ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿ ಸವಾಲಿನ ಮೇಲೆ ಸವಾಲು !
2ನೇ ಹಂತದ ನಮ್ಮ ಮೆಟ್ರೋ ಕಾಮಗಾರಿ ಸವಾಲಾಗಿ ಪರಿಣಮಿಸಿದೆ. ಸೆಕೆಂಡ್ ಫೇಸ್ ಸುರಂಗ ಮಾರ್ಗದಲ್ಲಿ 13 ಕಿಮೀ ಸುರಂಗ ಮಾರ್ಗವಿದ್ದು, ಈ ಕಾಮಗಾರಿಗೆ ಬೋರ್ವೆಲ್ಗಳು ಹಾಗೂ ತೆರೆದ ಬಾವಿಗಳು ಟಿಬಿಎಂಗೆ ಸವಾಲಾಗಿವೆ. ಸುಮಾರು 23 ಬೋರ್ ವೆಲ್,16 ತೆರೆದ ಬಾವಿಗಳಿವೆ.
ಈಗಾಗ್ಲೆ ನಾಲ್ಕು ಟಿಬಿಎಂಗಳು ಸುರಂಗ ಮಾರ್ಗವನ್ನ ಕೊರೆಯುತ್ತಿವೆ. ಕೆಲ ಕೊಳವೆ ಬಾವಿಗಳನ್ನ ಮುಚ್ಚಿದ್ದು, ಬೋರ್ವೆಲ್ ಗಳನ್ನ ಮೆಟ್ರೋ ನಿಗಮ ತೆರವು ಮಾಡಿದೆ. ಟನಲ್ ಇರೋ ಭಾಗಗಳಲ್ಲಿ ಓಪನ್ ಏರ್ ಬಂದ್ರೆ ಕಾಮಗಾರಿ ನಡೆಸೋದು ಕಷ್ಟ. ಹೀಗಾಗಿ ಬಿಎಂಆರ್ಸಿಎಲ್ ಎಚ್ಚರಿಕೆಯಿಂದ ಹೆಜ್ಜೆ ಇಡ್ತಿದೆ.