ಶಾಲೆ ಆರಂಭದ ದಿನಾಂಕ ಘೋಷಣೆ ಬೆನ್ನಲ್ಲೇ ಹೆಚ್ಚಿದ ಕೊರೋನಾ ಭೀತಿ; ಮತ್ತೆ ಸಭೆ ನಡೆಸಲು ಸರ್ಕಾರ ನಿರ್ಧಾರ
Karnataka Schools Reopen Date: ಕರ್ನಾಟಕದಲ್ಲಿ ಶಾಲಾರಂಭ ನಿರ್ಧಾರದ ಬೆನ್ನಲ್ಲೆ ವಿದೇಶದಲ್ಲಿ ಕೊರೋನಾ ಅಟ್ಟಹಾಸ ಶುರುವಾಗಿದೆ. ಹೀಗಾಗಿ ಶಾಲಾರಂಭ ಕುರಿತು ಮತ್ತೊಮ್ಮೆ ಸಭೆ ನಡೆಸಲು ನಿರ್ಧಾರ ಮಾಡಲಾಗಿದೆ.
ಬೆಂಗಳೂರು (ಡಿ. 22): ರಾಜ್ಯಾದ್ಯಂತ ಜನವರಿ 1ರಿಂದ 9ರಿಂದ 12ನೇ ತರಗತಿಯವರೆಗೆ ಶಾಲೆಗಳನ್ನು ಆರಂಭಿಸುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ, ರಾಜ್ಯದಲ್ಲಿ ಶಾಲಾ ಕಾಲೇಜು ಆರಂಭದ ದಿನಾಂಕ ಬದಲಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಜನವರಿಯಲ್ಲಿ ಶಾಲೆಗಳ ಪುನರಾರಂಭದ ಬಗ್ಗೆ ಮತ್ತೆ ಪರಾಮರ್ಶೆ ಸಭೆ ನಡೆಯಲಿದೆ.
ವಿದೇಶದಲ್ಲಿ ಕೊರೋನಾ ರೂಪಾಂತರ ಆರ್ಭಟ ಹಿನ್ನಲೆ ದೇಶಕ್ಕೂ ಮತ್ತೊಮ್ಮೆ ಕೊರೊನಾ ಆತಂಕ ಎದುರಾಗಿದೆ. ಈಗಾಗಲೇ ಜನವರಿ 1ರಿಂದ ಶಾಲಾರಂಭ ಮಾಡಲು ಕರ್ನಾಟಕ ಸರ್ಕಾರ ನಿರ್ಧಾರ ಮಾಡಿದೆ. SSLC ಹಾಗೂ ದ್ವಿತೀಯ ಪಿಯುಸಿ ಆರಂಭ ಮಾಡಲು ನಿರ್ಧರಿಸಲಾಗಿದೆ. 6 ರಿಂದ 9 ನೇ ತರಗತಿಗೆ ವಿದ್ಯಾಗಮ ನಡೆಸಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಶಾಲಾರಂಭ ನಿರ್ಧಾರದ ಬೆನ್ನಲ್ಲೆ ವಿದೇಶದಲ್ಲಿ ಕೊರೋನಾ ಅಟ್ಟಹಾಸ ಶುರುವಾಗಿದೆ. ಹೀಗಾಗಿ ಶಾಲಾರಂಭ ಕುರಿತು ಮತ್ತೊಮ್ಮೆ ಸಭೆ ನಡೆಸಲು ನಿರ್ಧಾರ ಮಾಡಲಾಗಿದೆ.
ಆದಷ್ಟು ಬೇಗ ತಾಂತ್ರಿಕ ಸಮಿತಿ ತಜ್ಞರ ಸಭೆ ನಡೆಸಲು ನಿರ್ಧಾರ ಮಾಡಲಾಗಿದೆ. ಶೈಕ್ಷಣಿಕ ಚಟುವಟಿಕೆ ಆರಂಭ ಸೂಕ್ತವೇ ಎಂದು ಚರ್ಚೆ ನಡೆಸಲಾಗುವುದು. ಇನ್ನೂ ಒಂದು ವಾರಗಳ ಕಾಲಾವಕಾಶ ಇರುವ ಹಿನ್ನಲೆಯಲ್ಲಿ ಚರ್ಚೆ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.
ರಾಜ್ಯಾದ್ಯಂತ ಮೊದಲ ಹಂತವಾಗಿ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಆರಂಭಿಸಿದ ನಂತರ 9 ಪ್ರಥಮ ಪಿಯುಸಿ ತರಗತಿಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿತ್ತು. ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜನವರಿ 1ರಿಂದ ಶಾಲೆ ಆರಂಭಕ್ಕೆ ಒಪ್ಪಿಗೆ ಸೂಚಿಸಲಾಗಿತ್ತು. 6ರಿಂದ ಪಿಯುಸಿ ತರಗತಿಯವರೆಗೆ ಶಾಲೆ ಆರಂಭಿಸಲು ನಿರ್ಧಾರ ಮಾಡಲಾಗಿತ್ತು. ತಾಂತ್ರಿಕ ಸಲಹಾ ಸಮಿತಿ ಕೊಟ್ಟ ವರದಿ, ತಜ್ಞರು ಕೊಟ್ಟ ಸಲಹೆ ಮೇರೆಗೆ ಶಾಲೆ ಆರಂಭಿಸೋ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿತ್ತು.
ಜನವರಿ 1ರಿಂದ 8 ಮತ್ತು 9ನೇ ತರಗತಿ ವಿದ್ಯಾಗಮ ಆರಂಭವಾಗಲಿದೆ. ಜನವರಿ 6ರಿಂದ 9ನೇ ತರಗತಿ ವಿದ್ಯಾಗಮ ಆರಂಭವಾಗಲಿದೆ. ಈ ಬಾರಿ ಶಾಲೆ ಆವರಣ ಒಳಗೆ ಮಾತ್ರ ವಿದ್ಯಾಗಮ ನಡೆಯಲಿದೆ. ವಾರಕ್ಕೆ ಮೂರು ದಿನ ಮಾತ್ರ ವಿದ್ಯಾಗಮ ಇರಲಿದೆ. ಶಾಲೆಗೆ ಬರೋ ಮಕ್ಕಳು ಪೋಷಕರಿಂದ ಒಪ್ಪಿಗೆ ಪತ್ರ ತರಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದರು.