PM Kissan: ಪಿಎಂ ಕಿಸಾನ್​ ಯೋಜನೆಯ ಮುಂದಿನ ಕಂತಿನ 18 ಸಾವಿರ ಕೋಟಿ ರೂ ಹಣ ಬಿಡುಗಡೆ

ಪ್ರಧಾನ ಮಂತ್ರಿ ಕಿಸಾನ್​ ಸಮ್ಮಾನ್ ನಿಧಿಯ ಮುಂದಿನ ಕಂತಿನ 18, 000 ಕೋಟಿ ರೂ ಹಣವನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ

ನವದೆಹಲಿ : ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡುವಂತೆ ರೈತರು ದೆಹಲಿಯ ಗಡಿಯಲ್ಲಿ ಕಳೆದ 28 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಧ್ಯೆಯೇ ಕೇಂದ್ರ ಸರ್ಕಾರ ರೈತರಿಗೆ ಸಿಹಿ ಸುದ್ದಿ ನೀಡಿದೆ.  ಪ್ರಧಾನ ಮಂತ್ರಿ ಕಿಸಾನ್​ ಸಮ್ಮಾನ್ ನಿಧಿ ಯೋಜನೆಯ ಮುಂದಿನ ಕಂತಿನ 18, 000 ಕೋಟಿ ರೂ ಹಣವನ್ನು ಬಿಡುಗಡೆ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂದಾಗಿದ್ದಾರೆ. ಈ ಹಣವನ್ನು ಇನ್ನೆರಡು ದಿನದಲ್ಲಿ ಅಂದರೆ ಡಿ. 25ರಂದು ಬಿಡುಗಡೆ ಮಾಡುವುದಾಗಿ ಪ್ರಧಾನಿ ತಿಳಿಸಿದ್ದಾರೆ. ಈ ಹಣವನ್ನು ಪ್ರಧಾನಿಗಳು ಕಾನ್ಫರೆನ್ಸ್​ ಮೂಲಕ ಶುಕ್ರವಾರ ಮಧ್ಯಾಹ್ನ ಬಿಡುಗಡೆ ಮಾಡಲಿದ್ದಾರೆ. ಈ ವೇಳೆ ಆರು ರಾಜ್ಯಗಳ ರೈತರೊಂದಿಗೆ ಪ್ರಧಾನಿಗಳು ಸಂವಾದ ನಡೆಸಲಿದ್ದಾರೆ ಎಂದು ಪ್ರಧಾನಿ ಕಚೇರಿ ಮೂಲ ತಿಳಿಸಿದೆ.

ಈ ಕಾನ್ಫರೆನ್ಸ್​ನಲ್ಲಿ ರೈತರು ಪ್ರಧಾನ ಮಂತ್ರಿ ಜೊತೆ ಪಿಎಂ ಕಿಸಾನ್​ ಯೋಜನೆಯ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಈ ವೇಳೆ ಸರ್ಕಾರ ರೈತರ ಅಭಿವೃದ್ಧಿಗೆ ಕೈಗೊಂಡ ಹಲವರು ಕ್ರಮಗಳ ಕುರಿತ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್​ ತೋಮರ್​ ಕೂಡ ಉಪಸ್ಥಿತರಿರಲಿದ್ದಾರೆ.

ಪಿಎಂ ಕಿಸಾನ್​ ಸಮ್ಮನ್​ ನಿಧಿ ಯೋಜನೆಯ 7 ನೇ ಕಂತಿನ ಹಣ ಇದಾಗಿದೆ. ರೈತರಿಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಯೋಜನೆ ಇದಾಗಿದೆ. 9 ಕೋಟಿಗಿಂತಲೂ ಹೆಚ್ಚಿನ ರೈತರು ಈ ಯೋಜನೆ ಫಲಾನುಭವಿಗಳಾಗಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಕೇಂದ್ರ ಸರ್ಕಾರದ ಈ ಯೋಜನೆ ಶೇ 100ರಷ್ಟು ಸರ್ಕಾರದಿಂದ ಧನಸಹಾಯ ರೈತರಿಗೆ ಸಿಗಲಿದೆ.

ಈ ಯೋಜನೆ ಅಡಿ ಅರ್ಹ ಫಲಾನುಭವಿಗಳು ವಾರ್ಷಿಕವಾಗಿ 6,000 ರೂ ಧನ ಸಹಾಯ ಪಡೆಯುತ್ತಾರೆ. ಮೂರು ಕಂತುಗಳಲ್ಲಿ ತಲಾ 2000 ರೂ ನಂತೆ ಹಣ ನೀಡಲಾಗುವುದು. ಸಣ್ಣ ಮತ್ತು 2 ಹೆಕ್ಟೇರ್​ವರೆಗೆ ಭೂಮಿ ಹೊಂದಿರುವ ಭೂ ಮಾಲೀಕರು ಈ ಯೋಜನೆ ಲಾಭಾ ಪಡೆಯಬಹುದಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *