ರಾಜ್ಯ ರಾಜಧಾನಿಯಲ್ಲಿ ಮತ್ತೊಂದು ವಿದೇಶಿ ಡ್ರಗ್ಸ್ ಜಾಲ ಪತ್ತೆ…! ಹೊಸ ವರ್ಷಕ್ಕೆ ಅಮಲೇರಿಸಲು ರೆಡಿಯಾಗಿದ್ದವರು ಅಂದರ್…!
ಯೆಸ್ ಹೊಸ ವರ್ಷ ಹತ್ತಿರವಾಗ್ತಾ ಇದ್ದಂತೆ ರಾಜಧಾನಿಯ ಪಾರ್ಟಿಗಳಿಗೆ ಕಿಕ್ಕೆರಿಸುವ ಮಾದಕ ಬ್ಯುಸಿನೆಸ್ ಜೋರಾಗಿದೆ.. ಇಂತಹೊಂದು ವಿದೇಶಿ ರಾಕೆಟ್ ನ್ನು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ ಎನ್ ಸಿಬಿ ಅಧಿಕಾರಿಗಳು ಭೇಧಿಸಿದ್ದಾರೆ. ಹೌದು ಅಪಾರ ಪ್ರಮಾಣದ ವಿದೇಶದಿಂದ ಬಂದಿದ್ದ ಮಾದಕ ವಸ್ತುಗಳು ಹಾಗೂ ಒರ್ವ ಮಹಿಳೆ ಸೇರಿ ಇಬ್ಬರು ವಿದೇಶಿ ಪ್ರಜೆಗಳನ್ನ ಬಂಧಿಸಿದ್ದಾರೆ…
ಯೆಸ್ ಎನ್ ಸಿ ಬಿ ಅಧಿಕಾರಿಗಳು ಬೆಂಗಳೂರಿನ ಫಾರೀನ್ ಪೋಸ್ಟ್ ಅಫೀಸ್ ಬಳಿ ಈ ಕಾರ್ಯಾಚರಣೆಯನ್ನ ನಡೆಸಿದ್ದಾರೆ. ನೆದರ ಲ್ಯಾಂಡ್ ನಿಂದ ಬಂದಿದ್ದ ಟೇಬಲ್ ಕ್ಲಾತ್ ನಲ್ಲಿ ೩೦೦೦ ಎಂ ಡಿಎಂ ಎ ಫಿಲ್ಸ್ ಬಂದಿದ್ರೆ.. ಇಥಿಯೋಪಿಯಾ ದಿಂದ ೨೪೦ ಗ್ರಾಂ ಕೊಕೈನ್ ಬಂದಿತ್ತು. ಇದರ ಒಟ್ಟು ಮೌಲ್ಯ ಸುಮಾರು ೫೫ ಲಕ್ಷ. ಇದನ್ನ ಮೊದಲೆ ತಿಳಿದುಕೊಂಡ ಎನ್ ಸಿ ಬಿ ಅಧಿಕಾರಿಗಳು ಫಾರೀನ್ ಪೋಸ್ಟ್ ಅಫೀಸ್ ಬಳಿ ಪಾರ್ಸೆಲ್ ಪಡೆಯುವವರನ್ನ ಹಿಡಿಯೋಕೆ ನಿಂತಿದ್ದಾಗ ಎಮ್ಯಾನ್ಯುಲ್ ಮೈಕಲ್ ಹಾಗೂ ರಾಮಲ ಶೆಢಫಾ ನ್ಯಾನ್ಸಿ ಎಂಬುವರು ಬಂದಿದ್ದು ಅವರನ್ನ ಬಂಧಿಸಿದ್ದು ಅವರು ಕೀನ್ಯಾ ಮೂಲದವರು ಎಂದು ತಿಳಿದು ಬಂದಿದೆ.
ಒಟ್ಟಿನಲ್ಲಿ ರಾಜಧಾನಿಯಲ್ಲಿ ಈ ಬಾರಿಯ ಹೊಸ ವರ್ಷಕ್ಕೆ ಮತ್ತಿನ ಲೋಕವನ್ನ ಕಡಿಮೆ ಮಾಡಲು ತನಿಖಾ ಸಂಸ್ಥೆಗಳು ಭರ್ಜರಿಯಾಗಿ ಕೆಲಸ ಮಾಡುತ್ತಿದ್ದು ಕೆಲಸ ಇನ್ನೂ ಮುಂದುವರೆದಿದೆ.