ರಾಜಹಂಸ ಬಸ್ ಪ್ರಯಾಣ ದರದಲ್ಲಿ ಭಾರಿ ಕಡಿತ
ಲಬುರಗಿ, ಡಿಸೆಂಬರ್ 7 : ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಲಬುರಗಿ-ಹೈದರಾಬಾದ್ ನಡುವಿನ ರಾಜಹಂಸ ಬಸ್ ಪ್ರಯಾಣದರವನ್ನು ಇಳಿಕೆ ಮಾಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ದರ ಇಳಿಸಲಾಗಿದ್ದು, ಉಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.
ಕಲಬುರಗಿ ವಿಭಾಗ-1 ಕಲಬುರಗಿ-ಹೈದರಾಬಾದ್ ಮಾರ್ಗದಲ್ಲಿ ಸಂಚರಿಸುವ ರಾಜಹಂಸ ಬಸ್‍ಗಳ ಪ್ರಯಾಣದರ ಇಳಿಕೆ ಮಾಡಿ ಆದೇಶ ಹೊರಡಿಸಿದೆ. ಘಟಕ-1ರ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ವಿ. ಹೆಚ್. ಸಂತೋಷ ಕುಮಾರ ಈ ಕುರಿತು ಮಾಹಿತಿ ನೀಡಿದ್ದಾರೆ.
ಕಲಬುರಗಿಯಿಂದ ಹೈದರಾಬಾದ್‌ಗೆ ತೆರಳುವ ರಾಜಹಂಸ ಬಸ್ ಪ್ರಯಾಣ ದರ 320 ರೂ., ಹುಮ್ನಾಬಾದ್-ಹೈದರಾಬಾದ್ 252 ರೂ., ಮನ್ನಾಖ್ಖೇಳಿ-ಹೈದರಾಬಾದ್ 202 ರೂ., ಜಹೀರಾಬಾದ್-ಹೈದರಾಬಾದ್ 165 ರೂ. ಇದೆ.
ಕಲಬುರಗಿ-ಹುಮ್ನಾಬಾದ್ 83 ರೂ., ಕಲಬುರಗಿ-ಮನ್ನಾಖ್ಖೇಳಿಗೆ 134 ರೂ. ಹಾಗೂ ಕಲಬುರಗಿ-ಜಹೀರಾಬಾದ್‍ಗೆ 171 ರೂ.ಗಳ ದರವನ್ನು ನಿಗದಿಪಡಿಸಲಾಗಿದೆ.
ವೇಳಾಪಟ್ಟಿ; ಕಲಬುರಗಿ-ಹೈದರಾಬಾದ್ ರಾಜಹಂಸ ಬಸ್ ಕಲಬುರಗಿ ಕೇಂದ್ರ ಬಸ್ ನಿಲ್ದಾಣದಿಂದ ಪ್ರತಿದಿನ ಮಧ್ಯಾಹ್ನ 12, 1, 3 ಗಂಟೆಗೆ ಮತ್ತು ರಾತ್ರಿ 11, 11.30 ಹಾಗೂ 11.55ಕ್ಕೆ ಹೊರಡಲಿದೆ.
ಹೈದರಾಬಾದ್‌ನಿಂದ ಕಲಬುರಗಿಗೆ ಬರುವ ಬಸ್ ಮಧ್ಯರಾತ್ರಿ 12:15, ಬೆಳಗ್ಗೆ 9.30, 10.15, 11.30ಕ್ಕೆ ಹೊರಡಲಿವೆ. ರಾತ್ರಿ 11 ಮುತ್ತು 11.30ಕ್ಕೆ ಹೊರಡುತ್ತವೆ.