ಬೆಂಗಳೂರಿಗೆ ಎಂಟ್ರಿ ಕೊಡ್ತಿದೆ ಡೆಡ್ಲಿ ಗ್ಯಾಂಗ್…! ಎಟಿಎಂನಿಂದ ಹಣ ಡ್ರಾ ಮೊದಲು ಇಲ್ಲಿ ನೋಡಿ !
ಸಿಲಿಕಾನ್ ಜನರೇ ಹುಷಾರಾಗಿರಿ ಹಣ ಕ್ಯಾರಿ ಮಾಡುವಾಗ ಇದ್ದಕ್ಕಿದ್ದಂತೆ ನಿಮ್ಮ ಹಣ ಮಾಯವಾಗುತ್ತದೆ. ಯಾಕಂದ್ರೆ ಸಿಟಿಗೆ ಮತ್ತೆ ಎಂಟ್ರಿಯಾಗಿದ್ದಾರೆ ಓಜಿಕುಪ್ಪಂ ಗ್ಯಾಂಗ್. ಕೆಲ ವರ್ಷಗಳ ಹಿಂದೆ ಬೆಂಗಳೂರು ಜನರ ನಿದ್ದೆ ಕೆಡಿಸಿದ್ದ ಓಜಿಕುಪ್ಪಂ ಗ್ಯಾಂಗ್ವೊಂದು ಆಂಧ್ರದಿಂದ ರೈಲುಗಳ ಮೂಲಕ ನಗರಕ್ಕೆ ಎಂಟ್ರಿಯಾಗಿದ್ದಾರೆ.
ಇವರು ರೈಲ್ವೇ ನಿಲ್ದಾಣದ ಆಸುಪಾಸಿನಲ್ಲಿ ವಾಸಮಾಡುತ್ತಿದ್ದು. ಜನರನ್ನು ಬೇರೆಡೆ ಆಕರ್ಷಸಿ ಬ್ಯಾಗ್ನಲ್ಲಿದ್ದ ಅಮೂಲ್ಯ ವಸ್ತುಗಳನ್ನು ತೆಗೆಯುವುದರಲ್ಲಿ ಎತ್ತಿದ ಕೈ. ಅದರಲ್ಲೂ ಪ್ರಮುಖವಾಗಿ ಬ್ಯಾಂಕ್ಗಳಿಗೆ, ಎಟಿಎಂಗಳಿಗೆ ಹೋಗಿ ಬರುವವರಿಗೆಯೇ ಟಾರ್ಗೆಟ್ ಮಾಡುತ್ತಾರೆ.
ಬೆಂಗಳೂರಿನ ಹಲವು ಠಾಣೆಗಳ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿ ಅರೆಸ್ಟ್ ಆಗಿ ಜೈಲು ಸೇರಿದ್ದ ಈ ಗ್ಯಾಂಗ್ ಈಗ ಬೇಲ್ ಪಡೆದು ರಿಲೀಸ್ ಆಗಿದ್ದಾರೆ. ಇದೀಗ ಬೆಂಗಳೂರಿನ ಜನರಿಗೆ ಮತ್ತೆ ಓಜಿ ಕುಪ್ಪಂ ಗ್ಯಾಂಗ್ನಿಂದ ಎಚ್ಚರವಾಗಿರಬೇಕಾಗಿದೆ.