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ದಸರಾ ಹಬ್ಬದ ಸಂದರ್ಭದಲ್ಲಿ ಇದರ ಸಂಖ್ಯೆ ಹೆಚ್ಚಿದ್ದು, ನಿತ್ಯ ಎರಡೂವರೆ ಕೋಟಿ ಕಲೆಕ್ಷನ್ ಆಗಿದೆ. ದೀಪಾವಳಿ‌ ಹಬ್ಬ ಸಾಲು ಸಾಲು ರಜೆ ಇರುವುದರಿಂದ ಪ್ರಯಾಣಿಕರ ಸಂಖ್ಯೆ ಸ್ವಲ್ಪ‌ ಕಡಿಮೆಯಿದ್ದು, ಎರಡು ಕೋಟಿ ಕಲೆಕ್ಷನ್ ಆಗಿದೆ ಎಂದು ಬಿಎಂಟಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ಅಜಿತ್ ಮಾಹಿತಿ ತಿಳಿಸಿದ್ದಾರೆ.

ಕೊರೋನಾ ಬಗ್ಗೆ ಜನಜಾಗೃತಿ, ಕೊರೋನಾ ಆತಂಕ ಕಡಿಮೆಯಾಗಿರುವುದು, ವಿವಿಧ ಉದ್ಯಮಗಳು‌ ಚೇತರಿಕೆಯಾಗಿರುವುದು ಹಾಗೂ ಕಾಲೇಜು ಆರಂಭವಾಗಿರುವುದರಿಂದ ಬಿಎಂಟಿಸಿ ಬಸ್  ನಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ‌ ಕಂಡು ಬಂದಿದೆ. ಹಾಗಂತ ಕೊರಓನಾ ಮುಂಚಿನ ಸ್ಥಿತಿ ಇನ್ನೂ ತಲುಪಿಲ್ಲ. ಕೊರೋನಾ ಬರುವುದಕ್ಕೂ ಮೊದಲು 6100 ಬಸ್ ಗಳಲ್ಲಿ ಮೂವತ್ತು ಲಕ್ಷಕ್ಕೂ ಹೆಚ್ಚು ಜನ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದರು. ಮೂರುವರೆ ಕೋಟಿ ಪ್ರತಿದಿನ ಸಂಗ್ರಹ ಅಗುತ್ತಿತ್ತು. ಇದಕ್ಕೆ ಹೋಲಿಸಿದರೆ ಶೇ.60ರಷ್ಟು ಇದೆ. ಇನ್ನೂ 40 ಪರ್ಸೆಂಟ್ ಬೇಕಿದೆ.

ಎಷ್ಟು ತಿಂಗಳು ಅಂತ ಮನೆಯಲ್ಲಿ‌ ಕೂಡೋಕಾಗುತ್ತೆ, ಮೊದಲಿದ್ದ ಭಯವಿಲ್ಲ, ಜನರು ಬಿಎಂಟಿಸಿ ಬಸ್ ನಲ್ಲಿ ಪ್ರಯಾಣ ಮಾಡ್ತಿದ್ದಾರೆ. ಸದ್ಯ ಕೊರೊನಾ ಮುಂಜಾಗ್ರತಾ ಕ್ರಮಗಳು ಜಾರಿಯಲ್ಲಿದ್ದು, ಪ್ರಯಾಣಿಕರ ಸ್ಟ್ಯಾಂಡಿಂಗ್ ಅವಕಾಶವಿಲ್ಲ. ಸಿಟ್ಟಿಂಗ್‌ ಮಾತ್ರ ಅವಕಾಶವಿರುವುದರಿಂದ ಬಸ್ ಸೀಟ್ ತುಂಬ ಖಾಲಿ ಖಾಲಿ ಹೊಡೆಯದೇ ಇರುವ ದೃಶ್ಯ ಕಂಡುಬರುತ್ತಿದೆ. ಆದರೆ ಮುಂದೆ ಕೊರೊನಾ ಎರಡನೇ ಅಲೆಯ ಆತಂಕ ಗುಮ್ಮ ಅಂತೂ ಸಾರಿಗೆ ಉದ್ಯಮವನ್ನು ಕಾಡುತ್ತಿದೆ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *