ಇಂದು ವಿಧಾನ ಪರಿಷತ್ ಅಧಿವೇಶನ: ಸಭಾಪತಿ ಪದಚ್ಯುತಿಗೆ ಬಿಜೆಪಿ ಪ್ರಯತ್ನ

ಅನಿರ್ದಿಷ್ಟಾವಧಿ ಮುಂದೂಡಿಕೆಯಾಗಿದ್ದ ವಿಧಾನ ಪರಿಷತ್ ಕಲಾಪ ಮಂಗಳವಾರ ಸಮಾವೇಶಗೊಳ್ಳಲಿದೆ. ಕಲಾಪದಲ್ಲಿ ಸಭಾಪತಿಯವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಬಿಜೆಪಿ ತಯಾರಿ ನಡೆಸಿದೆ. ಸರ್ಕಾರ ತಮಗಿರುವ ಎಲ್ಲಾ ಕಾನೂನು ಹಾಗೂ ತಾಂತ್ರಿಕ ಅಂಶ ಆಧಾರದಲ್ಲಿ ಸಭಾಪತಿ ವಿರುದ್ಧ ತೊಡೆತಟ್ಟಿದೆ ಇದು ಸಾಂವಿಧಾನಿಕ ಬಿಕ್ಕಟ್ಟಿಗೆ ಅವಕಾಶ ಮಾಡಿಕೊಟ್ಟಿದೆ.

ಬೆಂಗಳೂರು: ಅನಿರ್ದಿಷ್ಟಾವಧಿ ಮುಂದೂಡಿಕೆಯಾಗಿದ್ದ ವಿಧಾನ ಪರಿಷತ್ ಕಲಾಪ ಮಂಗಳವಾರ ಸಮಾವೇಶಗೊಳ್ಳಲಿದೆ. ಕಲಾಪದಲ್ಲಿ ಸಭಾಪತಿಯವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಬಿಜೆಪಿ ತಯಾರಿ ನಡೆಸಿದೆ. ಸರ್ಕಾರ ತಮಗಿರುವ ಎಲ್ಲಾ ಕಾನೂನು ಹಾಗೂ ತಾಂತ್ರಿಕ ಅಂಶ ಆಧಾರದಲ್ಲಿ ಸಭಾಪತಿ ವಿರುದ್ಧ ತೊಡೆತಟ್ಟಿದೆ ಇದು ಸಾಂವಿಧಾನಿಕ ಬಿಕ್ಕಟ್ಟಿಗೆ ಅವಕಾಶ ಮಾಡಿಕೊಟ್ಟಿದೆ.

ಡಿಸೆಂಬರ್ 7ರಿಂದ ಆರಂಭವಾದ ವಿಧಾನ ಸಭೆ ಚಳಿಗಾಲದ ಅಧಿವೇಶನ ಡಿಸೆಂಬರ್ 10ರಂದು ಅನಿರ್ದಿಷ್ಟಾವ ಧಿ ಮುಂದೂಡಿಕೆಯಾಗಿತ್ತು. ಗೋಹತ್ಯ ವಿಧೇಯಕ ಮಸೂದೆ ಮಂಡನೆಯ ಮಾಡದೆ ಸಭಾಪತಿ ವಿರುದ್ಧ ಅವಿ ಶ್ವಾಸ ನಿರ್ಣಯ ಮಂಡನೆಗೆ ಬಿಜೆಪಿ ಮುಂದಾಗಿತ್ತು. ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯವನ್ನು ತಾಂತ್ರಿಕ ಹಾಗೂ ಕಾನೂನಾತ್ಮಕ ಕಾರಣಗಳಿಂದ ಸಭಾಪತಿ ಅವರು ತಿರಸ್ಕರಿಸಿದ್ದರು. ಆದರೆ ಸಭಾಪತಿ ಅವರ ನಿರ್ಣಯ ವನ್ನು ಸದನದಲ್ಲಿ ಪ್ರಕಟಿಸಿದೆ ಕಾರ್ಯದರ್ಶಿ ಮೂಲಕ ಸಭಾ ಸದಸ್ಯರದ ಗಮನಕ್ಕೆ ತಂದಿದ್ದರು.

ಸಭಾಪತಿ ವಿರುದ್ಧ ರಾಜ್ಯಪಾಲರ ಕಚೇರಿ ಕದ ತಟ್ಟಿದ ಪರಿಷತ್ ಸಭಾನಾಯಕ, ಬಿಜೆಪಿ ಸದಸ್ಯರು ಮತ್ತೊಂದು ದಿನ ಕಲಾಪ ನಡೆಸುವಂತೆ ಒತ್ತಾಯದ ನಿರ್ದೇಶನವನ್ನು ಸಭಾಪತಿ ಮೂಲಕ ಹೊರಡಿಸಿ ವಿಧಾನ ಪರಿಷತ್ ಕಲಾಪ ಸಮಾವೇಶಗೊಳ್ಳುವಂತೆ ಮಾಡಿದ್ದಾರೆ. ಇದೂ ಸಹ 130 ವರ್ಷಗಳ ಇತಿಹಾಸವಿರುವ ವಿಧಾನ ಪರಿಷತ್ ನ ಇತಿಹಾಸದಲ್ಲಿ ಮೊದಲ ಭಾರಿಗೆ ಘಟಿಸುತ್ತಿರುವುದು ವಿಪರ್ಯಾಸವೇ ಸರಿ.

ಒಂದು ದಿನದ ಮಟ್ಟಿಗೆ ನಡೆಯಲಿರುವ ಇಂದಿನ ಕಲಾಪ, ಸರ್ಕಾರ ಮತ್ತು ಸಭಾಪತಿಗಳ ನಡುವೆ ಸಂಘರ್ಷಕ್ಕೆ ನಾಂದಿ ಹಾಡುವ ನಿರೀಕ್ಷೆಗಳಿವೆ. ಆಡಳಿತಾರೂಢ ಬಿಜೆಪಿ ಸದಸ್ಯರು ಸಭಾಪತಿಗಳು ಇಂತಹ ಆದೇಶವನ್ನು ಸದನದಲ್ಲೇ ಪ್ರಕಟಿಸಬೇಕು. ಚರ್ಚಿಸಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿಯುವುದು ಬಹುತೇಕ ಖಚಿತವಾಗಿದೆ.

ಇದಕ್ಕೆ ಪ್ರತಿಯಾಗಿ ಪ್ರತಿುಪಕ್ಷ ಕಾಂಗ್ರೆಸ್, ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಪರವಾಗಿ ಗಟ್ಟಿಯಾಗಿ ನಿಲ್ಲಲು ಉದ್ದೇಶಿಸಿದ್ದಾರೆ. ಹಾಗಾಗಿ ಇಂದಿನ ಕಲಾಪದಲ್ಲಿ ಬಿಸಿಬಿಸಿ ಚರ್ಚೆ, ವಾಗ್ವಾದ ನಡೆಯುವ ಸಂಭವವಿದೆ.

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಆಯನೂರ್ ಮಂಜುನಾಥ್, ಎಂ ಕವಿತಾಗಿಮಠ, ಶಶಿಲ್ ನಮೋಶಿ ಮುಂಚೂಣಿಯಲ್ಲಿದ್ದು ಎಲ್ಲರೂ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ವಿಧಾನ ಪರಿಷತ್ ನಲ್ಲಿ ಬಿಜೆಪಿಯ 31 ಮಂದಿ ಸದಸ್ಯರಿದ್ದು, ಕಾಂಗ್ರೆಸ್ ನಲ್ಲಿ ಸಭಾಪತಿಗಳು ಸೇರಿದಂತೆ 29 ಸದಸ್ಯರನ್ನು ಹೊಂದಿದೆ. ಇದೀಗ ಜೆಡಿಎಸ್ ಸಹಾಯದೊಂದಿಗೆ ಬಿಜೆಪಿ ಸಭಾಪತಿಯನ್ನು ಆಯ್ಕೆ ಮಾಡಲು ಮುಂದಾಗಿದೆ. ಈ ಹಿಂದೆ ಜೆಡಿಎಸ್ ಸಹಾಯದೊಂದಿಗೆ ಕೃಷಿ ಮಸೂದೆಯನ್ನು ಜಾರಿಗೆ ತಂದಿತ್ತು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿಯವರು ಮಾತನಾಡಿ, ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಲಿದೆ. ಎಂಎಲ್’ಸಿ ರವಿ ಕುಮಾರ್ ಅವರು ಜೆಡಿಎಸ್ ಬೆಂಬಲ ನೀಡುವುದಾಗಿ ದೃಢಪಡಿಸಿದ್ದಾರೆಂದು ಹೇಳಿದ್ದಾರೆ.

ಎಲ್ಲಾ ಬೆಳವಣಿಗೆ ಹಿನ್ನೆಲೆ ಕಾಂಗ್ರೆಸ್ ಹಾಗೂ ಬಿಜೆಪಿ ತಮ್ಮೆಲ್ಲಾ ಸದಸ್ಯರೂ ಮಂಗಳವಾರ ನಡೆಯುವ ಕಲಾಪಕ್ಕೆ ಹಾಜರಿರುವಂತೆ ಸೂಚನೆ ನೀಡಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸದನದಲ್ಲಿ ಹಾಜರಿರಲಿದ್ದಾರೆಂದು ತಿಳಿದುಬಂದಿದೆ.

ಈ ನಡುವೆ ಮೇಲ್ಮನೆ ಅಧಿವೇಶನದ ಉಪವೇಶನದಲ್ಲಿ ತಮ್ಮ ವಿರುದ್ಧದ ಬಿಜೆಪಿಯ ಅವಿಶ್ವಾಸ ನಿರ್ಣಯ ಮಂಡನೆಯನ್ನು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ತಿರಸ್ಕರಿಸಿದ್ದಕ್ಕೆ ಮೇಲ್ಮನೆಯ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿ, ಪ್ರತಾಪ್‌ಚಂದ್ರಶೆಟ್ಟಿ ವಿರುದ್ಧ ಸಭಾಪತಿ ಅಧಿಕಾರ ದುರುಪಯೋಗ ಆರೋಪ ಹೊರಿಸಿದ್ದಾರೆ.

ಪ್ರತಾಪ್‌ಚಂದ್ರ ಶೆಟ್ಟಿ ತಿರಸ್ಕಾರಕ್ಕೆ ನಾಲ್ಕು ಪುಟಗಳ ಹಿಂಬರಹ ನೀಡಿ ಬಿಜೆಪಿಯ ಅವಿಶ್ವಾಸ ನಿರ್ಣಯ ಸೂಚನೆಯನ್ನು ತಿರಸ್ಕರಿಸಿ ಪ್ರತಾಪ್‌ಚಂದ್ರ ಶೆಟ್ಟಿ ನೀಡಿರುವ ಹಿಂಬರಹವನ್ನು ಸಹ ತಿರಸ್ಕರಿಸುವುದಾಗಿ ಆಯನೂರು ಮಂಜುನಾಥ್‌ ಹೇಳಿದ್ದಾರೆ.

ನಿಯಮಾನುಸಾರವೇ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶಕ್ಕೆ ಸಲ್ಲಿಸಲಾಗಿದೆ. ಸಭಾಪತಿಯವರ ವಿರುದ್ಧದ ಆರೋಪಗಳು ನಿಖರವಾಗಿಲ್ಲ. ಸಭಾಪತಿಗಳ ನಿರ್ದೇಶನದಂತೆ ಈ ಹಿಂಬರಹವನ್ನು ತಮಗೆ ನೀಡಲಾಗಿದೆ ಎಂದು ಕಾರ್ಯದರ್ಶಿ ಪತ್ರ ಬರೆದಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *