Mutant CoronaVirus: ದೆಹಲಿಯಲ್ಲಿ ಅಡ್ರೆಸ್​ ನೀಡದೆ ಎಸ್ಕೇಪ್ ಆಗಿರುವ ಬ್ರಿಟನ್ ಪ್ರಯಾಣಿಕರು; ಸರ್ಕಾರ ಕಂಗಾಲು

ಕಳೆದ ವಾರ ಬ್ರಿಟನ್​ನಿಂದ ದೆಹಲಿಗೆ ಸುಮಾರು 14000 ಪ್ರಯಾಣಿಕರು ಆಗಮಿಸಿದ್ದಾರೆ. ಆದರೆ, ಈ ಪೈಕಿ 3900 ಜನರ ಮಾಹಿತಿಯೇ ಇಲ್ಲ. ಈ ನಡುವೆ ರಾಷ್ಟ್ರ ರಾಜಧಾನಿಯಲ್ಲಿ Mutant ಕೊರೋನಾ ವೈರಸ್​ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ದೇಶದ 20 ಜನರ ಪೈಕಿ ದೆಹಲಿ ಲ್ಯಾಬಿನಲ್ಲೇ 8 ಕೇಸ್ ಪತ್ತೆಯಾಗಿದೆ.

ನವ ದೆಹಲಿ (ಡಿಸೆಂಬರ್​ 31); ಭಾರತದಲ್ಲಿ ಇಂಗ್ಲೆಂಡ್​ನಿಂದ ಬಂದ ಪ್ರಯಾಣಿಕರಿಂದ (Mutant corona) ಕೊರೋನಾ ಸೋಂಕು ಇದೀಗ ವ್ಯಾಪಕವಾಗಿ ಹರಡುತ್ತಿದೆ. ಭಾರತದಲ್ಲಿ ನಿನ್ನೆ ಒಂದೇ 20,550 ಹೊಸ ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 286 ಜನರು ಸಾವನ್ನಪ್ಪಿದ್ದಾರೆ. ಇನ್ನೂ ಭಾರತದಲ್ಲಿ ಆರಂಭದಲ್ಲಿ 6ರ ಆಸುಪಾಸಿನಲ್ಲಿದ್ದ mutant ಅಂದರೆ ಭಯಾನಕ ರೂಪಾಂತರಿ ಕೊರೋನಾ ಸೋಂಕಿತರ ಸಂಖ್ಯೆ ಇದೀಗ 20ನ್ನು ಧಾಟಿ ಏರಿಕೆಯಾಗುತ್ತಿದೆ. ಕರ್ನಾಟಕದಲ್ಲೂ 7 ಜನರಲ್ಲಿ ಈ ಸೋಂಕು ಪತ್ತೆಯಾಗಿದೆ. ಹೀಗಾಗಿ, ಭಾರತದಲ್ಲಿ ಇಂಗ್ಲೆಂಡ್​ನ ವಿಮಾನಗಳ ಮೇಲೆ ಡಿ. 31ರವರೆಗೆ ಹೇರಲಾಗಿದ್ದ ನಿಷೇಧವನ್ನು ಜನವರಿ 7ರವರೆಗೆ ವಿಸ್ತರಿಸಲಾಗಿದೆ. ಆದರೆ, ಈ ನಡುವೆ ಇಂಗ್ಲೆಂಡ್​ನಿಂದ ಭಾರತಕ್ಕೆ ಬಂದ ಪ್ರಯಾಣಿಕರು ತಮ್ಮ ಸರಿಯಾದ ವಿಳಾಸ ಮತ್ತು ಮೊಬೈಲ್​ ನಂಬರ್​ ನೀಡದೆ ಕಾಣೆಯಾಗಿದ್ದಾರೆ. ಹೀಗಾಗಿ ಇವರನ್ನು ಹುಡುಕುವುದೇ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಕಳೆದ ವಾರ ಬ್ರಿಟನ್​ನಿಂದ ದೆಹಲಿಗೆ ಸುಮಾರು 14000 ಪ್ರಯಾಣಿಕರು ಆಗಮಿಸಿದ್ದಾರೆ. ಆದರೆ, ಈ ಪೈಕಿ 3900 ಜನರ ಮಾಹಿತಿಯೇ ಇಲ್ಲ. ಈ ನಡುವೆ ರಾಷ್ಟ್ರ ರಾಜಧಾನಿಯಲ್ಲಿ Mutant ಕೊರೋನಾ ವೈರಸ್​ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ದೇಶದ 20 ಜನರ ಪೈಕಿ ದೆಹಲಿ ಲ್ಯಾಬಿನಲ್ಲೇ 8 ಕೇಸ್ ಪತ್ತೆಯಾಗಿದೆ. ಹೀಗಾಗಿ ಬ್ರಿಟನ್​ನಿಂದ ಬಂದ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲು ದೆಹಲಿ ಸರ್ಕಾರ ಮುಂದಾಗಿದೆ.

ಆದರೆ, ಬ್ರಿಟನ್​ ಪ್ರಯಾಣಿಕರನ್ನು ಕ್ವಾರಂಟೈನ್​ ಮಾಡಲು ದೆಹಲಿ ಸರ್ಕಾರದ ಬಳಿ ಅವರ ಮಾಹಿತಿಯೇ ಇಲ್ಲ. ಸುಮಾರು 3900 ಪ್ರಯಾಣಿಕರು ಸರಿಯಾದ ಮಾಹಿತಿ ನೀಡದೆ ಎಸ್ಕೇಪ್ ಆಗಿದ್ದಾರೆ. ಹೀಗಾಗಿ ಬ್ರಿಟನ್ ನಿಂದ ಬಂದವರ ಮಾಹಿತಿ ಸಿಗದೆ ಸರ್ಕಾರ ಕಂಗಾಲಾಗಿದೆ. ಅಲ್ಲದೆ, ಶೀಘ್ರದಲ್ಲಿ ಬ್ರಿಟನ್ ನಿಂದ ಬಂದವರನ್ನು ಪತ್ತೆ ಹಚ್ಚುವಂತೆ ಎಲ್ಲಾ ಜಿಲ್ಲಾಡಳಿತಗಳಿಗೆ ದೆಹಲಿ ಸರ್ಕಾರ ಸೂಚನೆ ನೀಡಿದೆ.

ಇದಲ್ಲದೆ, ಕೊರೋನಾ ವೈರಸ್​ ಹರಡುವುದನ್ನು ತಡೆಯುವ ಸಲುವಾಗಿ ದೆಹಲಿ ಸರ್ಕಾರ ಇಂದಿನಿಂದ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಹೊಸ ವರ್ಷದ ಸಂಭ್ರಮಾಚರಣೆಗೆ ಈ ಮೂಲಕ  ಬ್ರೇಕ್ ನೀಡಲು ಮುಂದಾಗಿದೆ. ಈ ಪ್ರಕಾರ 5ಕ್ಕಿಂತ ಹೆಚ್ಚು ಜನ ಒಂದೆಡೆ ಸೇರುವಂತಿಲ್ಲ, ಯಾವುದೇ ಕಾರ್ಯಕ್ರಮ ಆಯೋಜಿಸುವಂತಿಲ್ಲ, ಜನವರಿ 1ರ ರಾತ್ರಿ ಕೂಡ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ತಿಳಿದುಬಂದಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *