ಮುಖ್ಯರಸ್ತೆ ಸಂಪೂರ್ಣ ಕೆಸರುಮಯ , ರಸ್ತೆ ಮಧ್ಯದ ತಗ್ಗು ಗುಂಡಿಗಳಲ್ಲಿ ನಿಂತಿರುವ ಚರಂಡಿ ನೀರು, ಕೆಸರಿಲ್ಲದ ಜಾಗ ಹುಡುಕಿ ಪ್ರಯಾಸಪಟ್ಟು ಸಾಗುವ ದುಸ್ಥಿತಿಯಲ್ಲಿ ನಾಗರಿಕರು..
ಕಲಬುರ್ಗಿ: ರಸ್ತೆ ಮಧ್ಯದ ತಗ್ಗು ಗುಂಡಿಗಳಲ್ಲಿ ನಿಂತಿರುವ ಚರಂಡಿ ನೀರು, ಅದರಲ್ಲೇ ಸಂಚರಿಸುವ ವಾಹನ, ಇಡೀ ರಸ್ತೆಯಲ್ಲಿ ಕೆಸರಿಲ್ಲದ ಜಾಗ ಹುಡುಕಿ ಪ್ರಯಾಸಪಟ್ಟು ಸಾಗುವ ದುಸ್ಥಿತಿಯಲ್ಲಿ ವಿದ್ಯಾರ್ಥಿಗಳು, ನಾಗರಿಕರು..
ಕಲಬುರ್ಗಿ ನಗರದ ಹಾಗರಗಾ ಕ್ರಾಸ್ ಬಳಿಯ ಉಮರ್ ಕಾಲೊನಿಯ ದುಸ್ಥಿತಿ ಇದು. ಇಲ್ಲಿನ ಲಿಟಲ್ ಏಂಜಲ್ಸ್ ಪಬ್ಲಿಕ್ ಸ್ಕೂಲ್ ಪಕ್ಕದ ಮುಖ್ಯರಸ್ತೆಯು ಸಂಪೂರ್ಣ ಕೆಸರುಮಯವಾಗಿದ್ದು, ಸಾರ್ವಜನಿಕರು ಸಂಚರಿಸಲು ಪರದಾಡುವಂತಾಗಿದೆ.