ಕೃಷ್ಣನಗರಿ ಉಡುಪಿಯಲ್ಲಿ ಲಕ್ಷದೀಪೋತ್ಸವ ಸಂಭ್ರಮ; ಲಕ್ಷದೀಪ ಬೆಳಗಿ ಪುಳಕಿತರಾದ ಭಕ್ತ ಸಮೂಹ

ಈ ಬಾರಿಯ ಲಕ್ಷ ದೀಪೋತ್ಸವದಲ್ಲಿ ಪರ್ಯಾಯ ಅದಮಾರು ಶ್ರೀಗಳ ಸಹಿತ ಉಳಿದ ಮಠಗಳ ಯತಿಗಳು ಭಾಗವಹಿಸಿದ್ದರು. ನೂರಾರು ಭಕ್ತರು ಸೇರಿ ಎರಡೂ ರಥಗಳನ್ನು ಎಳೆದರು.  ಕೋವಿಡ್ ಕಾರಣದಿಂದ ಅಷ್ಟಮಿಯಂದು ಕೃಷ್ಣ ಮಠಕ್ಕೆ ಬರಲು ಸಾಧ್ಯವಾಗದ ಭಕ್ತರು ಲಕ್ಷದೀಪೋತ್ಸವದಲ್ಲಿ ಪಾಲ್ಗೊಂಡು ಸಂತೋಷಗೊಂಡರು.

ಉಡುಪಿ(ನ.28): ಅಪರೂಪದ ಸಂಪ್ರದಾಯಗಳಿಗೆ ಹೆಸರಾದ ಉಡುಪಿಯ ಕೃಷ್ಣಮಠ‌ದಲ್ಲಿ ಲಕ್ಷದೀಪೋತ್ಸವದ ಸಂಭ್ರಮ. ಕಡಗೋಲು ಕೃಷ್ಣನ ಮೊದಲ ರಥೋತ್ಸವಕ್ಕೆ ಅಷ್ಟಮಠಗಳ ರಥಬೀದಿ ಅಲಂಕಾರಗೊಂಡು ಹಣತೆಯ ದೀಪಗಳಿಂದ ಕಂಗೊಳಿಸುತ್ತಿದೆ. ಮಠಾಧೀಶರ ಉಪಸ್ಥಿತಿಯಲ್ಲಿ ವೈಭವದ ನಡುವೆ ಕೃಷ್ಣನ ದೇವರ ಮೆರವಣಿಗೆ ನಡೆಸಲಾಯಿತು.  ರಥಬೀದಿಯಲ್ಲಿ ಲಕ್ಷದೀಪೋತ್ಸವ ಕಂಡು ಭಕ್ತರು ಸಂತಸಗೊಂಡರು. ದೇವರ ಸ್ವಾಗತಕ್ಕೆ ಉಡುಪಿಯ ಅಷ್ಟಮಠಗಳ ರಥಬೀದಿ ದೀಪಗಳಿಂದ ಕಂಗೊಳಿಸುತ್ತಿದ್ದು, ಭಕ್ತರು ಕೃಷ್ಣನಿಗೆ ಹಣತೆಯಲ್ಲಿ ದೀಪ ಬೆಳಗಿ ಸಂಭ್ರಮಿಸಿದ್ದರು. ಕೃಷ್ಣ ದೇವರು ಯೋಗ ನಿದ್ರೆಯಲ್ಲಿರ್ತಾನೆ ಅನ್ನೋದು ನಂಬಿಕೆ. ಉತ್ಥಾನ ದ್ವಾದಶಿಯ ದಿನ ಯೋಗ ನಿದ್ರೆ ಪೂರೈಸಿ ರಥಬೀದಿಗೆ ಬರುವ ದೇವರನ್ನು ಬರಮಾಡಿಕೊಳ್ಳಲು ನಡೆದಿರುವ ತಯಾರಿ ಇದು. ಈ ಮಹೋತ್ಸವವನ್ನು ಲಕ್ಷದೀಪೋತ್ಸವ ಎನ್ನುತ್ತಾರೆ.

ಇಳಿ ಹೊತ್ತಿನಲ್ಲಿ ಭಕ್ತರೆಲ್ಲರೂ ರಥಬೀದಿಯಲ್ಲಿ ಸೇರಿ ಸಾವಿರಾರು ದೀಪ ಬೆಳಗಿದರು. ಮಧ್ವ ಸರೋವರದಲ್ಲಿ ಕ್ಷೀರಾಬ್ದಿ ಪೂಜೆ ನಡೆಯಿತು. ಆ ಬಳಿಕ ಮಠದಿಂದ ಹೊರ ಬರುವ ಕೃಷ್ಣ ದೇವರ ಉತ್ಸವ ಮೂರ್ತಿಯನ್ನು ಮಧ್ವ ಸರೋವರಕ್ಕೆ ಕೊಂಡೊಯ್ಯಲಾಯಿತು . ಸಾಲು ಸಾಲು ದೀಪಗಳ ನಡುವೆ ಕೃಷ್ಣ ದೇವರ ಮೆರವಣಿಗೆ ನಡೆಯಿತು. ರಥದ ಮುಂಭಾಗದಲ್ಲಿ  ಚಂಡೆಗಳ ನಾದ ವೈಭವ ಮೇಳೈಸಿತು.

ಈ ಬಾರಿಯ ಲಕ್ಷ ದೀಪೋತ್ಸವದಲ್ಲಿ ಪರ್ಯಾಯ ಅದಮಾರು ಶ್ರೀಗಳ ಸಹಿತ ಉಳಿದ ಮಠಗಳ ಯತಿಗಳು ಭಾಗವಹಿಸಿದ್ದರು. ನೂರಾರು ಭಕ್ತರು ಸೇರಿ ಎರಡೂ ರಥಗಳನ್ನು ಎಳೆದರು.  ಕೋವಿಡ್ ಕಾರಣದಿಂದ ಅಷ್ಟಮಿಯಂದು ಕೃಷ್ಣ ಮಠಕ್ಕೆ ಬರಲು ಸಾಧ್ಯವಾಗದ ಭಕ್ತರು ಲಕ್ಷದೀಪೋತ್ಸವದಲ್ಲಿ ಪಾಲ್ಗೊಂಡು ಸಂತೋಷಗೊಂಡರು.

ಮುಂದಿನ ಮೂರು ದಿನಗಳ ಕಾಲ ಸಮಾನ ವೈಭವದಿಂದ ಲಕ್ಷ ದೀಪೋತ್ಸವ ನಡೆಯುತ್ತದೆ. ಲಕ್ಷದೀಪೋತ್ಸವದೊಂದಿಗೆ ಆರಂಭವಾಗುವ ಕೃಷ್ಣ ದೇವರ ರಥೋತ್ಸವ ಮುಂದಿನ ಮಳೆಗಾಲದವರೆಗೆ  ನಡೆಯುತ್ತೆ. ಅಷ್ಟಮಠಗಳ ರಥಬೀದಿಯಲ್ಲಿ ಸೇವಾರೂಪದಲ್ಲಿ ನಡೆಯುವ ಉತ್ಸವದಿಂದ ದಿನವೂ ಹಬ್ಬದ ವಾತಾವರಣ ಇರುತ್ತೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *