ಕೊರೋನಾ ನಡುವೆಯೂ ಬೆಂಗಳೂರಿನ ಮಾಲ್​ಗಳಲ್ಲಿ ಕ್ರಿಸ್ಮಸ್​ ತಯಾರಿ ಹೇಗಿದೆ ಗೊತ್ತಾ..?

ಡಿಸೆಂಬರ್​ ಬಂತು ಅಂದ್ರೆ ಸಾಕು ನಾಡಿನೆಲ್ಲಡೆ ಕ್ರಿಸ್ಮಸ್ ಹಬ್ಬದ ಸಂಭ್ರಮ. ವರ್ಷದ ಕೊನೆಯಲ್ಲಿ ಬರೋ ಕ್ರಿಸ್ಮಸ್ ಹಬ್ಬಕ್ಕೆ ಸಿಲಿಕಾನ್ ಸಿಟಿ ಸಂಪೂರ್ಣ ಸಿದ್ದವಾಗಿದೆ. ನಗರದ ಮಾಲ್​ಗಳಂತೂ ಜಗಮಗಿಸ್ತಾ ಇವೆ.


ಕೊರೊನಾ ಎಂಟ್ರಿಯಾಗಿದ್ದೇ ತಡ ಸಿಲಿಕಾನ್ ಸಿಟಿಯಲ್ಲಿ 2020 ವರ್ಷದ ಹಬ್ಬಗಳ ಕಳೆಯೇ ಮಾಯಾವಾಗಿತ್ತು. ಆದ್ರೆ ಇದೀಗ ಮತ್ತೆ ಸಿಲಿಕಾನ್​ ಸಿಟಿ ಯಥಾಸ್ಥಿತಿಗೆ ತಲುಪಿದ್ದು, ಕ್ರಿಸ್​ಮಸ್​ ಹಬ್ಬಕ್ಕೆ ಬೆಂಗಳೂರಿನ ಮಾಲ್​ಗಳು ಸಖತ್ ಕಲರ್​ಫುಲ್ ಆಗಿ ಮಿಂಚುತ್ತಿದೆ. ಇಷ್ಟು ದಿನ ಲಾಕ್ ಡೌನ್​ನಿಂದ ಬೇಜಾರಾಗಿದ್ದೇವು. ಈ ಬಾರಿಯ ಒರಾಯನ್​ ಮಾಲ್​ ಡೆಕೊರೆಷನ್ ನೋಡಿ ತುಂಬಾ ಕುಷಿಯಾಯ್ತು. ಮಕ್ಕಳಂತೂ ಸಿಕ್ಕಪಟ್ಟೆ ಎಂಜಾಯ್​ ಮಾಡ್ತಿದ್ದಾರೆ ಎಂದು ಗ್ರಾಹಕರು ಹೇಳಿದ್ದಾರೆ.


ಒಂದೆಡೆ ಕಲರ್ ಕಲರ್ ಲೈಟಿಂಗ್ಸ್. ಅದ್ವುತ ಲೋಕವೇ ಧರೆಗಿಳಿದಂತೆ ಭಾಸವಾಗುವಂತಿರೋ ವಿನ್ಯಾಸ. ಮತ್ತೊಂದೆಡೆ ಕಲರ್​ಫುಲ್​ ಕ್ರಿಸ್​ ಮಸ್​ ಕೇಕ್​ ಲೋಕ. ಇವೆಲ್ಲವುಗಳ ಎದುರು ನಿಂತೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ ಪ್ರೀತಿಪಾತ್ರರೊಂದಿಗೆ ಎಂಜಾಯ್​ ಮಾಡ್ತಿರೋ ಸಿಟಿ ಜನ್ರು. ಕೊರೊನಾ ಬಳಿಕ ಇದೀಗ ಮಾಲ್​ಗಳತ್ತ ಮುಖ ಮಾಡೋದಕ್ಕೆ ಕ್ರಿಸ್​ಮಸ್​ ಹಬ್ಬದ ಪ್ರಯುಕ್ತ ವಿನೂತನ ಡೆಕೊರೇಷನ್​ ಮಾಡಲಾಗಿದೆ. ಇಲ್ಲಿ ಪ್ರಿಕಾಕ್ಷನ್ ತೆಗೆದುಕೊಂಡು ಗ್ರಾಹಕರನ್ನು ಮಾಲ್​ ಒಳಗಡೆ ಬರಲು ಅನುಕೂಲ ಕಲ್ಪಿಸಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *