ಬಿಜೆಪಿ-ಜೆಡಿಎಸ್​ ಮೈತ್ರಿಯಿಂದ ಇಬ್ಬರಿಗೂ ಯಾವುದೇ ಲಾಭ ಇಲ್ಲ; ಸಿ.ಟಿ.ರವಿ

ಬಿಜೆಪಿಗೆ ಕರ್ನಾಟಕ ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತವಿತ್ತು. 2018ರಲ್ಲಿ ನಾವು 104 ಸ್ಥಾನ ಗೆದ್ದಿದ್ದೆವು. ಆವತ್ತು ಜೆಡಿಎಸ್ ನಮ್ಮ ಜೊತೆ ನಿಂತಿದ್ದರೆ, ಅವತ್ತೆ ಬಿಜೆಪಿ-ಜೆಡಿಎಸ್ ಸರ್ಕಾರ ಸಾಧ್ಯವಾಗುತ್ತಿತ್ತು ಎಂದರು.

ಚಿಕ್ಕಮಗಳೂರು(ಡಿ.24): ಈಗ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ರಾಜಕೀಯ ದೊಡ್ಡ ಲಾಭ ಜೆಡಿಎಸ್​​ಗೂ ಇಲ್ಲ. ಅವರು ಬರದಿದ್ದರೆ ನಮಗೆ ನಷ್ಟವೂ ಇಲ್ಲ. ಆದರೂ ವಿಷಯಾಧಾರಿತ ಬೆಂಬಲ ಅನ್ನೋ ಅವರ ನಿಲುವನ್ನ ನಾನು ಸ್ವಾಗತಿಸುತ್ತೇನೆ. ಅದನ್ನ ಬಿಟ್ಟರೆ ವಿಲೀನದ ಅವಶ್ಯಕತೆ ನಮಗೂ ಇಲ್ಲ. ಅವರಿಗೂ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಡಿಸೆಂಬರ್ 25ರ ಶುಕ್ರವಾರ ಮುಖ್ಯಮಂತ್ರಿ ಯಡಿಯೂರಪ್ಪ ಚಿಕ್ಕಮಗಳೂರಿಗೆ ಆಗಮಿಸುವ ಹಿನ್ನೆಲೆ ಪೂರ್ವಭಾವಿ ಸಿದ್ದತೆ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ಆ ರೀತಿಯ ಯಾವುದೇ ಪ್ರಸ್ಥಾವನೆ ನಮ್ಮ ಪಕ್ಷದ ಮುಂದೆ ಬಂದಿಲ್ಲ. ಭವಿಷ್ಯ ಅದರ ಅವಶ್ಯಕತೆ ಇಲ್ಲ. ಅವರು ಸಮರ್ಥರಿದ್ದಾರೆ. ಸ್ವತಂತ್ರ ಪಾರ್ಟಿ. ಮುಖ್ಯಮಂತ್ರಿ ಕೂಡ ಅದನ್ನ ಸ್ಪಷ್ಟಪಡಿಸಿದ್ದಾರೆ. ಈ ರೀತಿ ಮಾತನಾಡುವುದರಿಂದ ಹಿರಿಯರಾದ ದೇವೇಗೌಡರ ಮನಸ್ಸಿಗೆ ಘಾಸಿಯಾಗತ್ತೆ, ಜೊತೆಗೆ ಇದು ಅನಗತ್ಯವಾಗಿರುವಂತಹ ಚರ್ಚೆ ಎಂದರು.

ದೇಶದ ಪ್ರಶ್ನೆ ಬಂದಾಗ ವಿಷಯಾಧಾರಿತ ಹೊಂದಾಣಿಕೆ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ನಿಲ್ಲಬೇಕು. ನಮ್ಮ ರಾಜಕೀಯ ವೈಚಾರಿಕತೆ ಭಿನ್ನತೆ ಬಂದಾಗ ಎದುರಾಗಿ ನಿಲ್ಲಬೇಕು. ದೇಶದ ಪ್ರಶ್ನೆ ಬಂದಾಗ ಒಟ್ಟಾಗಿ ನಿಲ್ಲುವುದು ನಮ್ಮ ಧರ್ಮ. ಅದನ್ನ ಎಲ್ಲಾ ರಾಜಕೀಯ ಪಕ್ಷಗಳು ಪಾಲಿಸಬೇಕು. ಕೆಲವು ರಾಜಕೀಯ ಪಕ್ಷಗಳು ದೇಶದ ಪ್ರಶ್ನೆ ಬಂದಾಗಲೂ ಎದುರಾಗಿ ರಾಜಕೀಯ ವಿರೋಧದಕ್ಕೆ ನಿಲ್ಲುತ್ತವೆ. ಅದು ಅಪಾಯಕಾರಿ. ನಾವು ಜೆಡಿಎಸ್ನಿಂದ ನಿರೀಕ್ಷೆ ಮಾಡೋದು ಸಮುದಾಯ ಹಾಗೂ ದೇಶದ ಹಿತದ ಪ್ರಶ್ನೆ ಬಂದಾಗ ನೀವು ನಮ್ಮ ಜೊತೆ ನಿಂತುಕೊಳ್ಳಿ ಅನ್ನೋದಷ್ಟೆ ಎಂದರು.

ಬಿಜೆಪಿಗೆ ಕರ್ನಾಟಕ ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತವಿತ್ತು. 2018ರಲ್ಲಿ ನಾವು 104 ಸ್ಥಾನ ಗೆದ್ದಿದ್ದೆವು. ಆವತ್ತು ಜೆಡಿಎಸ್ ನಮ್ಮ ಜೊತೆ ನಿಂತಿದ್ದರೆ, ಅವತ್ತೆ ಬಿಜೆಪಿ-ಜೆಡಿಎಸ್ ಸರ್ಕಾರ ಸಾಧ್ಯವಾಗುತ್ತಿತ್ತು ಎಂದರು. ಅವರು ಅವತ್ತು ನಮ್ಮ ಜೊತೆ ನಿಲ್ಲಲ್ಲಿಲ್ಲ. ಒಬ್ಬರ ಜೊತೆ ಒಬ್ಬರು ಹೋಗಿ ಜೆಡಿಎಸ್-ಕಾಂಗ್ರೆಸ್ ಸರ್ಕಾರ ರಚಿಸಿದರು. ಅದು ಜನಾದೇಶಕ್ಕೆ ವಿರುದ್ಧವಾಗಿತ್ತು. ಕಾಂಗ್ರೆಸ್ ವಿರುದ್ಧ ಜನಮತವಿತ್ತು. ಮುಖ್ಯಮಂತ್ರಿ ಆಗಿದ್ದೋರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುತ್ತಾರೆ. ಕ್ಲಿಯರ್ ಮೆಜಾರಿಟಿಯಿಂದ 80 ಸ್ಥಾನಕ್ಕೆ ಇಳಿಯುತ್ತಾರಂದ್ರೆ ಜನಾದೇಶವೂ ಅವರಿಗೆ ವಿರುದ್ಧವಾಗಿತ್ತು. ಆದರೂ ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚಿಸಿದ್ದರು. ಅದರ ಪ್ರತಿಫಲವನ್ನ ಲೋಕಸಭೆ ಚುನಾವಣೆಯಲ್ಲಿ ಅನುಭವಿಸಿದರು ಎಂದು ಟೀಕಿಸಿದರು.

ಇಬ್ಬರಿಗೂ ಬಂದದ್ದು ಒಂದೊಂದೇ ಸ್ಥಾನ. ಅದು ಕೂಡ ಜನಾದೇಶ. ಅಲ್ಲಿಂದ ರಾಜೀನಾಮೆ ಕೊಟ್ಟು ಬಂದವರಲ್ಲಿ 14 ಜನ ಗೆದ್ದರು. ಇದು ನಮ್ಮ ಪಕ್ಷ ತೆಗೆದುಕೊಂಡ ನಿರ್ಧಾರಕ್ಕೆ ಜನ ಕೊಟ್ಟ ಸಮರ್ಥನೆ ಎಂಬುದು ನನ್ನ ಭಾವನೆ ಎಂದರು.

ಇನ್ನು ಕೊರೋನಾ ಎರಡನೇ ಅಲೆ ಬ್ರಿಟನ್ನನ್ನ ಕಾಡುತ್ತಿರೋ ಹಿನ್ನೆಲೆ ಎಚ್ಚರ ವಹಿಸಬೇಕು. ಆದರೆ, ಹೆದರಬೇಕಾದ ಅವಶ್ಯಕತೆ ಇಲ್ಲ ಎಂದು ನನಗೆ ಅನ್ನಿಸುತ್ತೆ ಎಂದರು. ಈಗಾಗಲೇ ತಜ್ಞರು ಹೇಳಿರುವ ವರದಿ ಪ್ರಕಾರ ಇಲ್ಲಿಗೆ ಅದು ಬಹಳ ಹಾನಿ ಮಾಡೋದಿಲ್ಲ. ಈಗಿರೋ ಚಿಕಿತ್ಸೆಯಲ್ಲಿ ನಿಯಂತ್ರಣಕ್ಕೆ ತರಬಹುದು ಎಂದಿದ್ದಾರೆ. ಆದರೆ ಎಚ್ಚರ ವಹಿಸಲೇಬೇಕು. ಮಾಸ್ಕ್ ಹಾಕೋದು, ಅಂತರ ಕಾಪಾಡೋದು, ಸ್ಯಾನಿಟೈಸರ್ ಹಾಕಿಕೊಳ್ಳೋ ಎಚ್ಚರ ವಹಿಸಬೇಕು. ತೀರಾ ಭಯಬೀಳಬೇಕಾದ ಅವಶ್ಯಕತೆ ಇಲ್ಲ ಅಂತ ನನಗೆ ಅನ್ನಿಸುತ್ತದೆ ಎಂದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *