ಕೊರೊನಾ ತಾಂಡವ: ಗಣರಾಜ್ಯೋತ್ಸವ ಅತಿಥಿಯಾಗಿ ಬೋರಿಸ್ ಜಾನ್ಸನ್ ಬರುವುದು ಅನುಮಾನ!

ಬ್ರಿಟನ್‌ನಲ್ಲಿ ಕೊರೊನಾ ವೈರಸ್ ಹೊಸ ರೂಪಾಂತರದ ಹಾವಳಿ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಂಬರುವ ಗಣರಾಜ್ಯೋತ್ಸವದ(ಜ.26, 2021) ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಭಾರತಕ್ಕೆ ಬರುವುದು ಅನುಮಾನ ಎನ್ನಲಾಗಿದೆ.

ಹೊಸದಿಲ್ಲಿ: ಇಂಗ್ಲೆಂಡ್‌ನಲ್ಲಿ ಕೊರೊನಾ ಹೊಸ ರೂಪಾಂತರ ಹಾವಳಿ ಭಾರೀ ಅನಾಹುತವನ್ನೇ ಸೃಷ್ಟಿಸಿದ್ದು, ಒಂದೊಂದೇ ದೇಶಗಳು ಬ್ರಿಟನ್‌ನಿಂದ ಸಂಪರ್ಕ ಕಡಿದುಕೊಳ್ಳಲಾರಂಭಿಸಿವೆ.

ಭಾರತ ಕೂಢ ಇಂಗ್ಲೆಂಡ್‌ಗೆ ವಿಮಾನ ಸಂಚಾರ ರದ್ದು ಮಾಡುವ ಮೂಲಕ ಅಂತರ ಕಾಯ್ದುಕೊಂಡಿದೆ. ನೆರೆಯ ದೇಶಗಳಂತೂ ತಮ್ಮ ಗಡಿಯನ್ನೇ ಬಂದ್ ಮಾಡಿ ಇಂಗ್ಲೆಂಡ್‌ನ್ನು ಏಕಾಂಗಿಯನ್ನಾಗಿ ಮಾಡಿವೆ.

ಈ ಮಧ್ಯೆ ಮುಂಬರುವ ಗಣರಾಜ್ಯೋತ್ಸವದ(ಜ.26, 2021) ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಭಾರತಕ್ಕೆ ಬರುವುದು ಅನುಮಾನ ಎನ್ನಲಾಗಿದೆ.

ಈ ಕುರಿತು ಖಾಸಗಿ ಮಾಧ್ಯಮವೊಂದಕ್ಕೆ ಮಾತನಾಡಿರುವ ಬ್ರಿಟಿಷ್ ವೈದ್ಯಕೀಯ ಸಂಘ ಪರಿಷತ್ತಿನ ಅಧ್ಯಕ್ಷ ಡಾ.ಚಾಂದ್ ನಾಗ್ಪಾಲ್, ಬ್ರಿಟನ್‌ನ ಸದ್ಯದ ಪರಿಸ್ಥಿತಿಯನ್ನು ಗಮನಿಸುವುದಾದರೆ ಬೋರಿಸ್ ಜಾನ್ಸನ್ ಭಾರತಕ್ಕೆ ಬರುವುದು ಅನುಮಾನ ಎಂದು ಹೇಳಿದ್ದಾರೆ.

ಅದಾಗ್ಯೂ ಬ್ರಿಟಿಷ್ ಸರ್ಕಾರ ಏನು ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದ್ದು, ಸೋಂಕು ಪ್ರಮಾಣ ಇದೇ ರೀತಿ ಮುಂದುವರೆದರೆ ಬೋರಿಸ್ ಜಾನ್ಸನ್ ಭಾರತಕ್ಕೆ ಬರಲು ಸಾಧ್ಯವಾಗುವುದಿಲ್ಲ ಎಂದು ಡಾ.ಚಾಂದ್ ನಾಗ್ಪಾಲ್ ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ಹೊಸ ರೂಪಾಂತರ ಇಂಗ್ಲೆಂಡ್‌ನಲ್ಲಿ ಆಳವಾಗಿ ಹಬ್ಬಿದೆ. ಇದು ಇಟಲಿ, ಆಸ್ಟ್ರೀಯಾ, ನೆದರ್‌ಲ್ಯಾಂಡ್ ಡೆನ್ಮಾರ್ಕ್‌ನಲ್ಲೂ ಕಾಣಿಸಿಕೊಳ್ಳತೊಡಗಿದೆ.

ಭಾರತದಲ್ಲಿ ಈ ವೈರಾಣು ಹರಡದಂತೆ ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರ್ಕಾರ, ಇಂಗ್ಲೆಂಡ್‌ಗೆ ವಿಮಾನ ಸೇವೆ ರದ್ದು ಹಾಗೂ ಆ ದೇಶದಿಂದ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇಡಲು ಆರಂಭಿಸಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *