ಆತ್ಮಹತ್ಯೆಗೆ ಶರಣಾದ ನೇಕಾರ; ಕುಟುಂಬ ಸದಸ್ಯರ ಭೇಟಿಯಾಗಿ ಸಾಂತ್ವನ ಹೇಳಿದ ಸಿದ್ದರಾಮಯ್ಯ
ಆರ್ಥಿಕ ಸಂಕಷ್ಟದಲ್ಲಿರುವ ಮೃತ ನಾರಾಯಣ ರೆಡ್ಡಿ ಕುಟುಂಬದ ಪತ್ನಿ ಮಂಜುಳಾ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಬಳಿಕ ಆರ್ಥಿಕ ಸಹಾಯ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ನೇರವಾಗುವುದಾಗಿ ಹೇಳಿದರು.
ದೊಡ್ಡಬಳ್ಳಾಪುರ: ಲಾಕ್ ಡೌನ್ ಸಮಯದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕು ಆತ್ಮಹತ್ಯೆಗೆ ಶರಣಾದ ನೇಕಾರನ ಮನೆಗೆ ಇಂದು ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ದೊಡ್ಡಬಳ್ಳಾಪುರ ನಗರದ ಕೆ.ಎಂ.ಹೆಚ್ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ನೇಕಾರರ ಚಿಂತನ ಸಭೆಯಲ್ಲಿ ಭಾಗವಹಿಸಲು ನಗರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದರು. ಸಭೆಗೂ ಮುನ್ನ ಲಾಕ್ ಡೌನ್ ಸಮಯದಲ್ಲಿ ಆರ್ಥಿಕ ಸಂಕಷ್ಟದಿಂದ ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾದ ನೇಕಾರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
ನಗರದ ಭುವನೇಶ್ವರ ನಗರದ ನಾರಾಯಣರೆಡ್ಡಿ ಲಾಕ್ ಡೌನ್ ಸಮಯದಲ್ಲಿ ಕೆಲಸ ಸಿಗದೆ 1 ಲಕ್ಷದ 50 ಸಾವಿರ ಸಾಲ ಮಾಡಿಕೊಂಡಿದ್ದರು. ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದರು. ಆರ್ಥಿಕ ಸಂಕಷ್ಟದಲ್ಲಿರುವ ಮೃತ ನಾರಾಯಣ ರೆಡ್ಡಿ ಕುಟುಂಬದ ಪತ್ನಿ ಮಂಜುಳಾ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಬಳಿಕ ಆರ್ಥಿಕ ಸಹಾಯ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ನೇರವಾಗುವುದಾಗಿ ಹೇಳಿದರು.
ಕೈ ಮಗ್ಗ ಮತ್ತು ಫವರ್ ಮಗ್ಗಗಳಲ್ಲಿ ದಿನವಿಡೀ ದುಡಿದರೂ ಈ ಮೊದಲು ಕನಿಷ್ಠ 380 ರೂ. ನಂತೆ ಎರಡು ಸೀರೆ ನೇಯ್ದು ಕೂಲಿ ಪಡೀತಾ ಇದ್ರು. ಆದರೆ ಇದೀಗ ಕೊರೋನಾ ಸಂಕಷ್ಟಕ್ಕೆ ತುತ್ತಾದ ಕೂಲಿ ಕಾರ್ಮಿಕರಿಗೆ ಸದ್ಯ 300 ರೂ ಕೂಲಿ ನೀಡ್ತಾ ಇದ್ದು 80 ರೂ ಕಡಿತ ಮಾಡಲಾಗಿದೆ. ಅದರಲ್ಲೂ ಕೆಲವು ಮಗ್ಗಗಳಲ್ಲಿ ಒಂದು ಸೀರೆಗೆ ಸೀಮಿತ ಮಾಡಿದ್ದು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಜೊತೆ ಮಾತನಾಡಿ ಪರಿಹಾರ ಕೊಡಿಸುವ ಭರವಸೆ ನೀಡಿದರು.